ಪುತ್ತೂರು : ವಂದೇ ಮಾತರಂ ಅಡಿಯಲ್ಲಿ ನಾವೆಲ್ಲ ಒಂದೆಂಬ ಭಾವನೆಯಿಂದ ಭಾರತದಲ್ಲಿ ಬಾಳಬೇಕು. ಇದನ್ನು ಹೊರತುಪಡಿಸಿ ಭಾರತವನ್ನು ಇಬ್ಭಾಗ ಮಾಡಲು ಹೊರಟರೆ ಅಂತಹವರನ್ನು ಗಡಿಪಾರು ಮಾಡಲಾಗುವುದು ಎಂದು ಬಜರಂಗದಳ ಮಂಗಳೂರು ವಿಭಾಗ ಸಂಚಾಲಕ ಮುರಳೀಕೃಷ್ಣ ಹಸಂತ್ತಡ್ಕ ಹೇಳಿದರು.
ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣಕ್ಕೆ ಖಂಡನೆ ಸೂಚಿಸಿ ಪುತ್ತೂರು ಬಸ್ನಿಲ್ದಾಣ ಮುಂಭಾಗ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಭಾರತದ ಏಕತೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಶ್ರಮ ಪಟ್ಟಿದ್ದರು. ಇಂದು ಅಂತಹ ಏಕತೆಯನ್ನು ಉಳಿಸಿಕೊಂಡು ಹೋಗಬೇಕಾದ ಕರ್ತವ್ಯ ನಮ್ಮೆಲ್ಲರ ಮೇಲಿದೆ. ಭಾರತದ ಕಿರೀಟವಾದ ಕಾಶ್ಮೀರವನ್ನು ಇಬ್ಭಾಗ ಮಾಡಿಕೊಡಲು ಅವಕಾಶ ನೀಡಬಾರದು. ದೇಶ ಜಗದ್ಗುರು ಆಗುವತ್ತ ಹೆಜ್ಜೆ ಹಾಕುತ್ತಿದ್ದಂತೆ ನಾವೆಲ್ಲ ಜಾಗೃತರಾಗಿರಬೇಕು. ಜಮ್ಮು ಕಾಶ್ಮೀರ ಭಯೋತ್ಪಾದನೆ ಮುಕ್ತವಾಗಿರಬೇಕು, ವಿದೇಶಿ ಪ್ರಭಾವ ಇರಬಾರದು ಎಂದು ಬಲವಾಗಿ ಪ್ರತಿಪಾದಿಸಲಾಗುವುದು. ಕಾಶ್ಮೀರದಲ್ಲಿ ಪಾಕಿಸ್ಥಾನ ಪರ ಘೋಷಣೆ ಹಾಕಿದರೆ ಅಂತಹವರನ್ನು ಗಡಿಪಾರು ಮಾಡಲು ಒತ್ತಾಯಿಸಿದರು. ಮುಂದೆಯೂ ಇಂತಹ ಘಟನೆ ಕಂಡುಬಂದಲ್ಲಿ, ಜಿಲ್ಲೆಯಾದ್ಯಂತ ರಸ್ತೆತಡೆ ನಡೆಸುವ ಎಚ್ಚರಿಕೆ ನೀಡಿದರು.
ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ದೇಶ ವಿಭಜನೆ ಮಾಡುವಂತಹ ಘಟನೆ ನಡೆಯುತ್ತಿದೆ. ಕಾಶ್ಮೀರದಲ್ಲಿ ಜೀವನವೇ ದುಸ್ತರ ಎಂಬಂತಹ ಪರಿಸ್ಥಿತಿ ಎದುರಾಗಿದೆ. ಇಂತಹ ಘಟನೆಯನ್ನು ರಾಜಕೀಯ ಶಕ್ತಿಗಳು ಖಂಡಿಸುತ್ತಿಲ್ಲ. ಸೂಕ್ತ ಕ್ರಮ ಕೈಗೊಳ್ಳುವಲ್ಲಿಯೂ ಹಿಂದೇಟು ಹಾಕುತ್ತಿವೆ. ಕಾಶ್ಮೀರದ ೩೭೦ನೇ ವಿಧಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿದರು.
ಬಜರಂಗದಳ ಪುತ್ತೂರು ಜಿಲ್ಲಾಧ್ಯಕ್ಷ ಡೀಕಯ್ಯ ಪೆರ್ವೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿಲ್ ಗೌಡ ತೆಂಕಿಲ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಮಾಧವ ಪೂಜಾರಿ, ಧನ್ಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.