ಬೆಳ್ತಂಗಡಿ : ಮಾನವನ ಹುಟ್ಟಿನ ಉದ್ದೇಶವೇ ಧರ್ಮ ಸಾಧನೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು. ಬೆಳಾಲು ಗ್ರಾಮದ ಮಾಯಾ ಮಹಾದೇವದೇವಸ್ಥಾನದ ಪುನರ್ ಪ್ರತಿಷ್ಠಾಷ್ಟಬಂಧಬ್ರಹ್ಮಕಲಶೋತ್ಸವ ಸಂಭ್ರಮದ ೮ ದಿನವಾದ ಶನಿವಾರರಾತ್ರಿ ನಡೆದಧಾರ್ಮಿಕ ಸಭೆಯಲ್ಲಿಅವರು ಆಶೀರ್ವಚನ ನೀಡಿದರು.
ಯಾರಲ್ಲಿ ಶಿಸ್ತು, ಸಂಯಮಇರುತ್ತದೋಅಲ್ಲಿದೇವರು ನೆಲೆಸುತ್ತಾನೆ. ಸ್ವಯಂಶಿಸ್ತು ವ್ಯಕ್ತಿಯಲ್ಲಿರುವುದುಅವಶ್ಯ.ಅಜ್ಞಾನದಿಂದ ಮಲೀನಗೊಂಡಿರವ ನಾವು ಅಂತಃಕರಣ ಶುದ್ದಿಯಾಗದ ಹೊರತು ಸದಾಚಾರಿಗಳಾಗಲು ಸಾಧ್ಯವಿಲ್ಲ. ವಿಜ್ಞಾನ ಮತ್ತುಆಧ್ಯಾತ್ಮಒಟ್ಟಿಗೇ ಸಾಗಬೇಕು.ಜ್ಞಾನಕ್ಕೂ ವಿಜ್ಞಾನಕ್ಕೂ ವ್ಯತ್ಯಾಸವಿಲ್ಲ. ಮಕ್ಕಳಿಗೆ ದೇವರ ಬಗೆಗಿನ ಜ್ಞಾನದ ಸಂಸ್ಕಾರವನ್ನು ಹಿರಿಯರು ನೀಡಬೇಕುಎಂದಅವರು ಮಕ್ಕಳಿಗೆ ಎಲ್ಲಾ ಬಗೆಯ ಸಂಸ್ಕಾರಗಳನ್ನು ವಿದ್ಯಾಸಂಸ್ಥೆಯೊಂದಕ್ಕೆ ಕಳುಹಿಸಿದರೆ ಸಿಗುತ್ತದೆ ಎಂಬ ತಪ್ಪುಕಲ್ಪನೆ ಪೋಷಕರಲ್ಲಿಇದೆ. ಆದರೆ ಸಂಸ್ಕಾರದ ವಿಚಾರಕ್ಕೆ ಬಂದಾಗತಂದೆ-ತಾಯಿಯಜವಾಬ್ದಾರಿ ಹೆಚ್ಚಿರುತ್ತದೆಎಂದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಅವರು ಹಳ್ಳಿಯವರು ಸ್ವಾಭಾವಿಕವಾಗಿ ಧರ್ಮವನ್ನು ಆಚರಿಸುತ್ತಾರೆ. ಸ್ಪರ್ಧಾತ್ಮಕ ದೃಷ್ಟಿಯಲ್ಲಿ ಧರ್ಮವನ್ನು ನೋಡದೆ ಅದು ಆಚರಣೆಯಲ್ಲಿ ಬರುವಂತಾಗಬೇಕು. ಹೃದಯದಲ್ಲಿ ಭಗವಂತನನ್ನು ತುಂಬಿ ಕೊಂಡಾಗ ಆಗ ನಾವು ಮಾಡುವ ಎಲ್ಲ ಕೆಲಸಗಳಿಗೆ ಭಗವಂತ ಸಾಕ್ಷಿಯಾಗಿರುತ್ತಾನೆ, ಹೀಗಾಗಿ ಕೆಟ್ಟದ್ದು, ಒಳ್ಳೆಯದು ಯಾವುದು ಎಂಬ ಆಲೋಚನೆಯೊಂದಿಗೆ ಮುಂದುವರಿಯಬೇಕು. ದೇವಸ್ಥಾನಗಳು ನಮ್ಮನ್ನು ಸರಿಯಾದ ದಿಕ್ಕಿಗೆ ಕೊಂಡೊಯ್ಯಲು ಇರುವ ದಾರಿದೀಪಗಳು ಎಂದರು. ಈ ಸಂದರ್ಭ ಅವರು ಮಹಾಪ್ರಸಾದ ಎಂಬ ದೇಗುಲದ ಸ್ಮರಣ ಸಂಚಿಕೆಯ ಮುಖಪುಠವನ್ನು ಅನಾವರಣಗೊಳಿಸಿದರು.
ಮಂಗಳೂರು ಶ್ರೀ ಆದಿಚುಂಚನಗಿರಿ ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಲಾಲ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ವಿವೇಕಾನಂದ ಪ್ರಭು, ಬೇಗೂರು ನಾಗನಾಥೇಶ್ವರ ದೇವಳದ ಧರ್ಮದರ್ಶಿ ನಾರಾಯಣ ಬೇಗೂರು, ಉಜಿರೆರಬ್ಬರ್ ಸೊಸೈಟಿಯ ಅಧ್ಯಕ್ಷ ಶ್ರೀಧರ ಜಿ. ಭಿಡೆ, ಬೆಳ್ತಂಗಡಿ ಮೈತ್ರಿಎಂಟರ್ಪ್ರೈಸಸ್ನ ಪೃಥ್ವೀರಂಜನ್ ರಾವ್, ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕುಶಾಲಪ್ಪಗೌಡ, ಗ್ರಾಪಂ ಸದಸ್ಯೆ ಭವಾನಿ, ಆಡಳಿತ ಮೊಕ್ತೇಸರ ವೆಂಕಟರಮಣ ಗೌಡ ಕೈಕುರೆ, ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಶೇಖರಗೌಡ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸೋಮೇ ಗೌಡ, ಪ್ರಧಾನ ಕಾರ್ಯದರ್ಶಿ ದಾಮೋದರಗೌಡ, ಕಾರ್ಯದರ್ಶಿ ಮೋಹನ ಗೌಡ, ಆನುವಂಶಿಕ ಮೊಕ್ತೇಸರ ಪ್ರಕಾಶ್ಕುಮಾರ್, ಶ್ರೀ ಮಾಯಾ ಮಹೇಶ್ವರ ಭಜನಾ ಮಂಡಳಿ ಅಧ್ಯಕ್ಷ ಮೋಹನ ಪೂಜಾರಿಇದ್ದರು.
ಗ್ರಾ.ಯೋ. ಒಕ್ಕೂಟ ಹಾಗೂ ದೇವಳದ ವತಿಯಿಂದಡಾ| ಹೆಗ್ಗಡೆಯವರನ್ನು, ಬ್ರಹ್ಮಕಲಶೋತ್ಸವದನೇತೃತ್ವ ವಹಿಸಿದ್ದ ನೀಲೇಶ್ವರ ಪದ್ಮನಾಭ ತಂತ್ರಿಗಳನ್ನು, ದೇಗುಲದ ಶಿಲ್ಪಿ ಈಶ್ವರಚಂದ್ರ ಕಿನ್ನಿಗೋಳಿ, ಜೀರ್ಣೋದ್ಧಾರ ಸಮಿತಿಅಧ್ಯಕ್ಷಎಚ್. ಪದ್ಮಗೌಡ ಅವರುಗಳನ್ನು ಸಮ್ಮಾನಿಸಲಾಯಿತು.
ಜೀರ್ಣೋದ್ದಾರ ಸಮಿತಿಅಧ್ಯಕ್ಷಎಚ್. ಪದ್ಮಗೌಡ ಪ್ರಸ್ತಾವಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ರಾಮಕೃಷ್ಣ ಭಟ್ಕಾರ್ಯಕ್ರಮ ನಿರ್ವಹಿಸಿ, ಧರ್ಮೇಂದ್ರಕುಮಾರ್ ವಂದಿಸಿದರು.
ಪ್ರಕೃತಿಯ ಮೇಲೆ ನಾವು ಮಾಡುವಅನಾಚಾರದ ಫಲಿತಾಂಶಘೋರವಾಗಿರುತ್ತದೆ.ಪ್ರಕೃತಿಯುತನ್ನನ್ನುತಾನು ಸರಿಮಾಡಿಕೊಳ್ಳುತ್ತದೆ.ಇದರಿಂದ ಶಿಕ್ಷೆ ನಮಗೇ.ಪ್ರಕೃತಿಯಿಂದ ನಮಗೆ ಶಿಕ್ಷೆ ಸಿಗುವ ಮೊದಲು ನಾವು ಸಂಯಮಿಗಳಾಗಬೇಕು- ನಿರ್ಮಲಾನಂದ ಶ್ರೀ
ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ ಹಾಗೂ ಸರಕಾರದ ವಿವಿಧ ಯೋಜನೆಗಳಿಂದ ಬೆಳಾಲು ಗ್ರಾಮಅಭಿವೃದ್ಧಿ ಹೊಂದಿದೆಇಲ್ಲಿನಜನರ ಬದುಕಿನಲ್ಲಿ ಬದಲಾವಣೆಯಾಗಿದೆ- ಡಾ|ಹೆಗ್ಗಡೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.