ದುಬೈ: ದುಬೈಯ ಇಂಟರ್ನೆಟ್ ಬಳಕೆದಾರರು ತಮ್ಮ ಡಾಟಾಗಳ ವರ್ಗಾವಣೆಗೆ ಶೀಘ್ರದಲ್ಲೇ ಹೊಸ ಪೀಳಿಗೆಯ ಹೈ-ಸ್ಪೀಡ್ ಇಂಟರ್ನೆಟ್ ಆಕಾ ಲೈ-ಫೈ (ಲೈಟ್ ಫಿಡೆಲಿಟಿ) ಪಡೆಯಲಿದ್ದಾರೆ. ಈ ಮೂಲಕ ದುಬೈ ಲೈ-ಫೈ ಇಂಟರ್ನೆಟ್ ಸೇವೆ ಒದಗಿಸುವ ವಿಶ್ವದ ಮೊದಲ ನಗರವಾಗಲಿದೆ.
ವಿಶೇಷವೆಂದರೆ ಈ ಲೈ-ಫೈ ಸೇವೆಯನ್ನು ದುಬೈ ನಗರದ ಬೀದಿ ದೀಪಗಳ ಮೂಲಕ ರವಾನಿಸಲಾಗುತ್ತದೆ. ಈ ಅತ್ಯಾಧುನಿಕ ವಿನ್ಯಾಸದ ಪ್ರತಿ ಬೀದಿ ದೀಪದ ವೆಚ್ಚ 1000 ಡಾಲರ್ ಇರಲಿದೆ. ದುಬೈ ಸ್ಮಾರ್ಟ್ ಸಿಟಿಯ ಈ ಯೋಜನೆ ವರ್ಷಾಂತ್ಯದೊಳಗೆ ಪೂರ್ಣಗೊಳ್ಳಲಿದೆ.
ಲೈಟ್ ಫಿಡೆಲಿಟಿ ಅಥವಾ ಲೈ-ಫೈ ಮಲ್ಟಿಪಲ್ ಗುಗಾಬೈಟ್ ಡೌನ್ಲೋಡ್ ಸ್ಪೀಡ್ ಹೊಂದಿದೆ. ಪ್ರಯೋಗಾಲಯಗಳಲ್ಲಿ ಇದರ ವೇಗ ಪ್ರತಿ ಸೆಕೆಂಡ್ಗೆ 224 ಜಿಬಿ ಹೊಂದಿದ್ದು, ಅತೀ ಪರಿಣಾಮಕಾರಿಯಾಗಿದೆ.
ವೈ-ಫೈ ರೇಡಿಯೋ ತರಂಗಗಳ ಸಹಾಯದಿಂದ ಡಾಟಾಗಳನ್ನು ರವಾನಿಸುತ್ತಿದ್ದರೆ, ಲೈ-ಫೈ ಎಲ್ಇಡಿ ಬಲ್ಬ್ಗಳ ಸಹಾಯದಿಂದ ಡಾಟಾಗಳನನು ರವಾನಿಸುತ್ತವೆ. ಈ ತಂತ್ರಜ್ಞಾನದ ಪ್ರಮುಖ ಸಮಸ್ಯೆ ಎಂದರೆ ಎಲ್ಇಡಿ ಬೆಳಕು ಗೋಡೆಗಳನ್ನು ಭೇದಿಸದ ಕಾರಣ ಮನೆಗಳಲ್ಲಿ ಲೈ-ಫೈ ದೊರೆಯುವುದು ಕಷ್ಟಕರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.