ಚಂಡೀಗಢ: ಬೇಸಿಗೆ ಕಾಲದಲ್ಲಿ ನೀರು ಪೋಲಾಗುವುದನ್ನು ತಡೆಯಲು ಸರಕಾರ ಖಡಕ್ ಕ್ರಮವನ್ನು ಜರಗಿಸಲು ಚಿಂತಿಸಿದ್ದು, ಬೆಳಗಿನ ಜಾವ ಕಾರು ತೊಳೆಯುವುದು ಮತ್ತು ಗಿಡಗಳಿಗೆ ನೀರುಣಿಸುವವರಿಗೆ ರೂ. 2000 ದಂಡವಿಧಿಸಲಿದೆ.
ಚಂಡೀಗಢ ಮಹಾನಗರಪಾಲಿಕೆ ಬೆಳಗಿನ ಹೊತ್ತು 5-30 ರಿಂದ 8-30 ರ ವರೆಗೆ ಕಾರು ತೊಳೆಯುವವರಿಗೆ ಅಥವಾ ಸಸ್ಯಗಳಿಗೆ ನೀರು ಹಾಕುವವರಿಗೆ ರೂ. 2000 ದಂಡ ವಿಧಿಸಲಿದೆ. ಈ ಮೂಲಕ ನೀರು ಪೋಲಾಗುವುದನ್ನು ತಡೆಯಲು ಚಿಂತನೆ ನಡೆಸಿದೆ.
ನೀರಿನ ಪೋಲಾಗುವುದರ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಈ ಅಭಿಯಾನ ನಡೆಯಲಿದ್ದು, ಎ.15 ರಿಂದ ಜೂ.30 ರ ವರೆಗೆ ನಗರಾದ್ಯಂತ ನೀರಿನ ಪೋಲನ್ನು ತಡೆಯಲು ವಿಶೇಷ ಆಂದೋಲನ ರೂಪಿಸಲಾಗುವುದು.
ಮಹಾನಗರಪಾಲಿಕೆ ಅಧಿಕಾರಿಗಳ 3 ಮಂದಿಯ 18 ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ನೀರು ಪೋಲು ಮಾಡುವವರ ವಿರುದ್ಧ ಕ್ರಮ ಕೈಗೊಂಡು ದಂಡ ವಿಧಿಸಲಿದ್ದಾರೆ ಎಂದು ಮಹಾನಗರಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಕೆ. ಧವನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.