×
Home About Us Advertise With s Contact Us

ಬಂಟ್ವಾಳ :ಬುಶ್ರಾ ಆತ್ಮಹತ್ಯೆ ಪ್ರಕರಣ-ವರದಕ್ಷಿಣೆ ಕಿರುಕುಳ ಆರೋಪ

Bantwala NEWSಬಂಟ್ವಾಳ : ಮೆಲ್ಕಾರ್ ಸಮೀಪದ ಬೋಗೋಡಿಯಲ್ಲಿ ಸೋಮವಾರ ರಾತ್ರಿ ನಡೆದ ಬುಶ್ರಾ ಆತ್ಮಹತ್ಯೆ ಪ್ರಕರಣಕ್ಕೆ ಗಂಡನ ಮನೆಯವರ ವರದಕ್ಷಿಣೆ ಕಿರುಕುಳ ಕಾರಣವೆಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಬುಶ್ರಾ ಅವರ ತಂದೆ ಗೂಡಿನ ಬಳಿ ನಿವಾಸಿ ಇಬ್ರಾಹಿಂ ಅವರು, ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದು, ತನ್ನ ಪುತ್ರಿಯ ಸಾವಿಗೆ ಪತಿ ಇರ್ಫಾನ್ ಹಾಗೂ ಆತನ ತಾಯಿ ಕಾರಣ ಎಂದು ಆರೋಪಿಸಿದ್ದಾರೆ.

ಕಳೆದ 3 ವರ್ಷದ ಹಿಂದೆ ಇರ್ಪಾನ್ ಗೆ ಬುಶ್ರಾಳನ್ನು ವಿವಾಹ ಮಾಡಿಕೊಡಲಾಗಿತ್ತು. ವಿವಾಹದ ಸಂದರ್ಭ 20 ಪವನ್ ಚಿನ್ನ ಹಾಗೂ 2 ಲಕ್ಷದ ಬೇಡಿಕೆ ಇಟ್ಟಿದ್ದು, ಈ ಪೈಕಿ 17 ಪವನ್ ಚಿನ್ನ ಹಾಗೂ 2 ಲಕ್ಷ ನಗದು ವರದಕ್ಷಿಣೆಯಾಗಿ ನೀಡಲಾಗಿತ್ತು.

3 ಪವನ್ ಚಿನ್ನ ನೀಡಲು ಬಾಕಿ ಇದ್ದುದರಿಂದ ಪತಿ ಇರ್ಫಾನ್ ಹಾಗೂ ಅತ್ತೆ ನೀಡಿದ ಕಿರುಕುಳದಿಂದ ಬೇಸತ್ತು ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದವರು ದೂರಿನಲ್ಲಿ ತಿಳಿಸಿದ್ದಾರೆ. ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

 

Recent News

Back To Top
error: Content is protected !!