ನವದೆಹಲಿ : ರಕ್ಷಾಬಂಧನದ ಶುಭದಿನವಾದ ಗುರುವಾರ ವೃಂದಾವನ, ವಾರಣಾಸಿಯ ವಿಧವೆಯರು ರಾಷ್ಟ್ರ ರಾಜಧಾನಿ ನವದೆಹಲಿಗೆ ಆಗಮಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ.
2000 ವಿಧವೆಯರ ಪ್ರತಿನಿಧಿಗಳಾಗಿ ಒಟ್ಟು 10 ವಿಧವೆಯರು ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ರಕ್ಷೆಯನ್ನು ಕಟ್ಟಿದ್ದಾರೆ. ಅಷ್ಟೇ ಅಲ್ಲದೆ, ಸಾವಿರ ರಾಖಿಗಳನ್ನು ವಿಧವೆಯವರ ವತಿಯಿಂದ ಮೋದಿಯವರಿಗೆ ಕಳುಹಿಸಿಕೊಡಲಾಗಿದೆ.
ದೇಶದ ಸುರಕ್ಷತೆ ಮತ್ತು ವಿಧವೆಯರಿಗೆ ಉತ್ತಮ ಸೌಲಭ್ಯವನ್ನು ಒದಗಿಸುವ ಭರವಸೆಯನ್ನು ನಮಗೆ ನೀಡುವಂತೆ ರಾಖಿ ಕಟ್ಟಿದ ಬಳಿಕ ವಿಧವೆಯರು ಮೋದಿಗೆ ಮನವಿ ಮಾಡಿದ್ದಾರೆ.
ಇದೇ ವೇಳೆ ವೃಂದಾವನದ ವಿಧವೆಯರು ತಮ್ಮ ಬಾಳಲ್ಲಿ ಸಂತಸ ತಂದ ಸುಲಭ್ ಇಂಟರ್ನ್ಯಾಷನಲ್ ಸಂಸ್ಥೆಗೆ ಧನ್ಯವಾದ ಸಲ್ಲಿಸಿದ್ದಾರೆ.
ಹೋಲಿ, ದೀಪಾವಳಿ, ತೇಜ್ನಂತಹ ಹಬ್ಬಗಳನ್ನು ಆಚರಿಸಲು ಸುಲಭ್ ಸಂಸ್ಥೆ ಇವರಿಗೆ ಅವಕಾಶವನ್ನು ಕಲ್ಪಿಸಿದೆ. ಈ ಹಬ್ಬಗಳನ್ನು ಆಚರಿಸದಂತೆ ಹಿಂದೆ ಇವರಿಗೆ ನಿರ್ಬಂಧವನ್ನು ಹೇರಲಾಗಿತ್ತು.
ಈ ಬಾರಿ ಇವರು ಸಾಧು, ಸಂತರು, ಸಂಸ್ಕೃತ ಪಂಡಿತರ ಕೈಗೆ ರಕ್ಷೆ ಕಟ್ಟುವುದು ಮಾತ್ರವಲ್ಲ, ಉಚ್ಛ ಜಾತಿಯ ಸಾಧು, ಬ್ರಾಹ್ಮಣರೊಂದಿಗೆ ಊಟವನ್ನೂ ಮಾಡಲಿದ್ದಾರೆ.
‘ಪ್ರಧಾನಿ ನರೇಂದ್ರಮೋದಿಯವರಿಗೆ ಸಾವಿರ ರಾಖಿಯನ್ನು ಕಳುಹಿಸಿ ಕೊಡುವ ಮತ್ತು ದೆಹಲಿಯ ಅವರ ನಿವಾಸಕ್ಕೆ 10 ವಿಧವೆಯರು ಭೇಟಿ ಕೊಡುವ ಯೋಜನೆಯನ್ನು ಈ ರಕ್ಷಾಬಂಧನದಂದು ಹಮ್ಮಿಕೊಳ್ಳಲಾಗಿದೆ ಎಂದು ಸುಲಭ್ ಇಂಟರ್ನ್ಯಾಷನಲ್ನ ಬಿಂದೇಶ್ವರ್ ಪಾಠಕ್ ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.