ಮುಂಬಯಿ: ಬಾಲಿವುಡ್ನ ಲೆಜೆಂಡರಿ ನಟ ಅಮಿತಾಭ್ ಬಚ್ಚನ್ ಅವರು ಕೇಂದ್ರ ಸರ್ಕಾರದ ಮತ್ತೊಂದು ಅಭಿಯಾನದ ರಾಯಭಾರಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ ನಗರಾಭಿವೃದ್ಧಿ ಸಚಿವಾಲಯ ಅವರನ್ನು ಸಂಪರ್ಕಿಸಿ, ನಗರಗಳ ತ್ಯಾಜ್ಯದಿಂದ ತಯಾರಿಸಲಾದ ಕಾಂಪೋಸ್ಟ್ ಗೊಬ್ಬರದ ಬಳಕೆಯ ಪ್ರಯೋಜನಗಳನ್ನು ಸಾರುವ ಜಾಹೀರಾತು, ಪೋಸ್ಟರ್, ಜಿಂಗಲ್ಗಳಲ್ಲಿ ಕಾಣಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದೆ.
ನಗರ ಪ್ರದೇಶದಲ್ಲಿ ಮುನ್ಸಿಪಲ್ ಸಾಲಿಡ್ ವೇಸ್ಟ್ನ್ನು ಶೇ.100ರಷ್ಟು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸುವ ಯೋಜನೆ ಸ್ವಚ್ಛ ಭಾರತ ಅಡಿಯಲ್ಲಿ ಕೈಗೊಳ್ಳಲಾಗಿದೆ. ವೆಟ್ ವೇಸ್ಟ್ನ್ನು ಕಾಂಪೋಸ್ಟ್ ಆಗಿ ಪರಿವರ್ತಿಸಿ ಗೊಬ್ಬರವಾಗಿ ಬಳಕೆ ಮಾಡುವ ಯೋಜನೆ ಇದಾಗಿದೆ.
ರಸಗೊಬ್ಬರ ಕಾರ್ಖಾನೆಗಳು ಕಾಂಪೋಸ್ಟ್ ಖರೀದಿ ಮಾಡುವುದನ್ನೂ ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ವರ್ಷಕ್ಕೆ ಭಾರತ 62 ಮಿಲಿಯನ್ ಟನ್ ತ್ಯಾಜ್ಯ ತಯಾರಿಸುತ್ತದೆ. ಆದರೆ ಇದರಲ್ಲಿ ಬಹುತೇಕ ತ್ಯಾಜ್ಯ ರಿಸೈಕಲ್ ಮಾಡಲಾಗುತ್ತಿಲ್ಲ. ಇಂತಹ ತ್ಯಾಜ್ಯಗಳಿಂದ 1.5 ಲಕ್ಷ ಟನ್ ಕಾಂಪೋಸ್ಟ್ ಉತ್ಪಾದಿಸಬಹುದಾಗಿದೆ.
ಈ ನಿಟ್ಟಿನಲ್ಲಿ ಜನರಿಗೆ ಜಾಹೀರಾತುಗಳ ಮೂಲಕ ಅರಿವು ಮೂಡಿಸಲು ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಸೂಪರ್ ಸ್ಟಾರ್ ಅಮಿತಾಭ್ ಅವರ ಖ್ಯಾತಿಯನ್ನು ಬಳಸಿಕೊಳ್ಳಲು ಚಿಂತನೆ ನಡೆಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.