×
Home About Us Advertise With s Contact Us

ಸಮಾಜ ನಿರ್ಮಾಣಕ್ಕೆ ಕರಾವಳಿಯ ಕೊಂಕಣಿ ಭಾಷಿಗರ ಕೊಡುಗೆ ಅನನ್ಯ

ಉಪ್ಪುಂದ : ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ವ್ಯಾವಹಾರಿಕಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜಸೇವಾ ಮನೋಭಾವನೆ ಮೂಲಕ ಇತರ ಭಾಷಿಕರೊಡನೆ ಸಮಾನ ಮನಸ್ಕರಾಗಿ ಸೇರಿ ಜಾತಿಗಳಿಗೆ ಅದ್ಯತೆ ನೀಡದೇ ಭಾಷಾಭಿಮಾನ ಉಳಿಸಿಕೊಂಡು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಕರಾವಳಿಯ ಕೊಂಕಣಿ ಭಾಷಿಗರ ಕೊಡುಗೆ ಅನನ್ಯವಾದುದು ಎಂದು ಖಂಬದಕೋಣೇ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಅಭಿಪ್ರಾಯಪಟ್ಟರು.

DSC00710

ಖಂಬದಕೋಣೆ ನಿರ್ಮಲಾ ಸಭಾಭವನದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಹಾಗೂ ರಂಗತರಂಗ ಉಪ್ಪುಂದ ಇದರ ಜಂಟಿ ಆಶ್ರಯದಲ್ಲಿ ಎ.10,11ಮತ್ತು 12ರಂದು ನಡೆಯುವ ಕೊಂಕಣಿ ರಂಗೋತ್ಸವ ಮತ್ತು ರಂಗರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

DSC00712

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಖರೈಸೇಸ ಸಂಘದ ನಿರ್ದೇಶಕ ಬಿ.ಎಸ್.ಸುರೇಶ್ ಶೆಟ್ಟಿ ರಂಗೋತ್ಸವದ ಲಾಂಛನ ಬಿಡುಗಡೆ ಮಾಡಿದರು. ಖರೈಸೇಸ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ಮಯ್ಯ, ನಿರ್ದೇಶಕರಾದ ಮೋಹನ ಪೂಜಾರಿ, ಅಣ್ಣಪ್ಪ ಖಾರ್ವಿ, ರಂಗತರಂಗ ಕಾರ್ಯದರ್ಶಿ ಶಶಿಧರ ಶೆಣೈ, ಸಂಚಾಲಕ ಶ್ರೀಶ ಭಟ್ ಉಪಸ್ಥಿತರಿದ್ದರು. ರಂಗತರಂಗ ಅಧ್ಯಕ್ಷ ಓಂಗಣೇಶ್ ಕಾಮತ್ ಪ್ರಾಸ್ತಾವಿಸಿ, ಕಾರ್ಯಕ್ರಮ ನಿರೂಪಿಸಿದರು.

 

Recent News

Back To Top
error: Content is protected !!