ಬಂಟ್ವಾಳ : ನೀವೇ ನಿಮಗೆ ಬೇಕಾದಂತೆ ಫಾರಂ ತುಂಬಬೇಡಿ. ಜನರಿಗೆ ಪ್ರಶ್ನೆ ಕೇಳಿ. ಅವರು ಉತ್ತರಿಸಿದ್ದನ್ನು ಮಾತ್ರ ದಾಖಲಿಸಿಕೊಳ್ಳಿ. ಕೊನೆಗೆ ಅವರ ಸಹಿ ಹಾಕಿಸಿ ಎಂದು ಮಂಗಳೂರು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಗಣತಿದಾರರಿಗೆ ಸಲಹೆ ನೀಡಿದರು.
ಸಜೀಪಮುನ್ನೂರು ಗ್ರಾಮದ ನಂದಾವರದಲ್ಲಿ ಹಾಗೂ ಬಂಟ್ವಾಳ ಪುರಸಭೆಯ ಅಧ್ಯಕ್ಷೆ ವಸಂತಿ ಚಂದಪ್ಪ ಅವರ ವಾರ್ಡ್ 3ರಲ್ಲಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷಾ ಕಾರ್ಯವನ್ನು ಖುದ್ಧು ಪರಿಶೀಲಿಸಿದ ಜಿಲ್ಲಾಧಿಕಾರಿ, ಗಣತಿದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು.
ಅತ್ಯಂತ ನಾಜೂಕುನಿಂದ ಈ ಕೆಲಸ ಮಾಡಿ. ನೀವು ಕೊಡುತ್ತಿರುವ ಈ ಮಾಹಿತಿ ಸರಕಾರಕ್ಕೆ ಅಮೂಲ್ಯವಾಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ತಪ್ಪು ಮಾಡಬೇಡಿ ಎಂದ ಅವರು, ಮನೆ-ಮನೆ ಭೇಟಿ ಸಂದರ್ಭ ಸ್ಥಳೀಯ ಗ್ರಾಮಸ್ಥರ ವಿಶ್ವಾಸ ಪಡೆಯಿರಿ. ಪ್ರತಿಯೊಬ್ಬ ಮಾಹಿತಿದಾರರನ್ನು ಗೌರವಿಸಿ ಎಂದು ಸಲಹೆ ನೀಡಿದರು. ನಂದಾವರ ಪರಿಸರದ 2 ಮನೆಗಳಿಗೆ ಅಕಾರಿಗಳೊಂದಿಗೆ ಭೇಟಿ ನೀಡಿದ ಅವರು, ಗಣತಿದಾರರ ಸಮೀಕ್ಷಾ ಕಾರ್ಯವನ್ನು ಹತ್ತಿರದಿಂದ ವೀಕ್ಷಿಸಿದರು.
ಈ ಸಂದಭ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾಧಿಕಾರಿ ಡಾ.ಸಿ.ಸತೀಶ್ ಕುಮಾರ್, ತಹಸೀಲ್ದಾರ್ ಪುರಂದರ ಹೆಗ್ಡೆ, ಉಪ ತಹಸೀಲ್ದಾರ್ ರೋಹಿನಾಥ್,ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಗ್ರಾಮಲೆಕ್ಕಾಧಿಕಾರಿ ತೌಸೀಫ್, ನವೀನ್, ಎ.ಪಿ.ಭಟ್, ಮೋಹನ್, ಸಮೀಕ್ಷಾ ಮೇಲ್ವಿಚಾರಕಿ ವಿದ್ಯಾ, ಗಣತಿದಾರ್ತಿಯರು ಈ ಸಂದಭ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.