ನವದೆಹಲಿ: ಭಾರತದ ಅತೀ ಚಿಕ್ಕ ಸಮುದಾಯವಾಗಿರುವ ಪಾರ್ಸಿಗಳು ತಮ್ಮನ್ನು ತಾವು ಅಲ್ಪಸಂಖ್ಯಾತರು ಎಂದು ಎಂದಿಗೂ ಕರೆಸಿಕೊಂಡಿಲ್ಲ, ಅವರ ಈ ಮನಃಸ್ಥಿತಿಯೇ ಇಂದು ಅವರನ್ನು ’ರೋಲ್ ಮಾಡೆಲ್’ಗಳನ್ನಾಗಿಸಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಶನಿವಾರ ಅಲ್ಪಸಂಖ್ಯಾತ ಮತ್ತು ಸಾಂಸ್ಕೃತಿಕ ಸಚಿವಾಲಯ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೇಟ್ಲಿ, ವಿವಿಧ ವಲಯಗಳಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ ಪ್ರಗತಿಪರ ಮತ್ತು ವಿಶಾಲ ಹೃದಯಿ ಪಾರ್ಸಿಗಳನ್ನು ಕೊಂಡಾಡಿದರು.
’ಅತೀ ಚಿಕ್ಕ ಸಮುದಾಯವಾದರೂ ಅವರು ಎಂದಿಗೂ ತಮ್ಮನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸಿಲ್ಲ, ಇದರಿಂದಾಗಿಯೇ ಅವರು ದೇಶಕ್ಕೆ ಮಾದರಿ ಎನಿಸಿದರು’ ಎಂದರು.
ಇರಾನಿನಿಂದ ಭಾರತಕ್ಕೆ ವಲಸೆ ಬಂದಿರುವ ಪಾರ್ಸಿಗಳು ತಮ್ಮ ಸಂಸ್ಕೃತಿಯನ್ನು ಸಂರಕ್ಷಿಸಿಕೊಂಡ ಬಗೆಗೆ, ಕೈಗಾರಿಕೆ, ಸೇನೆ, ಕಾನೂನು, ಸಿವಿಲ್ ಸರ್ವಿಸ್ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಕ್ಕೇರಿದ ರೀತಿಗೆ ಜೇಟ್ಲಿ ಶ್ಲಾಘನೆ ವ್ಯಕ್ತಪಡಿಸಿದರು.
ಇದೆ ವೇಳೆ ಶತಕಗಳ ಹಿಂದೆ ಪಾರ್ಸಿಗಳು ಬಂದಿಳಿದ ಗುಜರಾತಿನ ಉದ್ಯದ ನಗರವನ್ನು ಜಾಗತಿಕ ಸಾಂಸ್ಕೃತಿಕ ಕೇಂದ್ರವನ್ನು ರೂಪಿಸುವುದಾಗಿ ಜೇಟ್ಲಿ ಘೋಷಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.