ನವದೆಹಲಿ : ರಾಷ್ಟ್ರಪತಿ ಭವನದ ನಿರ್ಮಾಣದಿಂದ ಹಿಡಿದು ಅದರ ಪ್ರತಿಯೊಂದು ಶಿಲ್ಪಕಲೆ ವಸ್ತುಗಳ ಬಗ್ಗೆ, ಅದರ ಇತಿಹಾಸದ ಬಗ್ಗೆ ಕಥೆ ಹೇಳುವ ಹೈಟೆಕ್ ಮ್ಯೂಸಿಯಂ ಸ್ಥಾಪನೆಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಮುಂದಿನವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಉನ್ನತ ಹುದ್ದೆಯನ್ನು ಅಲಂಕರಿಸಿ 4 ವರ್ಷ ಪೂರ್ಣಗೊಳ್ಳುವ ವೇಳೆ ಈ ಹೈಟೆಕ್ ಹೆರಿಟೇಜ್ ಮ್ಯೂಸಿಯಂ ಅನ್ನು ಉದ್ಘಾಟಿಸಲಿದ್ದಾರೆ.
88 ವರ್ಷ ಹಳೆಯ ರಾಷ್ಟ್ರಪತಿ ಭವನದಲ್ಲಿ ಮ್ಯೂಸಿಯಂನ ಎರಡನೇ ಹಂತದ ಕಾರ್ಯ ಮುಕ್ತಾಯವಾಗಿದೆ. ಈ ಮ್ಯೂಸಿಯಂ 10 ಸಾವಿರ ಚ.ಮೀ. ವಿಸ್ತೀರ್ಣದಲ್ಲಿ ಹರಡಿದೆ.
ಇದರ ಮೊದಲ ಹಂತವನ್ನು ಕಳೆದ ವರ್ಷ ಉದ್ಘಾಟಿಸಲಾಗಿತ್ತು.
ಪ್ರಣಬ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಜುಲೈ 25 ರಂದು ಎರಡನೇ ಹಂತವನ್ನು ಮೋದಿ ಉದ್ಘಾಟನೆಗೊಳಿಸಲಿದ್ದಾರೆ.
ಈ ಮ್ಯೂಸಿಯಂ ರಾಷ್ಟ್ರಪತಿ ಭವನದ ಯೋಜನೆ, ನಿರ್ಮಾಣ, 1942 ರಲ್ಲಿ ಇದರಲ್ಲಿ ಬ್ರಿಟಿಷ್ ವೈಸ್ರಾಯ್ನಿಂದ ವಶಪಡಿಸಿಕೊಂಡಿದ್ದು, ಸ್ವಾತಂತ್ರ್ಯ ಚಳವಳಿಗೆ ಅದು ನೀಡಿದ ಪ್ರೇರಣೆ, ಅಧಿಕಾರ ಹಸ್ತಾಂತರ, ಗಣರಾಜ್ಯದ ಸ್ಥಾಪನೆ, 13 ರಾಷ್ಟ್ರಪತಿಗಳ ಜೀವನ ಮತ್ತು ಕಾರ್ಯ, ರಾಷ್ಟ್ರಪತಿ ಭವನದಲ್ಲಿನ ಬದುಕು, ಅದರ ಆವರಣದ ಸೌಂದರ್ಯ, ಪರಿಸರ, ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜನ, ಅಲ್ಲಿ ಆಗಮಿಸುವ ಗಣ್ಯರು, ಈ ಎಲ್ಲದರ ಬಗ್ಗೆಯೂ ಮಾಹಿತಿಯನ್ನು ನೀಡಲಿದೆ.
ಜುಲೈ 25 ರಂದು ಇಲ್ಲಿ ಮೊದಲ ಎಕ್ಸಿಬಿಷನ್ ನಡೆಯಲಿದ್ದು ಪ್ರತೀಕ್ಷಾ ಅಪೂರ್ವ ಸಂಗ್ರಹಿಸಿದ ಪೇಂಟಿಂಗ್ ಅನ್ನು ಪ್ರದರ್ಶಿಸಲಾಗುತ್ತದೆ.
ಇದೇ ವೇಳೆ 4 ವರ್ಷ ಪೂರೈಸಿದ ಹಿನ್ನಲೆಯಲ್ಲಿ hop-on, hop-off ಮ್ಯೂಸಿಯಂ ಬಸ್ಗೆ ರಾಷ್ಟ್ರಪತಿಯವರು ಚಾಲನೆ ನೀಡಲಿದ್ದಾರೆ.
ಅಲ್ಲದೆ ರಾಷ್ಟ್ರಪತಿ ಭವನದ ವೆಬ್ಸೈಟ್ನಲ್ಲಿ ಮೈಕ್ರೋ ಸೈಟ್ಗೆ ಚಾಲನೆ ನೀಡಲಿದ್ದಾರೆ. ಇದರಲ್ಲಿ ಪ್ರವಾಸಿ ತಾಣವಾದ ರಾಷ್ಟ್ರಪತಿ ಭವನದ ಕಟ್ಟಡ, ಮ್ಯೂಸಿಯಂ, ಗಾರ್ಡನ್ಗಳ ಬಗ್ಗೆ ಮಾಹಿತಿ ಇರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.