ನವದೆಹಲಿ : ರೈಲ್ವೇಯನ್ನು ಹೆಚ್ಚು ಹೆಚ್ಚು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ರೈಲ್ವೇ ಇಲಾಖೆ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ. ಇದೀಗ ಪ್ರಯಾಣಿಕರಿಗೆ ರೈಲು ಪ್ರಯಣದ ಸುಂದರ ಸವಿನೆನಪುಗಳನ್ನು ಮತ್ತು ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಅದು ಹೇಳಿದೆ.
ಹ್ಯಾಶ್ಟ್ಯಾಗ್ #MyTrainStory ರೈಲು ಪ್ರಯಾಣದ ಅನುಭವಗಳನ್ನು ವೀಡಿಯೋ, ಕಥೆ, ಚಿತ್ರಗಳ ಮೂಲಕ ಹಂಚಿಕೊಳ್ಳುವಂತೆ ಜನಸಾಮಾನ್ಯರಿಗೆ ಮನವಿ ಮಾಡಲಾಗಿದೆ ಎಂದು ರೈಲ್ವೇ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಭಾರತದಲ್ಲಿ ಪ್ರತಿನಿತ್ಯ 23 ಮಿಲಿಯನ್ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇದರರ್ಥ ದಿನಕ್ಕೆ 20 ಮಿಲಿಯನ್ ಕಥೆಗಳು ರೈಲಿನಲ್ಲಿ ನಡೆಯುತ್ತದೆ. ರೈಲ್ವೇ ಮತ್ತು ಪ್ರಯಾಣ ಜನಸಾಮಾನ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ಮೊದಲ ರೈಲು ಪ್ರಯಾಣ, ರೈಲಿನಲ್ಲಿ ಜೀವನ ಸಂಗಾತಿಯ ಪರಿಚಯ, ಹೊಸಬರ ಪರಿಚಯ, ಹಳೆ ಸ್ನೇಹಿತ ಸಿಕ್ಕಿದ್ದು… ಹೀಗೆ ಮುಂತಾದ ಹಲವು ವೈಯಕ್ತಿಕ ಅನುಭವಗಳು, ಸುಂದರ ನೆನಪುಗಳು ಇದರೊಂದಿಗೆ ಜೋಡಣೆಯಾಗಿರುತ್ತದೆ. ಇದನ್ನೆಲ್ಲಾ ಹಂಚಿಕೊಳ್ಳುವಂತೆ ಅವರು ಕೋರಿದ್ದಾರೆ.
mytrainstory@gmail.com ಗೂ ಸ್ಟೋರಿಯನ್ನು ರವಾನಿಸಬಹುದು. ಇದೊಂದು ವರ್ಷ ಪೂರ್ತಿಯ ಅಭಿಯಾನವಾಗಿದ್ದು, ವಿನ್ನರ್ಗಳಿಗೆ ತಿಂಗಳ ಇ-ಸರ್ಟಿಫಿಕೇಟ್ ನೀಡಲಾಗುತ್ತದೆ. ಟಾಪ್ 3 ವಿನ್ನರ್ಗಳಿಗೆ ರೈಲ್ವೆ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿಯಾಗುವ ಅವಕಾಶವೂ ಇದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.