ಉಜಿರೆ: ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಧ್ಯಾನ, ಯೋಗದ ಮೂಲಕ ಹೊರತೆಗೆಯಲು ಸಾಧ್ಯ ಎಂದು ಭಾರತ ಸರಕಾರದ ಟಾಸ್ಕ ಫೋರ್ಸ್ ಆಯುಷ್ ಮಂತ್ರಾಲಯದ ಅಧ್ಯಕ್ಷ, ಬೆಂಗಳೂರಿನ ಎಸ್. ವ್ಯಾಸಯೋಗ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ|ಎಚ್.ಆರ್.ನಾಗೇಂದ್ರ ಹೇಳಿದರು.
ಅವರು ಗುರುವಾರ ಉಜಿರೆ ಶ್ರೀ ಧ.ಮಂ.ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ಸಭಾಭವನದಲ್ಲಿ ನಡೆದ ಶಾಂತಿವನ ಟ್ರಸ್ಟ್, ಶ್ರೀ ಕ್ಷೇತ್ರಧ.ಮಂ.ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ 14ನೇ ರಾಜ್ಯ ಮಟ್ಟದ ಅಂಚೆ-ಕುಂಚ ಪುರಸ್ಕಾರ ಸಮಾರಂಭದಲ್ಲಿ ಬಹುಮಾನ ವಿತರಿಸಿ ಶುಭಾಂಸಂಶನೆ ಮಾಡಿದರು.
ಯೋಗದಲ್ಲಿ ಮನಸ್ಸನ್ನು ಶಾಂತ ಮಾಡುವ ಅಂಶವೂ ಒಂದು. ಆನಂದಮಯ ಕೋಶದ ಕಡೆದಗೆ ಮನ್ಸಸ್ಸನ್ನು ಕೇಂದ್ರೀಕರಿಸಿದರೆ ಜ್ವಾನ ಭಂಡಾರವೇ ತೆರೆದುಕೊಳ್ಳುತ್ತದೆ. ಯೋಗಕ್ಕೆ ರಹಸ್ಯ ಕಲೆಗಳನ್ನು ಹೊರ ತೆಗೆಯಬಲ್ಲ ಶಕ್ತಿ ಇದೆ.ಇದು ಪುರಾತನ ಭಾರತದ ಉತ್ತಮ ಸಂಪ್ರದಾಯ ಮತ್ತು ಗುರುಕುಲ ವಿದ್ಯಾಭ್ಯಾಸದ ಅಂಶವೂ ಹೌದು.ಇಂದು ಮನಸ್ಸನ್ನು ಶಾಂತ ಮಾಡುವ ಕಲೆಯನ್ನು ಮರೆತು ಬಿಟ್ಟಿದ್ದೇವೆ. ಎಲ್ಲವೂ ವೇಗಕ್ಕೆ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಇದರಿಂದ ಮಕ್ಕಳು ವಿವಿಧ ತೊಂದರೆಗೆ ಸಿಲುಕುತ್ತಿದ್ದಾರೆ.ಜೀವನದಲ್ಲಿ ಧ್ಯಾನ, ಸಂಗೀತವನ್ನು ಅಳವಡಿಸಿಕೊಳ್ಳಬೇಕು. ಯೋಗದಿಂದ ಮನಸ್ಸನ್ನು ನಿಯಂತ್ರಿಸಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿಡಾ|ವೀರೇಂದ್ರ ಹೆಗ್ಗಡೆಅವರು ಕಲೆಗಳಿಗೆ ಅಪೂರ್ವ ಶಕ್ತಿ ಇದೆ.ಅವುಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರೆ ಅದರಲ್ಲಿ ವಿಫುಲ ಅವಕಾಶಗಳಿವೆ. ಹವ್ಯಾಸಗಳು ದೊಡ್ಡ ಸಂಪತ್ತಾಗಬಲ್ಲುದು.ಶಾಲಾ ಕಾಲೇಜು ಶಿಕ್ಷಣಕ್ಕೆ ಮಾಪನವಿದೆ. ಆದರೆ ನೈತಿಕ ಶಿಕ್ಷಣವೆಂಬುದು ಅಳತೆಗೆ ಮೀರಿದ್ದು.ಸ್ವಾರಸ್ಯಕರವಾದ ಬದುಕನ್ನು ಹೇಗೆ ಉಪಯೋಗಿಸಿಕೊಳ್ಳಬೇಕು, ಅನುಭವಿಸಬೇಕು ಎಂಬುದನ್ನು ನೈತಿಕ ಶಿಕ್ಷದಿಂದ ಅರಿಯಬಹುದು.ನಾವು ಈ ಪ್ರಕೃತಿಯನ್ನು ಮೊಮ್ಮಕ್ಕಳಿಂದ ಎರವಲು ಪಡೆದುಕೊಂಡದ್ದು ಎಂಬುದನ್ನು ಮರೆಯಬಾರದು. ಹೀಗಾಗಿ ಪರಿಸರವನ್ನು ಚೆನ್ನಾಗಿಟ್ಟುಕೊಳ್ಳುವುದು ನಮ್ಮ ಹೊಣೆಗಾರಿಕೆ ಮತ್ತುಕರ್ತವ್ಯವಾಗಿದೆ.ಇದಂದು ತೀರಿಸಬೇಕಾದ ಋಣ ಎಂದರು.
ವೇದಿಕೆಯಲ್ಲಿ ಹೇಮಾವತಿ ವಿ. ಹೆಗ್ಗಡೆ, ಡಿ.ಸುರೇಂದ್ರಕುಮಾರ್, ಪ್ರಕೃತಿಚಿಕಿತ್ಸಾಕಾಲೇಜಿನ ಪ್ರಾಚಾರ್ಯಡಾ|ಪ್ರಶಾಂತ ಶೆಟ್ಟಿಇದ್ದರು.
ಶಾಂತಿವನ-ಆಯುಷ್ ವಿಭಾಗದ ಆಡಳಿತಾಧಿಕಾರಿ ಮಂಜುನಾಥ ಎಂ.ಎನ್.ನಿರ್ವಹಿಸಿದ ಕಾರ್ಯಕ್ರಮದಲ್ಲಿ, ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ ಸ್ವಾಗತಿಸಿದರು. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಐ.ಶಶಿಕಾಂತ ಜೈನ್ ವಂದಿಸಿದರು.
ಯಕ್ಷಗಾನದ ಹಾಡಿಗೆ ತಕ್ಕಂತೆ ಕಲಾವಿದ ಬಾಗೂರು ಮಾರ್ಕಾಂಡೇಯ ಕುಂಚದಲ್ಲಿ ವಿಶೇಷ ಕಲಾಕೃತಿಯಲ್ಲಿ ಮೂಡಿಸಿದರು. ಪ್ರಾಥಮಿಕ, ಪ್ರೌಢ, ಕಾಲೇಜು ಮತ್ತು ಸಾರ್ವಜನಿಕ ವಿಭಾಗದಿಂದ ಸ್ಪರ್ಧಿಸಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಅಂಚೆ-ಕುಂಚ ಕಲಾವಿದರುಗಳಿಗೆ ಬಹುಮಾನಗಳನ್ನು ಅತಿಥಿಗಳು ನೀಡಿದರು.
ಎಸ್.ವ್ಯಾಸಯೋಗ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳು ಪದ್ಮವಿಭೂಷಣದಿಂದ ಪುರಸ್ಕೃತರಾಗಿರುವ ಡಾ|ಹೆಗ್ಗಡೆಯವರನ್ನು ಸಮ್ಮಾನಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.