ಕಾಪು : ಕಾಪುವಿನ ಮೂರು ಮಾರಿಗುಡಿಗಳಲ್ಲೂ ಏಕಕಾಲಧಿದಲ್ಲಿ ಜರಗುವ ತುಳುನಾಡಿನ ಏಳು ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಸುಗ್ಗಿ ಮಾರಿಪೂಜೆಗೆ ವೈಭವದ ಚಾಲನೆ ದೊರಕಿದೆ.
ಕಾಪು ಶ್ರೀ ಹಳೇ ಮಾರಿಗುಡಿ ದೇವಸ್ಥಾನ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಶ್ರೀ ಮೂರನೇ(ಕಲ್ಯ) ಮಾರಿಗುಡಿ ದೇವಸ್ಥಾನದಲ್ಲಿ ನಡೆಯುವ ಸುಗ್ಗಿ ಮಾರಿಪೂಜೆಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೇ ಘಟ್ಟದ ಪ್ರದೇಶ ಹಾಗೂ ಕೇರಳ, ಮಹಾರಾಷ್ಟ್ರದಿಂದಲೂ ಲಕ್ಷಾಂತರ ಭಕ್ತರು ಭಾಗಧಿವಹಿಸುತ್ತಾರೆ.
ಗದ್ದುಗೆಯೇ ಪ್ರಧಾನವಾಗಿರುವ ಮೂರೂ ಮಾರಿಗುಡಿಗಳಲ್ಲಿ ಮಂಗಳಧಿವಾರ ರಾತ್ರಿ ಹೊಂಗೆ ಮರದಿಂದ ತಯಾರಿಸಿದ ಮಾರಿಯಮ್ಮ ದೇವಿಯ ಬೊಂಬೆಯನ್ನು ತಂದು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.ಇದೇ ವೇಳೆ ಮೂರು ಮಾರಿಗುಡಿಗಳಿಗೂ ಸಂಬಂಧಪಟ್ಟ ದೇವಸ್ಥಾನಗಳಿಂದ ಮೆರವಣಿಗೆಯ ಮೂಲಕ ತಂದ ಆಭರಣಗಳಿಂದ ಶೃಂಗರಿಸಿ ಮಾರಿಪೂಜೆ ಸಂಬಂಧಿ ದರ್ಶನ ಸೇವೆ ನಡೆಯುತ್ತದೆ. ಈ ಮೂಲಕ ಮಾರಿಪೂಜಾ ವಿಧಿ-ವಿಧಾನಗಳು ಸಂಪನ್ನಗೊಳ್ಳುತ್ತವೆ. ನಾಡಿನೆಲ್ಲೆಡೆಯಿಂದ ಆಗಮಿಸುವ ಭಕ್ತರು ವಿವಿಧ ಹರಕೆ ಸೇವೆಗಳನ್ನು ಸಲ್ಲಿಸಿದ ಬಳಿಕ ಸಂಜೆ ವಿಧಿ-ವಿಧಾನಗಳನ್ನು ಪೂರೈಸಿ ಬಳಿಕ ಮಾರಿಯಮ್ಮ ದೇವಿಯನ್ನು ಗದ್ದುಗೆಯಿಂದ ಕೆಳಗಿಳಿಸಿದ ಅನಂತರ ಕಾಪು ಮಾರಿ ಪೂಜೆಗೆ ಅಧಿಕೃತವಾಗಿ ತೆರೆ ಬೀಳಲಿದೆ.
ಸಂಸದೆ, ಸಚಿವರ ಭೇಟಿ : ಸುಗ್ಗಿ ಮಾರಿಪೂಜೆಯ ಪ್ರಯುಕ್ತ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಸಹಿತ ವಿವಿಧ ಗಣ್ಯರು ಮೂರು ಮಾರಿಗುಡಿಗಳಿಗೆ ಭೇಟಿ ನೀಡಿ ಕ್ಷೇತ್ರ ದರ್ಶನ ನಡೆಸಿದ್ದಾರೆ.
ಪೊಲೀಸ್ ಬಂದೋಬಸ್ತ್ : ಸುಗ್ಗಿ ಮಾರಿಪೂಜೆಯ ಪ್ರಯುಕ್ತ ಕಾಪುವಿನಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರಥಮ ಬಾರಿಗೆ 30ಕ್ಕೂ ಅಧಿಕ ಸಿಸಿ ಕೆಮರಾ ಕಣ್ಗಾವಲು ಇಡಲಾಗಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.