ನವದೆಹಲಿ: ಭಾರತದ 70ನೇ ಸ್ವಾತಂತ್ರ್ಯ ದಿನದಂದು ರಾಜಪಥ್ನಲ್ಲಿ ನಡೆದ ‘ಭಾರತ ಪರ್ವ’ ಕಾರ್ಯಕ್ರಮ ಲಕ್ಷಾಂತರ ಮಂದಿಯ ಗಮನ ಸೆಳೆಯಿತು.
ಆರು ದಿನಗಳ ಕಾಲ ನಡೆಯುವ ದೇಶಭಕ್ತಿಯ ಈ ಕಾರ್ಯಕ್ರಮದಲ್ಲಿ ದೇಶದಾದ್ಯಂತ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ವೈವಿದ್ಯಮಯ ತಿಂಡಿ-ತಿನಿಸುಗಳು, ಬಟ್ಟೆ, ಕರಕುಶಲ ವಸ್ತುಗಳ ಪ್ರದರ್ಶನ ಜನರನ್ನು ಒಂದುಗೂಡಿಸಿತು.
ಈವರೆಗೆ ಭಾರತೀಯ ಭೂಸೇನೆ, ವಾಯು ಸೇನೆ, ಜಲ ಸೇನೆ ಇತರ ವಿಭಾಗಗಳ ಪ್ರದರ್ಶನದ ಸರಳ ಸ್ವಾತಂತ್ರ್ಯ ಉತ್ಸವಕ್ಕೆ ಇದು ಹೊಸ ರೂಪ ನೀಡಿತು. ಉತ್ಸವದಲ್ಲಿ ರಾಜ್ಯಗಳ ಕರಕುಶಲ ವಸ್ತು ಪ್ರದರ್ಶನ, ವರ್ಣರಂಜಿತ ಮಳಿಗೆಗಳು, ಬಟ್ಟೆಗಳ ಪ್ರದರ್ಶನಕ್ಕೆ ಸುಮಾರು 3 ಲಕ್ಷ ಮಂದಿ ಆಗಮಿಸಿದ್ದರು. ಸ್ವಾತಂತ್ರ್ಯ ದಿನದ ಅಂಗವಗಿ ಕೇಂದ್ರ ಸರ್ಕಾರದಿಂದ ಈ ರೀತಿಯ ಕಾರ್ಯಕ್ರಮ ನಡೆದಿರುವುದು ಇದೇ ಮೊದಲು ಎಂದು ಅಲ್ಲಿಯ ಭದ್ರತಾ ಪಡೆಗಳು ತಿಳಿಸಿದರು.
ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳ ಚಿತ್ರ ಪ್ರದರ್ಶನ ಅನೇಕ ಪ್ರವಾಸಿಗರ ಗಮನ ಸೆಳೆಯಿತು. ಈ ಸಂದರ್ಭ ಪ್ರವಾಸಿಗರು ಈ ಫೋಟೋಗಳ ಮುಂದೆ ಸೆಲ್ಫಿ ಕ್ಲಿಕ್ಕಿಸಿದರು.
ಚಿತ್ರಪ್ರದರ್ಶನದಲ್ಲಿ ‘ವಿದೇಶ್ ನೀತಿ’ ವಿಭಾಗದ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸ, ಇತರ ರಾಷ್ಟ್ರಗಳ ಅಧ್ಯಕ್ಷರೊಂದಿಗೆ ಮೋದಿ ಅವರು ಇರುವ ಫೋಟೋ, ಭಾರತದ ಮಾಜಿ ಪ್ರಧಾನಿಗಳ ಚಿತ್ರಗಳ ಪ್ರದರ್ಶನ ಮಾಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.