ಮಂಗಳೂರು : ಆರೋಗ್ಯ ಇಲಾಖೆಯಲ್ಲಿ ಕಳಪೆ ಜೌಷಧಿ ಖರೀದಿ ಹಾಗೂ ಕಡಿಮೆ ಬೆಲೆಯ ಔಷಧಿಗಳಿಗೆ ದುಬಾರಿ ಬಿಲ್ಲು ಮಾಡಿ ಮಾರುವ ಅಪಾದನೆ ಒಳಗಾಗಿರುವ ಖಾದರ್ರವರು ರೂ.1250 ಕೋಟಿ ಭ್ರಷ್ಟಾಚಾರದ ವಿಚಾರ ಇದೀಗ ಬಹಿರಂಗಗೊಂಡಿದ್ದು, ಆರೋಗ್ಯ ಸಚಿವ ಯು.ಟಿ.ಖಾದರ್ರವರು ತನ್ನ ಇಲಾಖೆಯಲ್ಲಿ ಮುಂದುವರಿಯಲು ಅನರ್ಹರಾಗಿರುತ್ತಾರೆ.
ಅವರು ನೈತಿಕ ಹೊಣೆ ಹೊತ್ತು ತನ್ನ ಶಾಸಕ ಮತ್ತು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಮಾಜಿ ಶಾಸಕ ಕೆ.ಜಯರಾಮ್ ಶೆಟ್ಟಿ ಆಗ್ರಹಿಸಿದ್ದಾರೆ.
ಉಳ್ಳಾಲ ಕ್ಷೇತ್ರದ ಇತಿಹಾಸದಲ್ಲಿ ಪ್ರಪಥಮ ಬಾರಿಗೆ ಮಂತ್ರಿಯಾಗುವ ಅವಕಾಶ ಖಾದರ್ರವರಿಗೆ ಸಿಕ್ಕಿದ್ದು, ತನ್ನ ಸ್ಥಾನವನ್ನು ದುರುಪಯೋಗಪಡಿಸಿ ಭ್ರಷ್ಟಾಚಾರ ಎಸಗಿರುವುದರಿಂದ ಕ್ಷೇತ್ರದ ಜನತೆ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ಮಾಜಿ ಶಾಸಕ ಕೆ.ಜಯರಾಮ್ ಶೆಟ್ಟಿ ಆಪಾದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.