ಸವಣೂರು : ತಾಳ್ಮೆ, ಪರಿಶ್ರಮದಿಂದ ಸಮಾಜದಲ್ಲಿ ಯುವಜನತೆಯಿಂದ ಪರಿವರ್ತನೆ ಸಾಧ್ಯ. ಯುವಶಕ್ತಿ ದೇಶದ ಭವಿಷ್ಯ. ಯುವಶಕ್ತಿ ಕೈಕಟ್ಟಿ ಕುಳಿತರೆ ದೇಶದ, ಸಮಾಜ ಅಭಿವೃದ್ದಿ ಕುಂಠಿತವಾಗುತ್ತದೆ. ಸಮನ್ವಯತೆ, ಸಹೋದರತೆ, ಕ್ರಿಯಾಶೀಲತೆಯಿಂದ ಸಮಾಜದಲ್ಲಿ ಯುವಶಕ್ತಿ ಬಲಿಷ್ಠವಾಗಿ ಸಂಘಟಿತವಾಗಲು ಸಾಧ್ಯ ಎಂದು ಸವಣೂರು ಸ.ಪ.ಪೂ.ಕಾಲೇಜಿನ ಪ್ರಾಚಾರ್ಯ ಬಿ.ವಿ.ಸೂರ್ಯನಾರಾಯಣ ಹೇಳಿದರು.
ಅವರು ಶನಿವಾರ ರಾತ್ರಿ ಸವಣೂರು ಯುವಸಭಾಭವನದಲ್ಲಿ ನಡೆದ ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಲ್ಲಿನ ಯುವಕ ಮಂಡಲ ಹಾಗೂ ಊರಿನ ಹಿರಿಯರಿಂದ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸವಣೂರು ಎಂಬ ಊರು ಎಲ್ಲೆಡೆ ಪಸರಿಸುವಂತಾಗಿದೆ. ಗಳಿಸಿದನ್ನು ಸಮಾಜಕ್ಕೆ ಅರ್ಪಿಸಲು ಹಾಗೂ ನಾಯಕತ್ವ ಬೆಳೆಸಿಕೊಳ್ಳು ಯುವಸಂಸ್ಥೆಗಳು ಪ್ರೇರಣೆಯಾಗುತ್ತದೆ ಎಂದರು.
ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಮಾತನಾಡಿ, ಯುವಕ ಮಂಡಲದಿಂದ ನಾಯಕತ್ವ ಗುಣ, ಸಮಾಜ ಮುಖಿ ಚಿಂತನೆ ಬೆಳೆಸುವಂತಾಗಿದೆ. ಯುವಕ ಮಂಡಲದಲ್ಲಿ ಸಕ್ರೀಯರಾಗಿ ಸಮಾಜದಲ್ಲಿ ವಿವಿಧ ಹುದ್ದೆಗಳನ್ನು ಪಡೆದರೂ ತಮ್ಮ ಸಂಸ್ಥೆಯನ್ನು ಎಂದೂ ಮರೆಯಬಾರದು. ಸಂಸ್ಥೆಯ ಋಣ ಎಲ್ಲರ ಮೇಲೂ ಇದೆ ಇದನ್ನು ಅರಿತುಕೊಂಡು ಮುಂದುವರಿಯಬೇಕು ಎಂದರು.
ಸವಣೂರು ಹಿಂ.ಜಾ.ವೇ.ಯ ಅಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು ಮಾತನಾಡಿ, ಯುವಸಂಸ್ಥೆಗಳು ಸಮಾಜದ ಕಣ್ಣುಗಳಾಗಿ ಕಾರ್ಯನಿರ್ವಹಿಸಬೇಕು. ಸವಣೂರಿನ ಯುವಕ ಮಂಡಲ ರಾಜ್ಯಪ್ರಶಸ್ತಿ ಪಡೆದುಕೊಂಡಿದೆ. ಮುಂದೆ ತಮ್ಮ ಸೇವಾಚಟುವಟಿಕೆಯಿಂದ ರಾಷ್ಟ್ರ ಮಟ್ಟದಲ್ಲೂ ಗುರುತಿಸುವಂತಾಗಲಿ. ಸಂಸ್ಥೆಯ ಎಲ್ಲಾ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತೇನೆ. ಯುವಪಡೆ ಬಲಿಷ್ಠವಾಗಬೇಕು ಎಂದರು.
ನಿರ್ಗಮನ ಅಧ್ಯಕ್ಷ ರಾಜೇಶ್ ರೈ ಮೊಗರು ಮಾತನಾಡಿ, ಕಳೆದ ಒಂದು ವರ್ಷದ ಅವದಿಯಲ್ಲಿ ಸುಮಾರು 56 ವಿವಿಧ ಸಮಾಜಮುಖಿ ಚಟುವಟಿಕೆಯನ್ನು ಯುವಕಮಂಡಲದಿಂದ ಮಾಡಲಾಗಿದೆ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ನೂತನ ಅಧ್ಯಕ್ಷ ಸಚಿನ್ ಸವಣೂರು ಮುಂದಿನ ಅವಧಿಯಲ್ಲಿ ಸರ್ವರ ಸಹಕಾರದಲ್ಲಿ ವಿವಿಧ ಚಟುವಟಿಕೆ ನಡೆಸಲಾಗುವುದು ಎಂದು ಎಲ್ಲರ ಸಹಕಾರ ಕೋರಿದರು.
ತಾ.ಪಂ.ಮಾಜಿ ಉಪಾಧ್ಯಕ್ಷ ದಿನೇಶ್ ಮೆದು, ಸವಣೂರು ಜೆಸಿಐ ಅಧ್ಯಕ್ಷ ವಸಂತ್ ಎಸ್ ವೀರಮಂಗಲ, ಮಂಜುನಾಥನಗರ ವಿವೇಕಾನಂದ ಯುವಕ ಮಂಡಲದ ಅಧ್ಯಕ್ಷ ಅನ್ನಪೂರ್ಣಪ್ರಸಾದ್ ರೈ ಬೈಲಾಡಿ, ಯುವಕ ಮಂಡಲದ ಮಾಜಿ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು.
ನೂತನ ಪದಾಧಿಕಾರಿಗಳಾದ ಅಧ್ಯಕ್ಷ ಸಚಿನ್, ಉಪಾಧ್ಯಕ್ಷ ಕುಲಪ್ರಕಾಶ್ ಮೆದು, ಕಾರ್ಯದರ್ಶಿ ಸುಬ್ರಹಣ್ಯ ಬರೆಪ್ಪಾಡಿ, ಜತೆ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ, ಕೋಶಾಧಿಕಾರಿ ಸತೀಶ್ ಬಲ್ಯಾಯ, ಸಾಂಸ್ಕೃತಿಕ ವಿಭಾಗದ ಸಂಯೋಜಕ ಜಯಂತ ವೈ, ಸಾಹಿತ್ಯ ವಿಭಾಗದ ತಾರಾನಾಥ ಸವಣೂರು, ಸಂಘಟನಾ ವಿಭಾಗದ ಯತೀಶ್ ಕುಮಾರ್ ಕೆ.ಎಂ, ಕ್ರೀಡಾ ವಿಭಾಗದ ರಘು ಬೇರಿಕೆ, ಸೇವಾ ವಿಭಾಗದ ರಾಮಕೃಷ್ಣ ಪ್ರಭು ಪ್ರಮಾಣ ವಚನ ಸ್ವೀಕರಿಸಿದರು.
ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ದಯಾನಂದ ಮೆದು, ತಾರಾನಾಥ ಕಾಯರ್ಗ, ಜಗದೀಶ ಆರೆಲ್ತಡಿ, ಜಗದೀಶ ಇಡ್ಯಾಡಿ, ಕುಲಪ್ರಕಾಶ್ ಮೆದು ಅತಿಥಿಗಳನ್ನು ಗೌರವಿಸಿದರು. ಯುವಕ ಮಂಡಲದ ಸಲಹಾ ಸಮಿತಿಯ ಗಿರಿಶಂಕರ್ ಸುಲಾಯ, ಸುಪ್ರಿತ್ ರೈ ಖಂಡಿಗ, ಪ್ರಜ್ವಲ್ ಕೆ.ಆರ್,ಸವಣೂರು ಪ.ಪೂ.ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚಿನ್ ಕುಮಾರ್ ಜೈನ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಿವರಾಮ ಗೌಡ, ಗ್ರಾ.ಪಂ.ಸದಸ್ಯ ಪ್ರಕಾಶ್ ಕುದ್ಮನಮಜಲು,ಹಿಂದು ಯುವ ಸೇನೆಯ ಅಧ್ಯಕ್ಷ ಪ್ರಜ್ವಲ್ ರೈ ಪಾತಾಜೆ ಮೊದಲಾದವರು ಉಪಸ್ಥಿತರಿದ್ದರು.
ಸುಜಿತ್ ಎಂ.ಮಡಕೆ ಪ್ರಾರ್ಥಿಸಿದರು. ನಿರ್ಗಮನ ಅಧ್ಯಕ್ಷ ರಾಜೇಶ್ ರೈ ಮೊಗರು ಸ್ವಾಗತಿಸಿ, ನಿರ್ಗಮನ ಕಾರ್ಯದರ್ಶಿ ಸಂತೋಷ್ ಆಚಾರ್ ಕಾಯಗ ವರದಿ ವಾಚಿಸಿದರು. ನೂತನ ಕಾರ್ಯದರ್ಶಿ ಸುಬ್ರಹ್ಮಣ್ಯ ಬಿ.ಎಸ್ ವಂದಿಸಿದರು. ಜತೆ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ ಕಾರ್ಯಕ್ರಮ ನಿರೂಪಿಸಿದರು.
ತಾಳ್ಮೆ,ಪರಿಶ್ರಮದಿಂದ ಅಭಿವೃದ್ದಿ-ಬಿ.ವಿ.ಸೂರ್ಯನಾರಾಯಣ
ಯುವಕಮಂಡಲದಿಂದ ನಾಯಕತ್ವ,ಸಮಾಜ ಮುಖಿ ಚಿಂತನೆ-ಸುರೇಶ್ ರೈ ಸೂಡಿಮುಳ್ಳು
ಯುವಸಂಸ್ಥೆಗಳು ಸಮಾಜದ ಕಣ್ಣುಗಳು-ಪ್ರಕಾಶ್ಚಂದ್ರ ರೈ ಮುಗೇರುಗುತ್ತು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.