ಕಲ್ಲಡ್ಕ : ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ ಇಲ್ಲಿನ ಈ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆಗೆ ಹಾಜರಾದ 338 ವಿದ್ಯಾರ್ಥಿಗಳಲ್ಲಿ 323 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಒಟ್ಟು ಶೇ 96 ಫಲಿತಾಂಶ ದಾಖಲಾಗಿದೆ.
ವಾಣಿಜ್ಯ ವಿಭಾಗದಲ್ಲಿ ಚೈತ್ರ 569, ವಿಜ್ಞಾನ ವಿಭಾಗದಲ್ಲಿ ಸುಜಾತ 546, ಕಲಾ ವಿಭಾಗದಲ್ಲಿ ಸುಪ್ರಿತಾ 521 ಪಡೆದು ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ವಾಣಿಜ್ಯ ವಿಭಾಗದ ಹರ್ಷಿತಾಲಕ್ಷ್ಮೀ 557, ಆದರ್ಶ 553, ತ್ರಿವೇಣಿ 544, ಸುದರ್ಶನ್ 543, ರಮ್ಯಶ್ರೀ541, ಅಕ್ಷತಾ 536, ಪ್ರಜ್ಞಾ 534, ಪ್ರಮಿತ್ 532, ಸೌಮ್ಯಶ್ರೀ 531, ಕೆ.ಎಸ್. 531, ರಕ್ಷಿತ್ 530, ಹರ್ಷಿಕಾ 529, ಸಾಗರ್ 522, ಶ್ರಾವ್ಯ ಪೊಳಲಿ 521, ಚೇತನಾ 518, ಅನಿರೀಕ್ಷಿತಾ 516, ಯಶ್ಮಿತಾ ಹರ್ಷಿತಾ 513, ವಿಜ್ಞಾನ ವಿಭಾಗದ ಸತ್ಯಶ್ಯಾಮ 533, ಪ್ರಶಾಂತ ಕೆ.ವಿ 519, ವೀರೇಶ್ ಕುಮಾರ್ 518, ಕೃಷ್ಣಪ್ರಿಯ 518, ಅಸ್ಮಿತಾ ರೈ.ಬಿ. 515 ಒಟ್ಟು 25 ಮಂದಿ 85%ಕ್ಕಿಂತ ಅಧಿಕ, 230 ಮಂದಿ ಪ್ರಥಮ ಶ್ರೇಣಿಯಲ್ಲಿ, 48 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಚಾಲಕ ಡಾ. ಪ್ರಭಾಕರ ಭಟ್, ಅಧ್ಯಕ್ಷ ನಾರಾಯಣ ಸೋಮಯಾಜಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.