ನವದೆಹಲಿ : ದಿನಾಂಕ: 8-8-2016 ರಂದು ಲೋಕಸಭೆಯ ಮುಂಗಾರು ಅಧಿವೇಶನದ ಶೂನ್ಯವೇಳೆಯಲ್ಲಿ ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ಇವರು ಕೇರಳದಿಂದ ನಾಪತ್ತೆಯಾಗಿ ಐಸಿಸ್ ಉಗ್ರವಾದಿ ಶಿಬಿರಗಳನ್ನು ಸೇರಲಾಗಿರುವವರ ಪತ್ತೆಗಾಗಿ ಹಾಗೂ ಐಸಿಸ್ ಉಗ್ರವಾದಿಗಳೊಂದಿಗೆ ಕೈಜೋಡಿಸಿರುವವರ ಬಗ್ಗೆ ತೆಗೆದೊಕೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಕೇಂದ್ರ ಸರಕಾರವನ್ನು ಕೋರಿದರು.
ಸದನದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಮಾತನಾಡುತ್ತಾ ಕೇರಳವು ಭಾರತದ ಸುಂದರ ಪ್ರದೇಶಗಳಲ್ಲಿ ಒಂದಾಗಿರುತ್ತದೆ. ಅಲ್ಲಿನ ದಟ್ಟ ಹಸಿರು ಕಾಡುಗಳು, ಬೆಟ್ಟ-ಗುಡ್ಡಗಳು, ನದಿ-ಜಲಪಾತಗಳಿಂದಾಗಿ ದೇವರ ಸ್ವಂತ ನಾಡೆಂದು ಕರೆಸಿಕೊಳ್ಳುತ್ತಿದೆ. ಆದರೆ ಇತ್ತೀಚಿನ ದಿನಗಳಿಲ್ಲಿ ಈ ರಾಜ್ಯದಲ್ಲಿ ಇಸ್ಲಾಮಿಕ್ ಉಗ್ರವಾದವು ನೆಲೆಯೂರುತ್ತಿರುವುದು ಅತ್ಯಂತ ಕಳವಳಕ್ಕೆ ಕಾರಣವಾಗಿದೆ. ಇದರಿಂದಾಗಿ ಕೇರಳ ಮಾತ್ರವಲ್ಲ ಇಡೀ ದೇಶದಲ್ಲಿಯೇ ಆತಂಕ ಸೃಷ್ಟಿಯಾಗಿದೆ. ಇತ್ತೀಚಿನ ದಿನಪತ್ರಿಕೆಗಳಲ್ಲಿ ವರದಿಯಾದಂತೆ ಸುಮಾರು 20 ಕ್ಕೂ ಅಧಿಕ ಯುವಕ ಯುವತಿಯರು ಕಾಣೆಯಾಗಿದ್ದು ಅವರೆಲ್ಲರೂ ಇಸ್ಲಾಮಿಕ್ ಉಗ್ರವಾದಕ್ಕೆ ಸೇರ್ಪಡೆಯಾಗಿರುವುದಾಗಿ ತಿಳಿದುಬಂದಿರುತ್ತದೆ. ಅವರುಗಳಲ್ಲಿ 11 ಜನ ಸಿರಿಯಾದಲ್ಲಿರುವ ಇಸ್ಲಾಮಿಕ್ ಭಯೋತ್ಪಾದನಾ ಶಿಬಿರದಲ್ಲಿರುವುದಾಗಿ ಹೇಳಲಾಗುತ್ತಿದೆ. ಈ ಗುಂಪಿನಲ್ಲಿ ಒಬ್ಬ ವೈದ್ಯ ದಂಪತಿಗಳು, 4 ಜನ ಬಿ.ಟೆಕ್ ಪದವೀಧರರು, 3 ಜನ ಹೆಂಗಸರು ಹಾಗೂ ಇಬ್ಬರು ಮಕ್ಕಳು ಇದ್ದಾರೆಂದು ವರದಿಯಾಗಿದೆ. ಇವರೆಲ್ಲರೂ ಕೇರಳದ ಕಾಸರಗೋಡು ಹಾಗೂ ಪಾಲಕ್ಕಾಡ್ ಜಿಲ್ಲೆಗಳಿಗೆ ಸೇರಿದವರಾಗಿರುತ್ತಾರೆ. ಇವರು ಅಫಘಾನಿಸ್ಥಾನ ಹಾಗೂ ಸಿರಿಯಾಗಳಲ್ಲಿ ಭಯೋತ್ಪಾದಕ ಶಿಬಿರಗಳಲ್ಲಿದ್ದಾರೆಂದು ತಿಳಿದುಬಂದಿದೆ. ಕಾಣೆಯಾಗಿರುವವರಲ್ಲಿನ ಕುಟುಂಬದ ಒಬ್ಬರಿಗೆ ಬಂದಿರುವ ಟೆಲಿಗ್ರಾಂ ಸಂದೇಶದಲ್ಲಿ ಅವರು ದೇವರನಾಡು ತಲುಪಿದ್ದು ಇಸ್ಲಾಮಿಕ್ ರಾಜ್ಯ ಸೇರಿರುವುದಾಗಿ ತಿಳಿಸಿರುತ್ತಾರೆ. ಅವರು ಸಂದೇಶ ಕಳುಹಿಸಿದ ಒಂದು ನಂಬರ್ ಆಪ್ಘಾನಿಸ್ಥಾನದ್ದಾಗಿದೆ ಹಾಗೂ ಮತ್ತೊಂದು ಸಿರಿಯಾದ ಗಡಿ ಭಾಗದ್ದಾಗಿರುತ್ತದೆ ಎಂದು ಹೇಳಲಾಗುತ್ತಿದೆ.
ಈ ನಿಟ್ಟಿನಲ್ಲಿ ನಾನು ಕೇಂದ್ರ ಸರಕಾರವನ್ನು ಒತ್ತಾಯಪಡಿಸುವುದೇನೆಂದರೆ, ಇಸ್ಲಾಮಿಕ್ ಉಗ್ರವಾದವು ಭಾರತದಲ್ಲಿ ಹರಡದಂತೆ ಈ ತಕ್ಷಣವೇ ಅಗತ್ಯಕ್ರಮ ಕೈಗೊಳ್ಳಬೇಕು ಅಲ್ಲದೇ ಈ ಕೃತ್ಯಕ್ಕೆ ಕಾರಣರಾದವರನ್ನು ಗುರುತಿಸಿ ಶಿಕ್ಷೆ ವಿಧಿಸಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸಿರುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.