ಬೆಳ್ತಂಗಡಿ : ಮುಂಬಯಿಯಲ್ಲಿ ಸಂಬಂಧಿಕನಿಂದ ಹತ್ಯೆಗೀಡಾದ ಲಾಯಿಲಾ ಗ್ರಾಮದ ಪೆರಿಂದಿಲೆ ನಿವಾಸಿ ಶಾಲಿನಿ ಶೆಟ್ಟಿ ಸ್ಮರಣಾರ್ಥ ಆರಂಭಿಸಲಾಗಿರುವ ಶಾಲಿನಿ ಸೇವಾ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭ ಮಂಗಳವಾರ ಲಾಯಿಲಾ ಶ್ರೀ ಗುರುರಾಘವೇಂದ್ರ ಮಠದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಶಾಸಕ ವಸಂತ ಬಂಗೇರ ವಹಿಸಿದ್ದರು. ಅಡ್ವೆ ಮೋಡ್ರಗುತ್ತು ಉದ್ಯಮಿ ಚಿತ್ತರಂಜನ್ ಶೆಟ್ಟಿ ಅವರು ಪ್ರತಿಷ್ಠಾನವನ್ನು ಉದ್ಘಾಟಿಸಿದರು.
ಮುಖ್ಯತಿಥಿಗಳಾಗಿ ಹೈಕೋರ್ಟ್ ನ್ಯಾಯವಾದಿ ಹರೀಶ್ ಪೂಂಜ, ಬಂಟರ ಸಂಘದ ಅಧ್ಯಕ್ಷ ರಘುರಾಮ ಶೆಟ್ಟಿ ಸಾಧನಾ, ವೆಸ್ಟರ್ನ್ ಇಂಡಿಯಾ ಶನಿ ಮಹಾತ್ಮೆ ಸಮಿತಿ ವಿಠಲ ಶೆಟ್ಟಿ ಮುಂಬೈ, ಕಲಾವಿದ ರಂಗಕರ್ಮಿ ವಿಜಯ ತಿಂಗಳಾಯಿ, ಟ್ರಸ್ಟ್ನ ಅಧ್ಯಕ್ಷ ಜನಾರ್ದನ ಶೆಟ್ಟಿ ಪೆರಿಂದಿಲೆ, ಉಪಾಧ್ಯಕ್ಷರಾದ ಸಂಜೀವ ಶೆಟ್ಟಿ ರೇಷ್ಮೆರೋಡ್, ಶೇಖರ ಶೆಟ್ಟಿ, ರಾಜು ಶೆಟ್ಟಿಗುಜ್ಜೊಟ್ಟು, ದೀಪಕ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರತಿಷ್ಠಾನದ ವತಿಯಿಂದ ಶಾಲಿನಿ ಶೆಟ್ಟಿ ಅವರ ಹೆಸರನ್ನು ಶಾಸ್ವತವಾಗಿ ಉಳಿಸಲು ಅರ್ಹರಿಗೆ ವಿದ್ಯಾಭ್ಯಾಸ, ವೈದ್ಯಕೀಯ ಇತ್ಯಾದಿ ನೆರವು, ಸಾಂಸ್ಕೃತಿಕ ಪ್ರೋತ್ಸಾಹಗಳನ್ನು ಜಾತಿ ಭೇದವಿಲ್ಲದೆ ನೀಡುವಇರಾದೆ ಹೊಂದಲಾಗಿದ್ದು ಆ ಹಿನ್ನಲೆಯಲ್ಲಿ ನಿವೃತ ಸಿಸ್ಟರ್ ಜ್ಯೋತಿ ನವಮಣಿ ಸೋನ್ಸ್ ಪಡ್ಲಾಡಿ ಅವರಿಗೆ ಶಾಲಿನಿಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಿಶಾ ಎಸ್. ಶೆಟ್ಟಿ ಅವರನ್ನು ಶೈಕ್ಷಣಿಕ ದತ್ತು ಸ್ವೀಕಾರ ಮಾಡಲಾಯಿತು. ವಿದ್ಯಾರ್ಥಿ ಕೌಶಿಕ್ರಿಗೆ ವಿದ್ಯಾನಿಧಿ ಹಸ್ತಾಂತರಿಸಲಾಯಿತು. ರಾಘವೇಂದ್ರ ನಗರದ ಐಸಮ್ಮ ಅವರಿಗೆ ಅಕ್ಕಿಯನ್ನು, ಮೋಹಿನಿ ಅವರಿಗೆ ವಸ್ತ್ರದಾನ ಮಾಡಿ ಸೇವಾ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.
ಉದ್ಘಾಟನೆಯ ಅಂಗವಾಗಿ ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿಯಿಂದ ಶ್ರೀಪತಿ – ಶ್ರೀಮತಿ ತುಳು ಸಾಂಸಾರಿಕ ಯಕ್ಷಗಾನ ಬಯಲಾಟ ನಡೆಯಿತು. ಉಪನ್ಯಾಸಕಿ ಜಯಶ್ರೀ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು. ಶಾಲಿನಿ ಶೆಟ್ಟಿ ಅವರ ಪತಿ ತಾರನಾಥ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಸಿದರು. ದಿನೇಶ್ ಶೆಟ್ಟಿ ಸ್ಮರಣಗೀತೆ ಹಾಡಿ ಪ್ರಾರ್ಥನೆ ಸಲ್ಲಿಸಿದರು. ಸುರೇಶ್ ಶೆಟ್ಟಿ ಲಾಲ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.