ವಾಷಿಂಗ್ಟನ್: ಫೋರ್ಡ್ ಫೌಂಡೇಶನ್ ಮತ್ತು ಗ್ರೀನ್ಪೀಸ್ ಸಂಸ್ಥೆಗಳ ಮೇಲೆ ನಿರ್ಬಂಧ ಹೇರಿರುವ ಭಾರತದ ಕ್ರಮಕ್ಕೆ ಅಮೆರಿಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಭಾರತವನ್ನು ಆಗ್ರಹಿಸಿದೆ.
ಭಾರತದ ಗೃಹಸಚಿವಾಲಯ ಗ್ರೀನ್ಪೀಸ್ ಇಂಡಿಯಾ ಸಂಸ್ಥೆಯ ರಿಜಿಸ್ಟ್ರೇಶನನ್ನು ಅಮಾನತು ಮಾಡಿದೆ ಮತ್ತು ಫೋರ್ಡ್ ಫೌಂಡೇಶನನ್ನು ಪೂರ್ವಾನುಮತಿ ಎಚ್ಚರಿಕೆಯ ಪಟ್ಟಿಯಲ್ಲಿಟ್ಟಿದೆ. ಅಲ್ಲದೇ ಈ ಸಂಸ್ಥೆ ನೀಡುತ್ತಿರುವ ದೇಣಿಗೆಯ ಬಗ್ಗೆ ಗೃಹಸಚಿವಾಲಯಕ್ಕೆ ಸೂಚನೆ ನೀಡುವಂತೆ ಆರ್ಬಿಐಗೆ ತಿಳಿಸಿದೆ.
ರಾಷ್ಟ್ರೀಯ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಳ್ಳದೇ ಈ ಸಂಸ್ಥೆ ಕಲ್ಯಾಣ ಕಾರ್ಯಕ್ರಮಗಳಿಗೆ ದೇಣಿಗೆ ನೀಡುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ರೀತಿ ಮಾಡಿರುವುದಾಗಿ ಗೃಹಸಚಿವಾಲಯ ಹೇಳಿದೆ.
ಭಾರತದಲ್ಲಿನ ಈ ಬೆಳವಣಿಗೆಯ ಬಗ್ಗೆ ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಸ್ಟೇಟ್ ಡಿಪಾರ್ಟ್ಮೆಂಟ್ ಡೆಪ್ಯೂಟಿ ಆಕ್ಟಿಂಗ್ ಸ್ಪೋಕ್ಸ್ಪರ್ಸನ್ ಮಾರೀ ಹಾರ್ಫ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.