ಕೈರೋ: ಈಜಿಪ್ಟ್ನಲ್ಲಿ ಭಾರತದ ಬಣ್ಣದ ಹಬ್ಬ ‘ಹೋಳಿ’ ಹಬ್ಬಕ್ಕೆ ಕೈರೋದಲ್ಲಿ ಚಾಲನೆ ನೀಡಲಾಯಿತು. ಭಾರತೀಯ ಸಂಸ್ಕೃತಿಯ ಪ್ರೇಮಿಗಳು ಹರ್ಷೋಲ್ಲಾಸದಿಂದ ಹಬ್ಬದಲ್ಲಿ ಪಾಲ್ಗೊಂಡರು.
ಕೈರೋದ ಹವಾಂದಿಯಾ ಜಿಲ್ಲೆಯ ಮೈದಾನದಲ್ಲಿ ಸಾವಿರಾರು ಯುವಕರು, ಯುವತಿಯರು, ಮಕ್ಕಳು ಬಿಳಿ ಉಡುಪುಗಳನ್ನು ಧರಿಸಿ, ಪರಸ್ಪರ ಬಣ್ಣಗಳನ್ನು ಸಿಂಪಡಿಸಿ ರೋಮಾಂಚನಗೊಂಡು ಈಜಿಪ್ಟ್ ಮಾದರಿಯಲ್ಲಿ ಹೋಳಿ ಆಚರಿಸಿದರು ಎಂದು ಕ್ಸಿಂಹುವಾ ವರದಿ ಮಾಡಿದೆ.
ಕೈರೋದ ಹಲವು ಸ್ನೇಹಿತರಿಗೆ ಇದು ತಮ್ಮ ಸಂತೋಷ ಹಂಚಿಕೊಳ್ಳಲು ಆಯ್ದ ಸ್ಥಳವಾಗಿದೆ. ಭಾರತೀಯ ಸಂಸ್ಕೃತಿಯನ್ನು ಬೆಂಬಲಿಸುವ ಈಜಿಪ್ಟ್ ಜನತೆಗೆ ಭಾರತೀಯ ಹಬ್ಬವನ್ನು ಆಚರಿಸಲು ಇದೊಂದು ಉತ್ತಮ ಅವಕಾಶವಾಗಿದೆ.
18 ವರ್ಷದ ಯಾರಾ ಮೊಹಮ್ಮದ್ ಭಾರತೀಯ ಸಂಸ್ಕೃತಿಯಯಲ್ಲಿ ಆಸಕ್ತಿ ಹೊಂದಿದ್ದು, ಫೇಸ್ಬುಕ್ನಲ್ಲಿ ಹೋಳಿ ಹಬ್ಬದ ಕುರಿತು ಓದಿದ್ದರು. ನಾನು ಭಾರತ ಮತ್ತು ಭಾರತೀಯ ಸಿನಿಮಾ, ಸಂಗೀತವನ್ನು ಪ್ರೀತಿಸುತ್ತೇನೆ. ನಾನು ಭಾರತೀಯ ನೃತ್ಯವನ್ನು ಗೌರವಿಸುತ್ತೇನೆ. ನಾನು ಈವತ್ತು ಭಾರತದಲ್ಲೇ ಇದ್ದಂತೆ ಭಾಸವಾಗುತ್ತದೆ ಎಂದು ಯಾರಾ ಹೇಳಿದ್ದಾರೆ.
ಅನೇಕ ಭಾರತೀಯರು, ವಿದೇಶೀಯರು ಹೋಳಿ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಾಚರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.