ನವದೆಹಲಿ : ಸೇನಾ ಪಡೆಗಳು ಮತ್ತು ಬಂಡುಕೋರರ ನಡುವಿನ ಘರ್ಷಣೆಯಿಂದಾಗಿ ಹಿಂಸಾಚಾರ ಭುಗಿಲೆದ್ದಿರುವ ಯುದ್ಧ ಪೀಡಿತ ಪ್ರದೇಶ ದಕ್ಷಿಣ ಸುಡಾನ್ನಲ್ಲಿರುವ ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರ ಏರ್ಲಿಫ್ಟ್ ಮಾಡಲು ಚಿಂತಿಸಿದೆ.
ಈ ಕಾರ್ಯಾಚರಣೆಗೆ ‘ಸಂಕಟ್ ಮೋಚನ್’ ಎಂಬ ಹೆಸರಿಡಲಾಗಿದೆ.
ದಕ್ಷಿಣ ಸುಡಾನ್ನಲ್ಲಿ ಸಂಕಷ್ಟ ಅನುಭವಿಸುತ್ತಿರುವ ಭಾರತೀಯರ ರಕ್ಷಣೆಗೆ ವಿದೇಶಾಂಗ ರಾಜ್ಯ ಸಚಿವ ವಿ. ಕೆ. ಸಿಂಗ್ ನೇತೃತ್ವದಲ್ಲಿ ‘ಸಂಕಟ್ ಮೋಚನ್’ ಕಾರ್ಯಾಚರಣೆ ಇಂದು ನಡೆಯಲಿದೆ.
ಬುಧವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಟ್ವೀಟ್ ಮಾಡಿ, ದಕ್ಷಿಣ ಸುಡಾನ್ನಲ್ಲಿರುವ ಭಾರತೀಯರನ್ನು ‘ಸಂಕಟ್ ಮೋಚನ್’ ಕಾರ್ಯಾಚರಣೆ ಮೂಲಕ ರಕ್ಷಿಸಲಿದ್ದೇವೆ. ಇದರ ನೇತೃತ್ವವನ್ನು ವಿದೇಶಾಂಗ ರಾಜ್ಯ ಸಚಿವ ವಿ. ಕೆ. ಸಿಂಗ್ ಅವರು ವಹಿಸಲಿದ್ದಾರೆ ಎಂದಿದ್ದಾರೆ.
ದಕ್ಷಿಣ ಸುಡಾನ್ನಲ್ಲಿ ಸಿಲುಕಿಕೊಂಡಿರುವ 300 ಭಾರತೀಯರನ್ನು ತೆರವು ಮಾಡಲು ದಕ್ಷಿಣ ಸುಡಾನ್ನ ರಾಜಧಾನಿ ಜುಬಾಕ್ಕೆ ಎರಡು ಸಿ-17 ಮಿಲಿಟರಿ ಏರ್ಕ್ರಾಫ್ಟ್ಗಳನ್ನು ಕಳುಹಿಸಲಾಗುತ್ತಿದೆ.
ವಿ.ಕೆ. ಸಿಂಗ್ ಇವರ ಜೊತೆ ಕಾರ್ಯದರ್ಶಿ ಅಮರ್ ಸಿನ್ಹಾ, ಜೆ. ಎಸ್. ಸತ್ಬೀರ್ ಸಿಂಗ್ ಮತ್ತು ನಿರ್ದೇಶಕ ಅಂಜನಿ ಕುಮಾರ್ ಅವರು ಇರಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.