ಕೋಲ್ಕತಾ: ಮಾರುತಿ ಸುಝುಕಿ ತನ್ನ ಕಾರುಗಳನ್ನು ಗಂಗಾ ನದಿಯ ಮೂಲಕ ವಾರಣಾಸಿಯಿಂದ 1,620 ಕಿ.ಮೀ. ದೂರದ ಹಾಲ್ದಿಯಾಗೆ ದೋಣಿಗಳಲ್ಲಿ ಸಾಗಿಸುತ್ತಿದ್ದು, ಸಾಗಣೆ ವೆಚ್ಚದಲ್ಲಿ ಉಳಿತಾಯ ಮಾಡತ್ತಿದೆ.
ಆಲಮಾರ್ಗದ ಮೂಲಕ ಮಾರುತಿ ಸುಝುಕಿ ಕಾರುಗಳ ಸಾಗಾಟದಿಂದ ಪ್ರತಿ ಕಾರಿನ ಮೇಲೆ ರೂ.4000 ಉಳಿತಾಯವಾಗಲಿದೆ ಎಂದು ಇಂಡಿಯನ್ ವಾಟರ್ವೇಸ್ ಅಥಾರಿಟಿ ಆಫ್ ಇಂಡಿಯಾ ಅಧ್ಯಕ್ಷ ಅಮಿತಾಭ್ ವರ್ಮಾ ಹೇಳಿದ್ದಾರೆ.
ಜಲ್ ಮಾರ್ಗ್ ವಿಕಾಸ್ ಯೋಜನೆ ಭಾಗವಾಗಿ ವಾರಣಾಸಿಯಿಂದ ಹಾಲ್ದಿಯಾ ನಡುವೆ ಜಲ ಸಾರಿಗೆ ವ್ಯವಸ್ಥೆ ನಿರ್ಮಿಸಲಾಗಿದ್ದು, ಮಾರುತಿ ಸುಝುಕಿ ಅಲ್ಲದೆ ಇತರ ಕಂಪೆನಿಗಳಾದ ಹೋಂಡಾ ಮೋಟಾರ್ಸ್ ಕೂಡ ಈ ಮಾರ್ಗವನ್ನು ಬಳಸುತ್ತಿವೆ.
ಈ ಯೋಜನೆಗೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಆಗಸ್ಟ್ ೧೨ರಂದು ಚಾಲನೆ ನೀಡಿದ್ದು, ರಸ್ತೆ ಸಾರಿಗೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳ ಸಾಗಾಟಕ್ಕೆ ಅನುಕೂಲವಾಗಲಿದೆ.
ಒಂದು ಟ್ರೈಲರ್ ರಸ್ತೆ ಮಾರ್ಗವಾಗಿ ಒಂದು ಬಾರಿಗೆ 6 ಕಾರುಗಳ ಸಾಗಾಟ ಮಾಡುತ್ತಿದ್ದು, ಹಡಗಿನಲ್ಲಿ 150 ಕಾರುಗಳನ್ನು ಸಾಗಿಸಲಾಗುತ್ತದೆ. ಡಬಲ್ ಡೆಕ್ಕರ್ ಹಡಗಿನಲ್ಲಿ 300 ಕಾರುಗಳನ್ನು ಸಾಗಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.