ಮುಂಬಯಿ: ಭಾರತೀಯ ನೌಕಾಸೇನೆಗೆ ಸೇರಿದ ಪರಮಾಣು, ಜೈವಿಕ ಮತ್ತು ರಾಸಾಯನಿಕ ವಾತಾವರಣದಲ್ಲೂ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ಐಎನ್ಎಸ್ ವಿಶಾಖಪಟ್ಟಣಂ ನೌಕೆಯನ್ನು ಸೋಮವಾರ ಮುಂಬಯಿಯಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಸುಮಾರು 29,600 ಕೋಟಿ ವೆಚ್ಚದಲ್ಲಿ ಈ ನೌಕೆಯನ್ನು ಸಿದ್ಧಪಡಿಸಲಾಗಿತ್ತು, ಭಾರತದ ಅತಿದೊಡ್ಡ ಸಮರ ನೌಕೆ ಎನ್ನಲಾಗಿದೆ. ಭಾರತ ನೌಕಾ ಕ್ಷೇತ್ರಕ್ಕೆ ಅತಿಹೆಚ್ಚಿನ ಸಾಮರ್ಥ್ಯವನ್ನು ಇದು ತುಂಬಲಿದೆ. ಈ ಸಮರ ನೌಕೆ ಅತ್ಯಾಧುನಿಕ ಯುದ್ಧೋಪಕರಣಗಳನ್ನು ಹೊಂದಿದ್ದು, ಅತಿದೊಡ್ಡ ಗನ್ ವ್ಯವಸ್ಥೆಯನ್ನು ಹೊಂದಿದೆ.
ಸುಮಾರು 7,300 ಟನ್ ತೂಕವಿರುವ ಐಎನ್ಎಸ್ ವಿಶಾಖಪಟ್ಟಣ ಸಮರ ನೌಕೆಯನ್ನು ಮುಂಬೈನ ಡಾಕ್ ಯಾರ್ಡ್ ನಲ್ಲಿ ತಯಾರಿಸಲಾಗಿದೆ. 16 ಬ್ರಹ್ಮೋಸ್ ಬಹುದೂರಗಾಮಿ ಕ್ಷಿಪಣಿಗಳನ್ನು ಸಿಡಿಸಬಲ್ಲ ಸಾಮರ್ಥ್ಯವನ್ನು ಈ ಐಎನ್ಎಸ್ ವಿಶಾಖಪಟ್ಟಣಂ ಹೊಂದಿದ್ದು, ಅತ್ಯಾಧುನಿಕ ಎಕೆ 630 ಕ್ಷಿಪಣಿ ನಿರೋಧಕ ಗನ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಈ ನೌಕೆಯನ್ನು ೨೦೧೮ರಂದು ನೌಕಾಸೇನೆಗೆ ಸೇರ್ಪಡೆಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.