ನವದೆಹಲಿ : ಕುಸ್ತಿ ಪಟು ಸಾಕ್ಷಿ ಮಲಿಕ್ ಅವರು ರಿಯೋ ಒಲಿಂಪಿಕ್ಸ್ನಲ್ಲಿ ಗುರುವಾರ ಭಾರತಕ್ಕೆ ಕಂಚಿನ ಪದಕವನ್ನು ತಂದುಕೊಟ್ಟಿದ್ದಾರೆ. ಅವರ ಈ ಸಾಧನೆಯನ್ನು ಇಡೀ ಭಾರತವೇ ಸಂಭ್ರಮಿಸಿದೆ.
ಅಭಿನವ್ ಬಿಂದ್ರಾ, ದೀಪಾ ಕರ್ಮಾಕರ್ ಫೈನಲ್ ಸಮೀಪಕ್ಕೆ ಬಂದು ಸೋತ ಬಳಿಕ ಸಮಸ್ತ ಭಾರತೀಯರು ನೋವು ಪಟ್ಟುಕೊಂಡಿದ್ದರು. ಆದರೆ ಆ ನೋವನ್ನು ಕಂಚು ಪದಕ ಗೆಲ್ಲುವ ಮೂಲಕ ಸಾಕ್ಷಿ ದೂರ ಮಾಡಿದ್ದಾರೆ.
ಆದರೆ ಪಾಕ್ ಪತ್ರಕರ್ತನೊಬ್ಬನಿಗೆ ಭಾರತೀಯರ ಈ ಸಂಭ್ರಮವನ್ನು ಅರಗಿಸಿಕೊಳ್ಳಲು ಕಷ್ಟವಾಗಿದೆ ಎಂದೆನಿಸುತ್ತದೆ. ಅದಕ್ಕಾಗಿ ಆತ ಭಾರತೀಯರ ವಿರುದ್ಧ ವ್ಯಂಗ್ಯವಾಡಿದ್ದಾನೆ.
ಒಮರ್ ಖುರೇಷಿ ಎಂಬ ಪಾಕ್ ಪತ್ರಕರ್ತ ಟ್ವಿಟರ್ನಲ್ಲಿ ‘ಭಾರತ ರಿಯೋಗೆ ಕಳುಹಿಸಿದ 119 ಕ್ರೀಡಾಳುಗಳ ಪೈಕಿ ಒಬ್ಬಳು ಪದಕ ಗೆದ್ದಿದ್ದಾಳೆ. ಅದೂ ಕಂಚು. ಒಂದು ವೇಳೆ ಭಾರತ 20 ಚಿನ್ನದ ಪದಕ ಗೆದ್ದಿದ್ದರೆ ಹೇಗೆ ಸಂಭ್ರಮಿಸುತ್ತಿತ್ತೋ’ ಎಂದಿದ್ದಾನೆ.
ಈ ಟ್ವಿಟರ್ ಹಲವಾರು ಭಾರತೀಯರನ್ನು ಕೆರಳಿಸಿದೆ.
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಈ ಟ್ವೀಟ್ಗೆ ತಕ್ಕ ಪ್ರತಿಕ್ರಿಯೆಯನ್ನು ನೀಡಿದ್ದು, ‘ಆಕೆ ಗೆದ್ದಿರುವ ಕಂಚು ನನಗೆ 1000 ಚಿನ್ನಕ್ಕೆ ಸಮಾನ. ಅಲ್ಲದೆ ಅದಕ್ಕಿಂತಲೂ ಮಿಗಿಲು. ಸಾಕ್ಷಿ ಬಗ್ಗೆ ನಮಗೆ ಹೆಮ್ಮೆ ಇದೆ. ಆಕೆ ಭಾರತೀಯಳು ಮತ್ತು ಮಹಿಳೆಯಾಗಿರುವುದಕ್ಕೆ ನಮಗೆ ಇನ್ನೂ ಹೆಚ್ಚಿನ ಹೆಮ್ಮೆ ಇದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.