ವಾಷಿಂಗ್ಟನ್: ಭಾರತೀಯ ಮೂಲದ ಗೂಗಲ್ ಸಿಇಓ ಸುಂದರ್ ಪಿಚೈ ಸೇರಿದಂತೆ ಒಟ್ಟು ನಾಲ್ವರು ಭಾರತೀಯರು ಈ ವರ್ಷದ ಪ್ರತಿಷ್ಟಿತ “Great Immigrants: The Pride of America” (ಶ್ರೇಷ್ಠ ವಲಸಿಗರು: ಅಮೆರಿಕಾದ ಹೆಮ್ಮೆ) ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪಿಬಿಎಸ್ ನ್ಯೂಸ್ ಅವರ್ನ ಆಂಕರ್ ಮತ್ತು ಸೀನಿಯರ್ ಕರೆಸ್ಪಾಂಡೆಂಟ್ ಹರಿ ಶ್ರೀನಿವಾಸನ್, ಅಮೆರಿಕಾಸ್, ಮಿಕ್ಂಸೆ ಆಂಡ್ ಕಂಪನಿಯ ಮುಖ್ಯಸ್ಥ ವಿಕ್ರಮ್ ಮಲ್ಹೋತ್ರ, ಬರಹಗಾರ್ತಿ ಭಾರತಿ ಮುಖರ್ಜಿ ಅವರಿಗೆ ಈ ಪ್ರಶಸ್ತಿ ದೊರೆತಿದೆ.
ಜೂನ್ 30ರಂದು ನ್ಯೂಯಾರ್ಕ್ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ವಿವಿಧ ದೇಶಗಳ ಒಟ್ಟು 42 ವಲಸಿಗರು ಅಮೆರಿಕಾದ ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.