ಮಂಗಳೂರು: ಎ.19ರಂದು ಮಂಗಳೂರಿನ ಪಡೀಲ್ ಲ್ಲಿ ‘ಫಸ್ಟ್ ನ್ಯೂರೋ’ ಎಂಬ ಬುದ್ಧಿಮಾಂದ್ಯ ಮಕ್ಕಳ ಆರೈಕೆಗಾಗಿ ಮೂವರು ತಜ್ಞ ವೈದ್ಯರುಗಳನ್ನೊಳಗೊಂಡ ಸೂಪರ್ ಸ್ಪೆಶಾಲಿಟಿ ನರರೋಗ ಚಿಕಿತ್ಸಾ ಆಸ್ಪತ್ರೆ ಉದ್ಘಾಟನೆಗೊಳ್ಳಲಿದೆ.
ಈ ಆಸ್ಪತ್ರೆಯನ್ನು ನಿವೃತ್ತ ಸುಪ್ರಿಂ ಕೋರ್ಟ್ ನ್ಯಾಯಾಧೀಶರಾದ ಜಸ್ಟಿಸ್ ಎನ್. ಸಂತೋಷ್ ಹೆಗ್ಡೆ ಅವರು ಉದ್ಘಾಟನೆಗೊಳಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಚಿವರುಗಳಾದ ಬಿ. ರಮಾನಾಥ ರೈ, ಯು. ಟಿ. ಖಾದರ್, ಆರೋಗ್ಯ ಅಭಯಚಂದ್ರ ಜೈನ್. ಸಂಸದ ನಳಿನ್ಕುಮಾರ್ ಕಟೀಲ್, ಶಾಸಕಾರದ ಜೆ.ಆರ್. ಲೋಬೊ, ಮೊಯಿದ್ದಿನ್ ಬಾವ, ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ, ಯೆನೆಪೋಯ ಅಬ್ದುಲ್ಲಾ ಕುಞಿ, ಎ.ಜೆ. ಶೆಟ್ಟಿ, ಮೋಹನ್ ಆಳ್ವಾ, ಸುಧೀರ ಶೆಟ್ಟಿ, ಭಾಗವಹಿಸಲಿದ್ದಾರೆ.
ತಜ್ಞ ವೈದ್ಯರುಗಳಾದ ಡಾ. ರಾಜೇಶ್ ಶೆಟ್ಟಿ, ಡಾ. ಸುನೀಲ್ ಶೆಟ್ಟ ಹಾಗೂ ಡಾ. ಶಂಕರ ಶೆಟ್ಟಿ ಅವರನ್ನು ಒಳಗೊಂಡ ನರರೋಗ ಚಿಕಿತ್ಸಾ ಘಟಕ ಇದಾಗಿದ್ದು, ಈ ಘಟಕವನ್ನು ಏಷ್ಯಾದ ಪ್ರಮುಖವಾದ ಆರ್ಕಿಟೆಕ್ (ಕಟ್ಟಡ ರಚನಕಾರರಾದ) ಆರ್ಕಿಮಿಡಿಸ್(1) ಎನ್ನುವ ಸಂಸ್ಥೆ ಅತ್ಯಂತ ನೂತನ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಏಷ್ಯಾದ ಕೆಲವು ಆಸ್ಪತ್ರೆಗಳಲ್ಲಿ ಮಾತ್ರ ಈ ಬಗೆಗಿನ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ.
ಈ ಭಾಗದ ಕಾಗದ ರಹಿತ ಪ್ರಥಮ ಆಸ್ಪತ್ರೆ ಇದಾಗಿದೆ ಮತ್ತು ಪೆನ್ಯುಮೆಟಿಕ್, ಪ್ರನಾಳ ತಂತ್ರಜ್ಞಾನದ ಮುಖಾಂತರ ಸುಲಭ ಹೆರಿಗೆ, ಔಷಧಿಗಳು, ರಕ್ತದ ವಿವಿಧ ಗ್ರೂಪ್ಗಳನ್ನು ಸುಸಜ್ಜಿತವಾಗಿ ಸಂಗ್ರಹಿಸಿ ಇಡುವ ವ್ಯವಸ್ಥೆಯನ್ನು ಹೊಂದಿದೆ.
ವಿಶ್ವದ ವಿವಿಧ ಭಾಗಗಳ ತಜ್ಞರ ನೆರವಿನೊಂದಿಗೆ ಅನೇಕ ಕ್ಲಿಷ್ಟಕರ ಸನ್ನಿವೇಶಗಳಾದ ಎಪಿಲೆಪ್ಸಿ, ಪಾರ್ಕಿನ್ಸನ್, ನರವ್ಯೂಹಗಳ ದುರ್ಬಲತೆ, ನ್ಯೂರೊರೇಡಿಯೊ ಚಿಕಿತ್ಸೆ, ನ್ಯೂರಾಲೊಜಿಯ ವಿವಿಧ ಸಂಕೀರ್ಣ ಸಮಸ್ಯೆಗಳಿಗೆ ಇಲ್ಲಿ ಪರಿಹಾರವಿದೆ.
ಈ ಘಟಕ ಒದಗಿಸುವ ಸೌಲಭ್ಯಗಳು :
ಜನರಲ್ ನ್ಯೂರಾಲಜಿ
ನ್ಯೂರೊ ಸರ್ಜರಿ
ಸುಧಾರಿತ ಪದ್ಧತಿಯ ಸಿ.ಟಿ. ಇಂ.ಆರ್.ಐ. ಸ್ಕ್ಯಾನಿಂಗ್ ಮುಖಾಂತರ ನ್ಯೂರೊ ಇಮೇಜಿಂಗ್
ಆಧುನಿಕ ಪದ್ಧತಿಯ ನ್ಯೂರೋ ಪುನಶ್ಚೇತನ ಘಟಕ.
ಪೇಡಿಯಾಟ್ರಿಕ್ ನ್ಯೂರಾಲಜಿ
ಅರ್ಧಾಂಗವಾಯು ಚಿಕಿತ್ಸೆ.
ಎಪಿಲೆಪ್ಸಿ ಘಟಕ
ಪಾರ್ಕಿನ್ಸನ್ ಹಾಗೂ ನರದೌರ್ಬಲ್ಯ ಚಿಕಿತ್ಸೆ
ತುರ್ತು ಚಿಕಿತ್ಸಾ ಘಟಕ (ಐ.ಸಿ.ಯು. ಒಳಗೊಂಡಂತೆ)
ಪಿಜಿಯೋಟ್ರಿಕ್ ಚಿಕಿತ್ಸೆ
ವಿಡಿಯೋ ಇ.ಇ.ಜಿ.
24 ಗಂಟೆ ಫಾರ್ಮಸಿ ಹಾಗೂ ಲ್ಯಾಬೋರೇಟರಿ
ಈ ಎಲ್ಲ ಸೌಲಭ್ಯಗಳನ್ನೊಳಗೊಂಡ ಆಧುನಿಕ ಚಿಕಿತ್ಸಾ ಪದ್ಧತಿ ಘಟಕ ರವಿವಾರ 19 ಎಪ್ರಿಲ್ 2015ರಂದು ಸಾರ್ವಜನಿಕ ಸೇವೆಗೆ ಸಿದ್ಧಗೊಳ್ಳಲಿದೆ.
ನ್ಯೂರೊಲೊಜಿ ಮತ್ತು ನ್ಯೂರೊಸರ್ಜರಿ ಪ್ರಮುಖವಾದ ಚಿಕಿತ್ಸಾ ಪದ್ಧತಿ. ಈ ಮೊದಲು ಅತಿ ಸುಸಜ್ಜಿತ ತಜ್ಞರನ್ನೊಳಗೊಂಡ ನ್ಯೂರೋಸೈನ್ಸ್ ಘಟಕ ಈ ಭಾಗದಲ್ಲಿ ಇರಲಿಲ್ಲ. ನ್ಯೂರೋಸೈನ್ಸ್ನಲ್ಲಿ ಅನೇಕ ವಿವಿಧ ಸ್ತರದ ಚಿಕಿತ್ಸಾ ಪದ್ಧತಿಗಳಿವೆ. ಈ ವಿಭಾಗದ ಜನರಿಗೆ ವಿವಿಧ ಸೇವೆಗಳ ತಜ್ಞರನ್ನೊಳಗೊಂಡ ಸುಸಜ್ಜಿತವಾದ ಆಸ್ಪತ್ರೆ ಒಂದೇ ಸೂರಿನಡಿ ಲಭ್ಯವಾಗಲಿದ್ದು ಇದು ಆಧುನಿಕ ಚಿಕಿತ್ಸಾ ಪದ್ಧತಿಯ ನ್ಯೂರೋಕೇರ್ ಘಟಕವೆಂದು ಹೇಳಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.