ಕಾರ್ಕಳ: ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಂತರಾಗಿರಲು ನಾವು ಇನ್ನೊಬ್ಬರಿಗೆ ಮಾಡಿದ ಉಪಕಾರವನ್ನು, ಇನ್ನೊಬ್ಬರು ನಮಗೆ ಮಾಡಿದ ಕೆಡುಕನ್ನು ಯಾವಾಗ ಮರೆಯುತ್ತೇವೋ ಆಗ ನೆಮ್ಮದಿಯಿಂದಿರಲು ಸಾಧ್ಯ. ನಾವು ಮಾಡಿದ ಉಪಕಾರವನ್ನು ನೆನಪಿಸುತ್ತಾ ಬಂದರೆ ಕ್ರಮೇಣ ನಮ್ಮಲ್ಲಿ ಅಹಂಕಾರ ಬೆಳೆಯುತ್ತದೆ. ಇನ್ನೊಬ್ಬರು ಮಾಡಿದ ಕೆಡುಕನ್ನು ನೆನಪಿಸುತ್ತಾ ಹೋದಂತೆ ನಮ್ಮ ಮಾನಸಿಕ ಆರೋಗ್ಯ ಏರುಪೇರಾಗುತ್ತದೆ. ಹೀಗಾಗಿ ಇವೆರಡನ್ನೂ ಮರೆತುಬಿಟ್ಟರೆ ಬದುಕು ಪರಿಪೂರ್ಣ ಮತ್ತು ಸಂತೃಪ್ತವಾಗುತ್ತದೆ ಎಂದು ಹರಿದಾಸ ಅಂಬಾತನಯ ಮುದ್ರಾಡಿಯವರು ಹೇಳಿದ್ದಾರೆ.
ಅವರು ಶ್ರೀ ನಾಗಸ್ಥಾನ ಮತ್ತು ಅಶ್ವತ್ಥಕಟ್ಟೆ ಸೇವಾ ಸಮಿತಿ, ಪರಪ್ಪು ಕುಕ್ಕುಂದೂರು, ಕಾರ್ಕಳ ಇದರ 7ನೇ ವರ್ಷದ ಪ್ರತಿಷ್ಠಾವರ್ಧಂತಿ ಮಹೋತ್ಸವದ ಸಂದರ್ಭ ಶೇಷಾದ್ರಿ ಮಂಟಪದಲ್ಲಿ ಹೊಸಸಂಜೆ ಬಳಗದ ನಿರ್ಮಾಣದ ಅಂಬಾತನಯ ಮುದ್ರಾಡಿಯವರ ನಿರೂಪಿತ ಸತಿ ಸಾವಿತ್ರಿ ಹರಿಕಥೆಯ ವೀಡಿಯೋ ಡಿ.ವಿ.ಡಿ. ಲೋಕಾರ್ಪಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಉದ್ಯಮಿ, ಕಾರ್ಕಳ ಎಪಿಎಂಸಿ ಸದಸ್ಯ ಎಂ. ರಘುಪತಿ ಪೈ ಡಿ.ವಿ.ಡಿ.ಯನ್ನು ಬಿಡುಗಡೆಗೊಳಿಸಿದರು.
ಬೆಂಗಳೂರಿನ ಎಲ್.ಎಮ್. ವಿಂಡ್ಪವರ್ ಬ್ಲೇಡ್ಸ್ ಸಂಸ್ಥೆಯ ಹೆಚ್.ಆರ್. ಚಂದ್ರಹಾಸ ಕೆ., ವಿಜಯಾ ಬ್ಯಾಂಕ್ ನಿವೃತ್ತ ಉದ್ಯೋಗಿ ವೆಂಕಪ್ಪ ಶೆಟ್ಟಿ, ಪತ್ರಕರ್ತ ಕೆ. ಪದ್ಮಾಕರ ಭಟ್, ಅರ್ಚಕ ಶಿವರಾಮ ಭಟ್, ಉದ್ಯಮಿ ಹಾಗೂ ಶ್ರೀ ನಾಗಸ್ಥಾನ ಮತ್ತು ಅಶ್ವತ್ಥಕಟ್ಟೆ ಸೇವಾ ಸಮಿತಿಯ ಖಜಾಂಜಿ ರಾಜೇಶ್ ರಾವ್ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.
ವಿನಯ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಹೊಸಸಂಜೆ ಬಳಗದ ಅಧ್ಯಕ್ಷ ಆರ್. ದೇವರಾಯ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.. ಪ್ರವೀಣ್ ಕುಮಾರ್ ಶೆಟ್ಟಿ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.