ನವದೆಹಲಿ: ಭಾರತವು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣದ ಆಡಳಿತಕ್ಕೆ ಪೂರ್ಣ ಸದಸ್ಯತ್ವವನ್ನು ಅಧಿಕೃತವಾಗಿ ಸೋಮವಾರ ಹೊಂದಿತು ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ಎಸ್. ಜೈಶಂಕರ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಇಂದು ಫ್ರಾನ್ಸ್ ನಿಯೋಜಿತ ರಾಯಭಾರಿ ಅಲೆಕ್ಸಾಂಡರ್ ಜಿಗ್ಲೆರ್, ನೆದರ್ಲ್ಯಾಂಡ್ ರಾಯಭಾರಿ ಅಲ್ಫೋನ್ಸಸ್ ಸ್ಟೊಯ್ಲಿಂಗಾ ಮತ್ತು ಲುಕ್ಸೆಂಬರ್ಗ್ ನ ಡಿ’ ಅಫ್ಯೈರ್ಸ್ ಲಾರೆ ಹ್ಯೂಬರ್ಟಿ ಅವರ ಸಮ್ಮುಖದಲ್ಲಿ ಎಸ್. ಜೈಶಂಕರ್ ಅವರು ಎಂಟಿಸಿಆರ್ (Missile Technology Control Regime -MTCR) ಸದಸ್ಯತ್ವಕ್ಕೆ ಸಹಿ ಹಾಕಿದರು.
ಬಹುಪಕ್ಷೀಯ ರಫ್ತು ನಿಯಂತ್ರಣ ಪ್ರಭುತ್ವಕ್ಕೆ ಭಾರತ ಮೊದಲ ಬಾರಿಗೆ ಸೇರ್ಪಡೆಯಾಗಿದ್ದು, ಇದು ಜಾಗತಿಕ ಪ್ರಸರಣ ನಿಷೇಧದ ನಿಯಮಗಳ ಪರಸ್ಪರ ಸಹಕಾರಕ್ಕೆ ಸಹಾಯಕವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಭಾರತದ ಎನ್ಎಸ್ಜಿ ಸದಸ್ಯತ್ವಕ್ಕೆ ಚೀನಾ ಸೇರಿದಂತೆ ಕೆಲ ದೇಶಗಳು ತೀವ್ರವಾಗಿ ವಿರೋಧಿಸಿದ್ದು, ಎನ್ಎಸ್ಜಿ ಸದಸ್ಯತ್ವ ಪಡೆಯಲು ಆಗಿರಲಿಲ್ಲ. ಆದರೆ ಇದೀಗ ಎಂಟಿಸಿಆರ್ ಸದಸ್ಯತ್ವ ಪಡೆಯುವ ಮೂಲಕ ಭಾರತವು ಕ್ಷಿಪಣಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಾಧುನಿಕತೆಯನ್ನು ಹೊಂದಲಿದೆ ಎನ್ನಲಾಗಿದೆ. ಇದಲ್ಲದೆ ರಷ್ಯಾ ಜೊತೆ ಜಂಟಿ ಕಾರ್ಯಾಚರಣೆಯನ್ನೂ ನಡೆಸಲು ಇದು ಸಹಾಯಕವಾಗಲಿದೆ. ಚೀನಾ ಎಂಟಿಸಿಆರ್ ನಲ್ಲಿ ಸದಸ್ಯತ್ವ ಹೊಂದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.