×
Home About Us Advertise With s Contact Us

ಹೈ ವೋಲ್ಟೆಜ್ ಪಂದ್ಯ ವೀಕ್ಷಿಸಲು ಅಭಿಮಾನಿಗಳ ಕಾತರ

indiaನವದೆಹಲಿ: ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಾಳೆ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ನಡುವಣ ಸೆಮಿಫೈನಲ್ ಕಾದಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹೈ ವೋಲ್ಟೆಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ನಾಳೆ ನಡೆಯುವ ಪಂದ್ಯದ ಎಲ್ಲಾ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿದೆ. ಅದರಲ್ಲೂ ಶೇ.70ರಷ್ಟು ಟಿಕೆಟ್‌ಗಳನ್ನು ಭಾರತೀಯರೇ ಖರೀದಿಸಿದ್ದಾರೆ. 75 ಸಾವಿರದವರೆಗ ಹಣ ನೀಡಲು ಮುಂದಾದರೂ ಕೆಲವರೂ ಟಿಕೆಟ್‌ನಿಂದ ವಂಚಿತರಾಗಿದ್ದಾರೆ.

ಇನ್ನೊಂದೆಡೆ ಭಾರತ-ಆಸ್ಟ್ರೇಲಿಯಾ ಪಂದ್ಯ ಭಾರತ-ಪಾಕಿಸ್ಥಾನ ಪಂದ್ಯಕ್ಕಿಂತ ಕಮ್ಮಿಯೇನೂ ಇಲ್ಲ. ಈ ಹಿಂದಿನ ಏಕದಿನ ಮತ್ತು ಟೆಸ್ಟ್‌ನಲ್ಲಿನ ಸೋಲಿನ ಸೇಡನ್ನು ಇಲ್ಲಿ ತೀರಿಸಿಕೊಳ್ಳುವ ತವಕದಲ್ಲಿ ಭಾರತೀಯರಿದ್ದಾರೆ.

ಇನ್ನು ಸಿಡ್ನಿ ಗ್ರೌಂಡ್‌ನಲ್ಲಿ 14 ಬಾರಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದು ಇದರಲ್ಲಿ ಭಾರತ ಕೇವಲ 1 ಬಾರಿ ಮಾತ್ರ ಗೆದ್ದಿದೆ. ಇದು ಆಸ್ಟ್ರೇಲಿಯಾದ ವಿಶ್ವಾಸವನ್ನು ವೃದ್ಧಿಸಿದೆ. ಆದರೆ ದೊನಿ ಬಾಯ್ಸ್ ಉತ್ತಮ ಫಾರ್ಮ್‌ನಲ್ಲಿರುವುದನ್ನು ಇವರು ಮರೆಯುವಂತಿಲ್ಲ.

ಇನ್ನು ದೋನಿ ಬಾಯ್ಸ್ ವಿಶ್ವಕಪ್ ಗೆಲ್ಲಲಿ ಎಂದು ದೇಶದ ನಾನಾ ಕಡೆ ಪೂಜೆ ಪುನಸ್ಕಾರಗಳೂ ನಡೆದಿದೆ. ಉಡುಪಿಯ ಶ್ರೀಕೃಷ್ಣನಿಗೂ ವಿಶೇಷ ಪೂಜೆ ಸಲ್ಲಿಸಲಾಗಿದೆ. ಅಲ್ಲಲ್ಲಿ ಯುವಕರು ಮಂಡಿ ಸೇವೆ ಸೇರಿದಂತೆ ನಾನಾ ಸೇವೆಗಳನ್ನು ನಡೆಸುತ್ತಿದ್ದಾರೆ.

 

Recent News

Back To Top
error: Content is protected !!