ಭುವನೇಶ್ವರ: ಒರಿಸ್ಸಾದ ಕೊಹಿಂಜೋಹಾರ್ನಲ್ಲಿ ಸೋಮವಾರ ನಡೆದ ಸ್ವಾತಂತ್ರ್ಯೋತ್ಸವದ ಸಂದರ್ಭ ಸಚಿವನೊಬ್ಬ ತನ್ನ ಪರ್ಸನಲ್ ಸೆಕ್ಯೂರಿಟಿ ಆಫೀಸರ್ನಿಂದ ಶೂಲೇಸ್ನ್ನು ಕಟ್ಟಿಸಿಕೊಂಡು ದರ್ಪ ಮೆರೆದಿದ್ದಾನೆ.
ಗಜೇಂದ್ರ ಬೆಹೆರಾ ಎಂಬ ಸಚಿವ ಧ್ವಜಾರೋಹಣವನ್ನು ನೆರವೇರಿಸಿ ಕೆಳಗಿಳಿದ ಬಳಿಕ ಪಿಎಸ್ಒ ಅವರ ಕಾಲಿನ ಶೂಲೇಸ್ ಕಟ್ಟಿದ್ದಾರೆ. ಸರ್ಕಾರಿ ಉದ್ಯೋಗಿಯೊಬ್ಬನಿಂದ ಸಚಿವರು ಈ ಕಾರ್ಯ ಮಾಡಿಸಿದ್ದು ಎಲ್ಲರನ್ನು ಆಕ್ರೋಶಕ್ಕೀಡು ಮಾಡಿದೆ.
ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ದರ್ಪದಿಂದ ಉತ್ತರಿಸಿದ ಸಚಿವರು, ‘ವಿಐಪಿ ಈಗಷ್ಟೇ ಧ್ವಜಾರೋಹಣವನ್ನು ನೆರವೇರಿಸಿದ್ದೇನೆ. ಆದರೆ ಪಿಎಸ್ಒ ಅದನ್ನು ಮಾಡಿಲ್ಲ’ ಎಂದಿದ್ದಾರೆ.
ಒರಿಸ್ಸಾದಲ್ಲಿ ಬ್ರಿಟಿಷ್ ಆಡಳಿತ ಮನಸ್ಥಿತಿ ಇನ್ನೂ ಇದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಅಲ್ಲಿನ ವಕೀಲರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.