ಮಂಗಳೂರು : ಭಾರತದ ಪ್ರಮುಖ ಫ್ಯಾಷನ್ ಬ್ರಾಂಡ್ಆಗಿರುವ ಮ್ಯಾಕ್ಸ್, ತನ್ನ `ಮ್ಯಾಕ್ಸ್ಕಿಡ್ಸ್ ಫೆಸ್ಟಿವಲ್’ ಅಂಗವಾಗಿ ‘ಮ್ಯಾಕ್ಸ್ ಲಿಟ್ಟಲ್ಐಕಾನ್’ ಎಂಬ ಪ್ರತಿಭಾನ್ವೇಷಣೆಕಾರ್ಯಕ್ರಮವನ್ನು ಆರಂಭಿಸಿದೆ. 2 ರಿಂದ 8 ವರ್ಷದೊಳಗಿನ ಮಕ್ಕಳನ್ನು ಗುರಿಯಾಗಿಸಿಕೊಂಡಿರುವ ಮ್ಯಾಕ್ಸ್ ಲಿಟ್ಟಲ್ಐಕಾನ್ ಪ್ರಮುಖ ಉದ್ದೇಶ, ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವುದಾಗಿದೆ.
ಮ್ಯಾಕ್ಸ್ ಲಿಟ್ಟಲ್ಐಕಾನ್ ಸ್ಪರ್ಧೆಯ ನೋಂದಣಿ ಪ್ರಕ್ರಿಯೆಯು ನಗರದ ಮ್ಯಾಕ್ಸ್ ಸ್ಟೋರ್ಗಳಲ್ಲಿ 2016ರ ಮೇ 12ರ ವರೆಗೆ ನಡೆಯಲಿದೆ. ಇದರೊಂದಿಗೆ http://mkf.maxfashionindia.com/ಗೆ ಲಾಗ್ಆನ್ ಆಗುವ ಮೂಲಕವೂ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಮೇ 12ರಂದು ಮಂಗಳೂರಿನ ಫೋರಮ್ ಫಿಜಾ ಮಾಲ್ನಲ್ಲಿ ಸ್ಪರ್ಧೆಯ ಆಡಿಷನ್ ನಡೆಯಲಿದೆ.
ಹಾಡುಗಾರಿಕೆ, ನೃತ್ಯ ಮತ್ತು ಡ್ರಾಯಿಂಗ್ಗೆ ಆಡಿಷನ್ ನಡೆಯಲಿದ್ದು, ಆಡಿಷನ್ನಲ್ಲಿ ಆಯ್ಕೆಯಾಗುವ ಮಕ್ಕಳು, ಮೇ 14ರಂದು ಮಂಗಳೂರಿನ ಫೋರಮ್ ಫಿಜಾ ಮಾಲ್ನಲ್ಲಿ ನಡೆಯಲಿರುವ ಗ್ರಾಂಡ್ ಫಿನಾಲೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಮ್ಯಾಕ್ಸ್ ಲಿಟ್ಟಲ್ಐಕಾನ್ ಸ್ಪರ್ಧೆಯಲ್ಲಿ ವಿಜೇತರಾದ ಮೂವರು ಮಕ್ಕಳು, ಜೂನ್ನಲ್ಲಿ ಮುಂಬೈ/ದೆಹಲಿಯಲ್ಲಿ ನಡೆಯಲಿರುವ `ಇಂಡಿಯಾಕಿಡ್ಸ್ ಫ್ಯಾಷನ್ ವೀಕ್’ ವೇಳೆ ರ್ಯಾಂಪ್ ವಾಕ್ ಮಾಡುವ ಅವಕಾಶ ಪಡೆಯಲಿದ್ದಾರೆ.
ಇದೇ ವೇಳೆ ಮ್ಯಾಕ್ಸ್ ಸ್ಟೋರ್ನಲ್ಲಿತಾಯಂದಿರಿಗಾಗಿ ಉಡುಪುಗಳ ವಿಶೇಷ ಬೇಸಿಗೆ ಸಂಗ್ರಹ ಕೂಡ ಇದೆ. ಇಲ್ಲಿ ಆಕರ್ಷಕ ಬಣ್ಣಗಳ, ಬೇಸಿಗೆಯ ಬಿಸಿಯನ್ನು ಹೊಡೆದೋಡಿಸುವ ಫ್ಯಾಷನಬಲ್ ಉಡುಪುಗಳಿವೆ. ಜತೆಗೆ ವಿವಿಧ ದೇಶಗಳ ಟೆಕ್ನಿಕ್ ಹಾಗೂ ಪ್ರಿಂಟ್ಗಳಿಂದ ಪ್ರಭಾವಿತವಾಗಿರುವ ಉಡುಪುಗಳು ಸ್ಟೋರ್ನಲ್ಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.