ಬೆಳ್ತಂಗಡಿ : ಪ್ರಾಚೀನ ದೇಗುಲಗಳ ನವೀಕರಣದಿಂದ ಜನರಿಗೆ ಪುಣ್ಯ ಪ್ರಾಪ್ತಿಯಾಗುವುದರಲ್ಲಿ ಎರಡು ಮಾತಿಲ್ಲ. ಇದರಿಂದ ನೂರು ಹೊಸ ದೇವಾಲಯಗಳ ನಿರ್ಮಾಣದ ಫಲ ಸಿಗುತ್ತದೆಎಂದು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ನುಡಿದರು.ಅವರು ಬೆಳಾಲು ಗ್ರಾಮದ ಮಾಯಾ ಮಹಾದೇವ ದೇವಸ್ಥಾನದ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಸಂಭ್ರಮದ ಕೊನೆಯ ದಿನವಾದ ಭಾನುವಾರ ಸಂಜೆ ನಡೆದಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ದೈವೀ ಶ್ರದ್ದೆಗಳ ಕೇಂದ್ರ ಸ್ಥಾನವೇ ದೇವಸ್ಥಾನಗಳು. ಇದರ ನಿರ್ಮಾಣದಲ್ಲಿ ಮಾನವನ ಇಚ್ಚೆಯೊಂದಿಗೆ ದೈವೀಚ್ಛೆ ಬೇಕು. ದೇವರು ಬಿಂಬ, ನಾವು ಪ್ರತಿಬಿಂಬ. ಪಾಳು ಬಿದ್ದದೇವಸ್ಥಾನ, ನಾಗಬನ, ದೈವಸ್ಥಾನಗಳ ಜೀರ್ಣೋದ್ಧಾರದಿಂದ ನಮ್ಮ ಬದುಕು ಕೂಡಾ ಹಸನಾಗುತ್ತದೆ. ಧರ್ಮಎಂಬುದು ಬದುಕಿನ ನಡೆ. ಆದರೆ ನಾವು ಯಾವರೀತಿ ಬದುಕುತ್ತೇವೆ ಎಂಬುದು ಮುಖ್ಯ. ದೈವೀ ಪ್ರಜ್ಞೆ, ನಂಬಿಕೆಯಿಂದಧರ್ಮ ಉಳಿಯುತ್ತದೆ. ಇದನ್ನು ಉಳಿಸಿಕೊಂಡು ಧರ್ಮವನ್ನು ಬೆಳೆಸಿಕೊಂಡು ಶ್ರದ್ದೆಯಿಂದ ಬದುಕಬೇಕು ಎಂದರು.
ಸಭಾಧ್ಯಕ್ಷತೆ ವಹಿಸಿ ಮಾತನಾಡಿದಜೀರ್ಣೋದ್ಧಾರ ಸಮಿತಿಗೌರವಾಧ್ಯಕ್ಷ, ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಅವರು, ಯಾವುದೇ ಅವಕಾಶಗಳು ಬರಬೇಕಾದರೆಯೋಗ ಬೇಕು. ದೇವಾಲಯಗಳು ಮನೆ ಇದ್ದಂತೆ. ಶುಚಿತ್ವ ಇದ್ದಲ್ಲಿ ದೇವರ ಸಾನಿಧ್ಯವಿರುತ್ತದೆ. ದೇಗುಲಗಳ ನಿರ್ಮಾಣ ಮಾಡಿದ ಬಳಿಕ ಸ್ವಚ್ಚತೆ ಹಾಗೂಅಭಿವೃದ್ಧಿಯ ಜವಾಬ್ದಾರಿ ಊರಿನ ಜನರದ್ದು. ಪ್ರತಿಯೊಬ್ಬನಲ್ಲೂ ನಮ್ಮದೇವಸ್ಥಾನ ಎಂಬ ಅಭಿಮಾನ ಬೇಕು. ದೇವಾಲಯಕ್ಕೆ ಭಕ್ತರು ಬಂದಾಗ ಸಾನಿಧ್ಯ ಬೆಳೆಯುತ್ತದೆ. ದೇಗುಲಕ್ಕೆ ಬರುವ ಭಕ್ತರುಧನಾತ್ಮಕ ಚಿಂತನೆಯಿಂದ ಬರಬೇಕು ಎಂದ ಅವರು ದೇವಾಲಯಗಳಲ್ಲಿ ಜಾತಿ ಹಾಗೂ ರಾಜಕೀಯವನ್ನು ಬೆರೆಸಬಾರದು. ಇಲ್ಲಿನ ಗ್ರಾಮಸ್ಥರು ದೇಗುಲದ ನಿರ್ಮಾಣ ಕಾರ್ಯದಲ್ಲಿ ನಿಷ್ಕಲ್ಮಶ ಹಾಗೂ ಅಹರ್ನಿಶಿಯಾಗಿ ದುಡಿದಿದ್ದಾರೆಎಂದು ಶ್ಲಾಘಿಸಿದರು.
ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ವಿಜಯರಾಘವ ಪಡ್ವೆಟ್ನಾಯ, ಉಜಿರೆ ಎಸ್.ಪಿ.ಆಯಿಲ್ ಮಿಲ್ನ ಶಿವಕಾಂತ್ ಗೌಡ, ಬೆಳಾಲು ಉಪವಲಯಾರಣ್ಯಧಿಕಾರಿ ರವೀಂದ್ರ ಅಂಕಲಗಿ, ಬೆಳಾಲು ಗ್ರಾಪಂ ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಸದಸ್ಯರಾದ ಸುರೇಂದ್ರಗೌಡ ಸುರುಳಿ, ದಯಾನಂದ ಬೆಳಾಲು, ಕುಸುಮಾವತಿ, ಪ್ರೇಮ, ಆಡಳಿತ ಮೊಕ್ತೇಸರ ವೆಂಕಟರಮಣಗೌಡ ಕೈಕುರೆ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎಚ್.ಪದ್ಮಗೌಡ, ಕಾರ್ಯದರ್ಶಿ ಶೇಖರಗೌಡ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಜಾರಾಮ ಶರ್ಮ, ಉಪಾಧ್ಯಕ್ಷ ನಾರಾಯಣ ಸುವರ್ಣ, ಪ್ರಧಾನ ಕಾರ್ಯದರ್ಶಿ ದಾಮೋದರ ಗೌಡ, ಕಾರ್ಯದರ್ಶಿ ಮೋಹನ ಗೌಡ, ಆನುವಂಶಿಕ ಮೊಕ್ತೇಸರ ಪ್ರಕಾಶ್ ಕುಮಾರ್, ಶ್ರೀ ಮಾಯಾ ಮಹೇಶ್ವರ ಭಜನಾ ಮಂಡಳಿ ಅಧ್ಯಕ್ಷ ಮೋಹನ ಪೂಜಾರಿ ಉಪಸ್ಥಿತರಿದ್ದರು.
ದೇವಸ್ಥಾನದ ಪರವಾಗಿ ಶಶಿಧರ, ಶೇಖರ ಪೆಲತ್ತಡಿ, ಬಾಲಚಂದ್ರ ಆಚಾರ್ಯ, ಸೋಮೇ ಗೌಡ, ದಾಮೋದರ ಗೌಡ, ಶೇಖರಗೌಡ ಅವರನ್ನು ಸನ್ಮಾನಿಸಲಾಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಚ್. ಪದ್ಮಗೌಡಅವರನ್ನು ಧರ್ಮಸ್ಥಳ ಕ್ಷೇತ್ರದ ಪರವಾಗಿ ಗೌರವಿಸಲಾಯಿತು. ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಸೋಮೇ ಗೌಡ ಪ್ರಸ್ತಾವಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ರಾಮಕೃಷ್ಣ ಭಟ್ ವಂದಿಸಿದರು. ಕಾರ್ಯದರ್ಶಿ ಮೋಹನ್ ಗೌಡ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.