News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೋಟ್ಪಾ ಕಾಯ್ದೆ ಅನುಷ್ಟಾನ ಕಾರ್ಯಾಗಾರ

ಬೈಂದೂರು: ಧೂಮಪಾನಿಗಳು ತಮ್ಮ ಜೊತೆಗೆ ಇತರರನ್ನೂ ಕೊಲ್ಲುತ್ತಾರೆ. ನಿಕೋಟಿನ್ ಎಂಬ ಅತ್ಯಂತ ವಿಷಕಾರಿ ಅಂಶ ಇದರಲ್ಲಿ ಇರುವುದರಿಂದ ಕ್ಯಾನ್ಸರ್, ಹೃದಯಾಘಾತಗಳಂತಹ ಮಾರಕ ರೋಗಗಳಿಗೆ ಜನ ಬಲಿಯಾಗುತ್ತಿದ್ದಾರೆ. ಯುವ ಸಮುದಾಯ ಸೇರಿದಂತೆ ಈ ಚಟದಿಂದ ದೇಶದಲ್ಲಿ ಲಕ್ಷಗಟ್ಟಲೆ ಜನ ತಮ್ಮ ಅಮೂಲ್ಯ ಜೀವನವನ್ನು ನರಕ ಮಾಡಿಕೊಳ್ಳುತ್ತಿರುವುದು ದುರಂತದ ಸಂಗತಿ ಎಂದು ರಾಜ್ಯ ಗೃಹ ಇಲಾಖೆಯ ಕೋಟ್ಪಾ ನೋಡೆಲ್ ಅಧಿಕಾರಿ ಡಾ| ಜೆ. ಜಾನ್ ಕೆನಡಿ ಹೇಳಿದರು.

BYN-Mar25-NO-SMOKING-1
ಬೈಂದೂರು ರೋಟರಿ ಭವನದಲ್ಲಿ ನಡೆದ ಕೋಟ್ಪಾ ಕಾಯ್ದೆ ಅನುಷ್ಟಾನ ಕಾರ್ಯಾಗಾರದಲ್ಲಿ ಸಾರ್ವಜನಿಕರಿಗೆ ಕಾಯಿದೆ ಅನುಷ್ಠಾನದ ಕುರಿತು ಮಾಹಿತಿ ನೀಡಿದರು.

DSC-Kotpa

ತಂಬಾಕು ಪದಾರ್ಥಗಳ ಸೇವನೆ ಅನಾದಿಕಾಲದಿಂದಲೂ ಇತ್ತು. ಇದನ್ನು ಒಮ್ಮೇಲೆ ಕಟ್ಟುನಿಟ್ಟಾಗಿ ನಿಷೇಧಿಸುವುದು ಕಷ್ಟ. ಇದನ್ನು ಹಂತವಾಗಿ ಕಡಿಮೆ ಮಾಡಲು ಚಿಂತನೆ ನಡೆಸಿದೆ. ತಂಬಾಕು ಉತ್ಪನ್ನ ನಿಷೇಧ ಕಾಯ್ದೆ 2003ರಲ್ಲಿ ಜಾರಿಗೆ ಬಂದಿದೆ. ಕಲಂ 4, 5, 6ಎ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ, ಶಾಲಾ-ಕಾಲೇಜು ವಠಾರದಿಂದ ನೂರು ಗಜಗಳ ಅಂತರದಲ್ಲಿ, ಆಸ್ಪತ್ರೆ, ಬಸ್, ರೈಲ್ವೆ ನಿಲ್ದಾಣಗಳಲ್ಲಿ ಧೂಮಪಾನ ಮಾಡುವಂತಿಲ್ಲ. ಹಾಗಾದಲ್ಲಿ ೨೦೦ರೂ. ದಂಡ ಅಥವಾ ಎರಡು ತಿಂಗಳು ಜೈಲುವಾಸದ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಹಾಗಂತ ಬೆಳಗಾಗುವುದರೊಳಗೆ ಇದನ್ನು ನಿಷೇಧಿಸಲು ಸಾಧ್ಯವಿಲ್ಲ ಹಂತ-ಹಂತವಾಗಿ ನಿರ್ಮೂಲನೆ ಮಾಡಬೇಕಾಗಿದೆ. ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಸಿಗರೇಟ್, ಬೀಡಿ ಮಾರಾಟ ಮಾಡುವುದು ತಪ್ಪಲ್ಲ. ಆದರೆ ಅದರ ಜಾಹೀರಾತುಗಳನ್ನು ನೀಡುವಂತಿಲ್ಲ. ಇಂತಹವುಗಳು ಕಂಡುಬಂದಲ್ಲಿ ಸಂಬಂಧಿತರು5 ದಿನಗಳ ಕಾಲಾವಕಾಶ ನೀಡಿ ನೋಟೀಸ್ ಜಾರಿ ಮಾಡಬೇಕು. ತಂಬಾಕು ಮಾರಾಟ ಅಂಗಡಿಗಳಲ್ಲಿ ಕಡ್ಡಾಯವಾಗಿ ಧೂಮಪಾನ ನಿಷೇಧದ ನಾಮಫಲಕ ಅಳವಡಿಸಿಕೊಳ್ಳಬೇಕು ಎಂದರು.

ಕರಾವಳಿ ಭಾಗದ ಅನೇಕ ಮಹಿಳೆಯರು ಬೀಡಿ ಕಟ್ಟುವ ಕಾಯಕ ಮಾಡುತ್ತಿದ್ದಾರೆ. ಇದರಿಂದ ಹೆಚ್ಚಿನವರು ಅಸ್ತಮಾದಿಂದ ಬಳಲುತ್ತಿರುವುದು ಕೂಡ ಕಂಡುಬಂದಿದೆ. ಗರ್ಭಿಣಿಯರ ಮೇಲೆಯೂ ನಿಕೋಟಿನ್ ವಿಷದ ಪರಿಣಾಮ ಬೀರುತ್ತದೆ. ಹಾಗಾಗಿ ಇಂತವರು ಬೇರೆ ಕೆಲಸಗಳನ್ನು ಮಾಡುವ ಹಾಗೆ ಯೋಚಿಸಬೇಕು ಎಂದು ಸಲಹೆ ನೀಡಿದರು. ವೃತ್ತನಿರೀಕ್ಷಕ ಎಂ.ಸುದರ್ಶನ್, ಆರೋಗ್ಯಾಧಿಕಾರಿ ಡಾ| ಹರಮ್ ಸುಲ್ತಾನ ಉಪಸ್ಥಿತರಿದ್ದರು.

ಪಂಚಾಯತ್ ಅಧಿಕಾರಿಗಳು, ಶಾಲಾ-ಕಾಲೇಜುಗಳ ಅಧ್ಯಾಪಕರು ಹಾಗೂ ಪ್ರಾಂಶುಪಾಲರು, ಅಂಗಡಿ, ಬಾರ್, ಹೋಟೆಲ್ ಮಾಲಕರು ಸಾಮಾಜಿಕ ಕಾರ್ಯಕರ್ತರು ಮುಂತಾದವರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಬೈಂದೂರು ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ ಕಾರ್ಯಕ್ರಮ ನಿರೂಪಿಸಿದರು. ಅನಂತರ ಪೇಟೆಯ ಎಲ್ಲಾ ಅಂಗಡಿಗಳಗೆ ತೆರಳಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದ ಹಾಗೂ ಶಿಕ್ಷೆಯ ಕುರಿತಾದ ಎಚ್ಚರಿಕೆ ಫಲಕದ ಜೊತೆಗೆ ನೋಟೀಸು ನೀಡಲಾಯಿತು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top