ನವದೆಹಲಿ: ರಿಯೋ ಒಲಿಂಪಿಕ್ಸ್ 2016 ಆರಂಭಗೊಳ್ಳಲು ಕೇವಲ ಒಂದು ತಿಂಗಳು ಬಾಕಿ ಇದ್ದು, ಕ್ರೀಡಾಪಟುಗಳು ಪದಕಗಳ ದಾಖಲೆ ನಿರ್ಮಿಸುವ ಯೋಜನೆ ರೂಪಿಸುತ್ತಿದ್ದಾರೆ.
2012ರ ಒಲಿಂಪಿಕ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಸಾಧನೆ ತೋರುವ ಮೂಲಕ ಹಲವಾರು ಪದಕಗಳನ್ನು ಜಯಿಸಿದ್ದರು. ಈ ಬಾರಿಯ ರಿಯೋ ಒಲಿಂಪಿಕ್ಸ್ನಲ್ಲೂ ಕ್ರೀಡಾಪಟುಗಳು ಮತ್ತೊಂದು ದಾಖಲೆ ಪ್ರದರ್ಶನ ನೀಡುವ ನಿರೀಕ್ಷೆಯನ್ನು ಅಭಿಮಾನಿಗಳು ಹೊಂದಿದ್ದಾರೆ.
ರಿಯೋ ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಅಥ್ಲೀಟ್ಗಳು:
ಬಿಲ್ಲುಗಾರಿಕೆ: ಅತಾನು ದಾಸ್, ದೀಪಿಕಾ ಕುಮಾರಿ, ಲಕ್ಷ್ಮೀರಾಣಿ ಮಾಝಿ, ಬಾಂಬೆಲಾ ದೇವಿ.
ಪುರುಷರ ಅಥ್ಲೆಟಿಕ್ಸ್: ಇದರ್ಜೀತ್ (ಶಾಟ್ ಪುಟ್), ವಿಕಾಸ್ ಗೌಡ (ಡಿಸ್ಕಸ್ ಎಸೆತ), ಗುರ್ಮೀತ್ ಸಿಂಗ್, ಬಲ್ಜಿಂದರ್ ಸಿಂಗ್ ಮತ್ತು ಇರ್ಫಾನ್ ಕೊಲೊಥಮ್ ತೋಡಿ (20 ಕಿ.ಮಿ. ನಡಿಗೆ, ಸಂದೀಪ್ ಕುಮಾರ್, ಮನೀಷ್ ಸಿಂಗ್ ರಾವತ್ (50 ಕಿ.ಮೀ. ನಡಿಗೆ), ನೀತೇಂದರ್ ಸಿಂಗ್ ರಾವತ್, ಥೊಣಕಲ್ ಗೋಪಿ ಹಾಗೂ ಖೇತಾ ರಾಮ್ (ಮ್ಯಾರಥಾನ್), ಮೊಹಮ್ಮದ್ ಆನಸ್ (400 ಮೀ. ಓಟ) ಹಾಗೂ ಅಂಕಿತ್ ಶರ್ಮಾ (ಉದ್ದ ಜಿಗಿತ).
ಮಹಿಳೆಯರ ಅಥ್ಲೆಟಿಕ್ಸ್: ಸೀಮಾ ಅಂತಿಲ್ (ಡಿಸ್ಕಸ್ ಎಸೆತ), ಮನ್ಪ್ರೀತ್ ಕೌರ್ (ಶಾಟ್ ಪುಟ್) ಲಲಿತಾ ಬಾಬರ್ (3000m ಹಳ್ಳಿಗಾಲೋಟ), ಟಿಂಟು ಲುಕಾ (ಮಹಿಳೆಯರ 800 ಮೀ. ಈವೆಂಟ್), ಕವಿತಾ ರಾವುತ್ (ಮಹಿಳೆಯರ ಮ್ಯಾರಥಾನ್), ಸುಧಾ ಸಿಂಗ್, ಒ.ಪಿ. ಜೈಶಾ (ಮ್ಯಾರಥಾನ್), ಖುಷ್ಬೀರ್ ಕೌರ್ (20km ನಡಿಗೆ ), ಸಪ್ನಾ ಪುನಿಯ (20km ನಡಿಗೆ), ದ್ಯುತಿ ಚಂದ್ (ಮಹಿಳೆಯರ 100 ಮೀ ಓಟ), ಶ್ರಾಬನಿ ನಂದಾ (ಮಹಿಳೆಯರ 200 ಮೀ ಓಟ).
ಬ್ಯಾಡ್ಮಿಂಟನ್: ಸೈನಾ ನೆಹ್ವಾಲ್, ಪಿ.ವಿ. ಸಿಂಧು, ಕಿಡಾಂಬಿ ಶ್ರೀಕಾಂತ್, ಮನು ಅತ್ರಿ-ಸುಮೀತ್ ರೆಡ್ಡಿ, ಜ್ವಾಲಾ ಗುಟ್ಟಾ, ಅಶ್ವಿನಿ ಪೊನ್ನಪ್ಪ.
ಬಾಕ್ಸಿಂಗ್: ಶಿವ ಥಾಪಾ (56 ಕೆಜಿ ಬಾಂಟಂವೇಟ್ ವಿಭಾಗ), ಮನೋಜ್ ಕುಮಾರ್ (64 ಕೆಜಿ) ಹಾಗೂ ವಿಕಾಸ್ ಕೃಷ್ಣನ್ (75 ಕೆಜಿ).
ಹಾಕಿ: ಸರ್ದಾರ್ ಸಿಂಗ್ ಮತ್ತು ರೀತು ರಾಣಿ ಕ್ರಮವಾಗಿ ಭಾರತೀಯ ಪುರುಷರು-ಮಹಿಳೆಯರ ತಂಡವನ್ನು ಮುನ್ನಡೆಸಲಿದ್ದಾರೆ.
ಜಿಮ್ನಾಸ್ಟಿಕ್ಸ್: ದೀಪಾ ಕರ್ಮಾಕರ್.
ಜೂಡೋ: ಅವತಾರ್ ಸಿಂಗ್
ರೋಯಿಂಗ್: ದತ್ತು ಭೋಕನಾಲ್
ಶೂಟಿಂಗ್: ಜಿತು ರೈ (50 ಮೀಟರ್ ಏರ್ ಪಿಸ್ತೂಲ್), ಗಗನ್ ನಾರಂಗ್ (10 ಮೀ ಏರ್ ರೈಫಲ್), ಅಭಿನವ್ ಬಿಂದ್ರಾ (10 ಮೀ ಏರ್ ರೈಫಲ್), ಗುರುಪ್ರೀತ್ ಸಿಂಗ್ (26 ಮೀ ರಾಪಿಡ್ ಫೈರ್ ಪಿಸ್ತೂಲ್), ಪ್ರಕಾಶ್ ನಮಜಪ್ಪ (50 ಮಿ ಪಿಸ್ತೂಲ್), ಚೈನ್ ಸಿಂಗ್ (50 ಮೀಟರ್ ರೈಫಲ್ ಸ್ಥಾನಗಳು), ಮೈರಾಜ್ ಅಹ್ಮದ್ ಖಾನ್ (ಶಾಟ್ಗನ್), ಮನ್ವಂಜೀತ್ ಸಿಂಗ್ ಸಂಧು ಮತ್ತು ಕೈನನ್ ಚೆನ್ನೈ (ಟ್ರ್ಯಾಪ್ ಶೂಟಿಂಗ್), ಹೀನಾ ಸಂಧು (10 ಮಿ ಏರ್ ಪಿಸ್ತೂಲ್), ಅಯೋನಿಕಾ ಪಾಲ್, ಅಪೂರ್ವಿ ಚಂಡೇಲಾ (10 ಮೀ ಏರ್ ರೈಫಲ್)
ಟೇಬಲ್ ಟೆನ್ನಿಸ್: ಮೌಮ ದಾಸ್ ಮಾನಿಕಾ ಬಾತ್ರಾ, ಸೌಮ್ಯಜೀತ್ ಘೋಷ್, ಅಚಂತ ಶರತ್ ಕಮಲ್
ಟೆನಿಸ್: ಲಿಯಾಂಡರ್ ಪೇಸ್, ರೋಹನ್ ಬೋಪಣ್ಣ, ಸಾನಿಯಾ ಮಿರ್ಜಾ, ಪ್ರಾರ್ಥನಾ ತೋಂಬರೆ
ಭಾರ ಎತ್ತುವಿಕೆ: ಶಿವಲಿಂಗಂ ಸತೀಶ್ ಕುಮಾರ್ (ಪುರುಷರ 77kg ವರ್ಗದಲ್ಲಿ), ಸಾಯಿಖೋಮ್ ಮೀರಾಬಾಯಿ ಚಾನು (ಮಹಿಳೆಯರ 48 ಕೆ.ಜಿ ವಿಭಾಗ)
ವ್ರೆಸ್ಲಿಂಗ್: ನರಸಿಂಗ ಯಾದವ್ (74 ಕೆಜಿ ತೂಕದ ವಿಭಾಗ), ಯೋಗೇಶ್ವರ್ ದತ್ (65 ಕೆಜಿ ಫ್ರೀ ಸ್ಟೈಲ್ ವರ್ಗದಲ್ಲಿ), ಹರದೀಪ್ ಸಿಂಗ್ (96 ಕೆ.ಜಿ. ಗ್ರೀಕೊ-ರೋಮನ್ ವಿಭಾಗ), ಸಂದೀಪ್ ತೋಮರ್ (57 ಕೆಜಿ ವಿಭಾಗ), ರವೀಂದ್ರ ಖತ್ರಿ (85 ಕೆಜಿ ವಿಭಾಗದಲ್ಲಿ), ಬಬಿತಾ ಕುಮಾರಿ (53 ಕೆಜಿ ವಿಭಾಗ), ವಿನೇಶ್ ಫಗತ್ (48 ಕೆಜಿ ವಿಭಾಗ), ಸಾಕ್ಷಿ ಮಲಿಕ್ (58 ಕೆಜಿ ವಿಭಾಗ).
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.