ನವದೆಹಲಿ: ತ್ರಿವಳಿ ತಲಾಖ್ ಪದ್ಧತಿಗೆ ನಿಷೇಧ ಹೇರುವ ಪರವಾಗಿ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ನಡೆಸುತ್ತಿರುವ ಹೋರಾಟಕ್ಕೆ ಹಲವಾರು ಮುಸ್ಲಿಂ ಮಹಿಳೆಯರು ಬೆಂಬಲ ಸೂಚಿಸಿದ್ದಾರೆ.
ಒಟ್ಟು 50 ಸಾವಿರ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ವಿರೋಧಿಸಿ ಪಿಟಿಷನ್ಗೆ ಸಹಿ ಹಾಕಿದ್ದಾರೆ. ಈ ಆನ್ಲೈನ್ ಪಿಟಿಷನ್ ತ್ರಿವಳಿ ತಲಾಖ್ ಕುರಾನ್ ವಿರೋಧಿ ವ್ಯವಸ್ಥೆ ಎಂದು ಹೇಳಿದೆ.
ಒಟ್ಟು 50 ಸಾವಿರ ಮಹಿಳೆಯರು ಮುಸ್ಲಿಂ ಸಮುದಾಯದಲ್ಲಿ ತ್ರಿವಳಿ ತಲಾಖನ್ನು ನಿಷೇಧಿಸಬೇಕು ಎಂದು ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಬೆಂಬಲ ನೀಡುವಂತೆ ನ್ಯಾಷನಲ್ ಕಮಿಷನ್ ಫಾರ್ ವುಮನ್ಗೆ ನಾವು ಮನವಿ ಮಾಡುತ್ತೇವೆ ಎಂದು ಆಂದೋಲನದ ಮುಖ್ಯಸ್ಥೆ ಝಾಕಿಯಾ ಸೋಮಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.