ನವದೆಹಲಿ: ಮಥುರಾ ಹಾಗೂ ಪಲ್ವಾಲ್ ರೈಲು ನಿಲ್ದಾಣಗಳ ನಡುವೆ ಸ್ಪ್ಯಾನಿಷ್ ಹೈ-ಸ್ಪೀಡ್ ರೈಲು ಟ್ಯಾಲ್ಗೋ ಎರಡನೇ ಹಂತದ ಪರೀಕ್ಷಾರ್ಥವಾಗಿ ಚಲಿಸಲಿದೆ.
ಪರೀಕ್ಷೆ ವೇಳೆ ಗರಿಷ್ಟ 180 ಕಿ.ಮೀ. ಪ್ರತಿ ಗಂಟೆ ವೇಗದಲ್ಲಿ ರೈಲು ಚಲಿಸಲಿದೆ. ಕಳೆದ ತಿಂಗಳು ಮೊದಲ ಹಂತದ ಪ್ರಯೋಗಾರ್ಥ ಚಾಲನೆಯನ್ನು ಬರೇಲಿ ಹಾಗೂ ಮೊರಾದಾಬಾದ್ ರೈಲು ನಿಲ್ದಾಣಗಳ ನಡುವೆ ನಡೆಸಲಾಗಿತ್ತು. ಈ ವೇಳೆ ಟ್ಯಾಲ್ಗೋ ರೈಲು 80-115 ಕಿ.ಮೀ. ವೇಗದಲ್ಲಿ ಚಲಿಸಿತ್ತು.
ಭಾರತ ಮತ್ತು ಸ್ಪೇನ್ ರೈಲ್ವೆ ಅಧಿಕಾರಿಗಳು, ರಿಸರ್ಚ್ ಡಿಸೈನ್ಸ್ & ಸ್ಟ್ಯಾಂಡರ್ಡ್ಸ್ ಸಂಸ್ಥೆಯ ತಜ್ಞರು ಈ ಸಂದರ್ಭ ಉಪಸ್ಥಿತರಿರಲಿದ್ದಾರೆ.
ಟ್ಯಾಲ್ಗೋ ರೈಲು ಪರೀಕ್ಷೆ ಜುಲೈ 26ರ ವರೆಗೆ ನಡೆಯಲಿದ್ದು, ವಿವಿಧ ಅಂಶಗಳನ್ನು ಪರೀಕ್ಷಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೆಮಿ ಹೈ-ಸ್ಪೀಡ್ ಗತಿಮಾನ್ ಎಕ್ಸ್ಪ್ರೆಸ್ ರೈಲು ಯಶಸ್ವಿ ಚಾಲನೆ ನೀಡಿದ ಬಳಿಕ ರೈಲ್ವೆ ಇಲಾಖೆಯ ಹೈ-ಸ್ಪೀಡ್ ರೈಲುಗಳ ಯೋಜನೆ ಭಾಗವಾಗಿ ಟ್ಯಾಲ್ಗೋ ರೈಲು ಪರೀಕ್ಷೆ ನಡೆಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.