ಬೆಳ್ತಂಗಡಿ : ಮದುವೆಗೆ ಮನೆಯವರು ಒಲ್ಲೆ ಎಂದ ಬಳ್ಳಾರಿಯ ಯುವಜೋಡಿಯೊಂದು ಹಿಂದೂ ಸಂಘಟನೆಯ ಸಹಕಾರದೊಂದಿಗೆ ಮಂಗಳವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಮಲಪನ ಗುಡಿ ಗ್ರಾಮದ ಶಿವಾನಂದ ಹಡಪದ(30) ಹಾಗು ಇದೇ ಜಿಲ್ಲೆಯ ಗದಿಗನೂರಿನ ಫಿಲೋಮಿನಾ ಶ್ರುತಿ ಆರ್. ಎಫ್ ಯಾನೆ ಜಯಂತಿ(24) ಹಿಂದೂ ಸಂಘಟನೆಗಳ ಸಹಕಾರ ಪಡೆದು ವಿವಾಹವಾದ ಜೋಡಿ.
ಬಳ್ಳಾರಿಯಲ್ಲಿ ಟ್ರಾನ್ಸ್ಪೋರ್ಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಶಿವಾನಂದನಿಗೆ ಇದರ ಮುಂದುಗಡೆ ಕಾಲೇಜಿಗೆ ಬರುತ್ತಿದ್ದ ಫಿಲೋಮಿನಾ ಶ್ರುತಿಯೊಂದಿಗೆ ಪ್ರೇಮಾಂಕುರವಾಗಿತ್ತು. ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರು ಹುಡುಗಿಯ ಮನೆಯಲ್ಲಿ ವಿರೋಧವಿದ್ದ ಹಿನ್ನಲೆಯಲ್ಲಿ ಊರು ಬಿಟ್ಟು ಬಂದಿದ್ದರು.
ಕಳೆದ ಮೂರು ದಿನಗಳ ಹಿಂದೆ ಬೆಳ್ತಂಗಡಿಗೆ ಆಗಮಿಸಿದ್ದ ಜೋಡಿ ಅಲೆದಾಟ ನಡೆಸಿದ್ದಾರೆ ಎನ್ನಲಾಗಿದೆ. ಮಂಗಳವಾರ ಬೆಳ್ತಂಗಡಿ ಪೋಲಿಸ್ ಠಾಣೆಗೆ ಬಂದು ವಯಸ್ಸಿನ ಪ್ರಮಾಣಪತ್ರವನ್ನು ತೋರಿಸಿದ್ದಾರೆ. ಬಳಿಕ ಸ್ಥಳೀಯ ಹಿಂದೂ ಸಂಘಟನೆಯ ಸಹಕಾರ ಪಡೆದು ಕುತ್ರೋಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.