ಪುತ್ತೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿಗಳಾದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳಿಗೆ ದೇವಸ್ಥಾನದಿಂದ ನೋಟೀಸ್ ಜಾರಿ ಮಾಡಲಾಗಿರುವುದು ಭಕ್ತಾದಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ದೇವಸ್ಥಾನದ ಆಡಳಿತದ ಕಾರಣದಿಂದಲೇ ವಿವಾದಕ್ಕೆ ಒಳಗಾಗಿದ್ದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಈಗ ಮತ್ತೆ ಸುದ್ದಿಯಲ್ಲಿದೆ. ಈ ಬಾರಿ ಕೂಡಾ ಭಕ್ತಾದಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇವಸ್ಥಾನದ ತಂತ್ರಿಗಳಾದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳಾಗಿ ಕಳೆದ ೧೮ ವರ್ಷಗಳಿಂದ ಮಾರ್ಗದರ್ಶನ ಮಾಡುತ್ತಿದ್ದರು.
ಇದೀಗ ಕೇರಳದ ಚುನಾವಣೆ ವೇಳೆ ಕಾಸರಗೋಡು ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಫರ್ಧೆ ಮಾಡಿದ್ದರು. ಈ ಬಗ್ಗೆ ಭಕ್ತಾದಿಯೊಬ್ಬರು ದೂರು ನೀಡಿದರು ಎಂಬ ಕಾರಣಕ್ಕೆ ದೇವಸ್ಥಾನದಿಂದ ನೋಟೀಸ್ ನೀಡಲಾಗಿದೆ. ಇದು ಎಷ್ಟು ಸರಿ ಎಂಬುದು ಈಗ ಭಕ್ತಾದಿಗಳ ಪ್ರಶ್ನೆ. ರವೀಶ ತಂತ್ರಿ ಅವರು ದೇವಸ್ಥಾನದ ಖಾಯಂ ನೌಕರ ಅಲ್ಲ. ಅವರು ತಂತ್ರಿಗಳಾಗಿ ಮಾರ್ಗದರ್ಶನ ಮಾತ್ರವೇ ಮಾಡುತ್ತಿದ್ದಾರೆ. ಹಾಗಿದ್ದರೂ ಇಂತಹ ಪ್ರಕ್ರಿಯೆ ಏಕೆ ಎಂಬುದು ಪ್ರಶ್ನೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಾಲಿಂಗೇಶ್ವರ ದೇವರ ಭಕ್ತ ದಿನೇಶ್ ಕುಮಾರ್ ಜೈನ್, ರಾಜಕೀಯ ದ್ವೇಷ ಸಾಧನೆ ಮಾಡಿದರೆ ಸಹಿಸುವುದಿಲ್ಲ ಹಾಗೂ ಈ ಬಗ್ಗೆ ಪುತ್ತೂರು ಬಂದ್ ಮಾಡಿ ಪ್ರತಿಭಟನೆ ನಡೆಸಲು ಸಿದ್ದ ಹೇಳಿದ್ದಾರೆ. ದೇವಸ್ಥಾನದ ತಂತ್ರಿಗಳಾದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳು ಚುನಾವಣೆ ಸ್ಫರ್ಧಿಸಿದ್ದಾರೆ ಎನ್ನುವ ಕಾರಣಕ್ಕೆ ಬದಲಾವಣೆ ಮಾಡುವುದು ಸರಿಯಲ್ಲ.
ಚುನಾವಣೆಗೆ ಸರ್ಕಾರಿ ಅಧಿಕಾರಿಗಳು, ಸಿಬಂದಿಗಳು ಸ್ಫರ್ಧಿಸಬಾರದು ಎಂದು ನಿಯಮ ಇದೆ. ಅದರ ಹೊರತಾಗಿ ಬೇರೆ ಯಾವುದೇ ನಿಯಮ ಇಲ್ಲ. ಹಾಗಿದ್ದರೂ ರಾಜಕೀಯ ದ್ವೇಷ ಸಾಧನೆ ಮಾಡಿದರೆ ಸಹಿಸುವುದಿಲ್ಲ.ದೇವಸ್ಥಾನ ಸಿಬಂದಿಗಳೇ ವಿವಿಧ ಕೆಲಸ ಕಾರ್ಯದಲ್ಲಿ ತೊಡಗಿಕೊಂಡಿದ್ದರೂ ಮಾತನಾಡದೇ ಈಗ ತಂತ್ರಿಗಳ ಬಗ್ಗೆ ದೇವಸ್ಥಾನದ ಆಡಳಿತ ಮಾತನಾಡುವುದು ರಾಜಕೀಯ ಉದ್ದೇಶ ಎಂದು ದಿನೇಶ್ ಕುಮಾರ್ ಜೈನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.