ಬೆಳ್ತಂಗಡಿ : ಜಿಲ್ಲಾಧಿಕಾರಿಯವರ ಆದೇಶವನ್ನು ಪಾಲಿಸದೇ ಶುಕ್ರವಾರ ತಾ| ಕಚೇರಿಯಲ್ಲಿ ಹಾಜರಾಗಿ ಕೆಲಸ ಮಾಡುತ್ತಿದ್ದ ನಿವೃತ್ತ ಉಪ ತಹಶೀಲ್ದಾರ್ ರಘುಚಂದ್ರ ಆಚಾರ್ ವಿರುದ್ದ ರಾಷ್ಟ್ರೀಯ ಮಾನವ ಅಧಿಕಾರ ಕೇಂದ್ರದ ಸದಸ್ಯ ಅಜಯ್ ಜಾಕೋಬ್ ಅವರು ಜಿಲ್ಲಾಧಿಕಾರಿಯವರಿಗೆ, ಲೋಕಾಯುಕ್ತಕ್ಕೆ, ದ.ಕ. ಜಿಲ್ಲಾ ಎಡಿಶನಲ್ ಎಸ್ಪಿ ಅವರಿಗೆ ದೂರು ನೀಡಿದ್ದಾರೆ.
ನಿವೃತ್ತಿಯಾದವರು ತಾಲೂಕು ಕಚೇರಿಯಲ್ಲಿನ ಕೆಲಸವನ್ನು ನಿರ್ವಹಿಸಿ, ತೊಂದರೆ ಮಾಡುತ್ತಿರುವ ಬಗ್ಗೆ ಗುರುವಾರ ಬೆಳ್ತಂಗಡಿ ತಾ| ಕಚೇರಿಗೆ ಭೇಟಿ ನೀಡಿದ ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ಸಾರ್ವಜನಿಕರು ಮನವಿ ಮಾಡಿದ್ದರು.
ನಿವೃತ್ತಿಯಾದವರು ಕಡತಗಳನ್ನು ಮನೆಗೆ ತೆಗೆದುಕೊಂಡು ಹೋಗುವುದು, ನಿಯಮದಂತೆ ಕಾರ್ಯನಿರ್ವಹಿಸದಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಗಳಾಗುತ್ತಿರುವುದನ್ನು ಮನಗಂಡ ಡಿಸಿಯವರು ಇನ್ನು ಮುಂದೆ ಅಂತಹವರು ತಾಲೂಕು ಕಚೇರಿಗೆ ಬರದಂತೆ ನೋಡಿಕೊಳ್ಳಬೇಕು ಎಂದು ತಹಸೀಲ್ದಾರರಿಗೆ ಸೂಚಿಸಿದ್ದರು.
ನನ್ನ ಸೂಚನೆಯನ್ನು ಮೀರಿ ಯಾರದರೂ ಬಂದಲ್ಲಿ, ಕಚೇರಿಯ ಕಡತಗಳಲ್ಲಿ ಕೈಯಾಡಿಸಿದರೆ ಅಂತವರ ವಿಡಿಯೋ ಚಿತ್ರೀಕರಣ ಮಾಡಿ ಕಳುಹಿಸಿ ಎಂದೂ ಸಾರ್ವಜನಿಕರಿಗೆ ತಿಳಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.