ಉಡುಪಿ : ಜಯಂಟ್ಸ್ ಗ್ರೂಪ್ ಆಫ್ ಎವರ್ಗ್ರೀನ್ ಸಹೆಲಿ ಮತ್ತು ಡಾ. ಟಿ.ಎಂ.ಎ. ಪೈ. ಹಾಸ್ಪಿಟಲ್ ಇದರ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಮಾಹಿತಿ ಶಿಬಿರ ಇದರಲ್ಲಿ ಮಹಿಳೆಯರಿಗೆ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರನಡೆಯಿತು.
ಈ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಬಗ್ಗೆ ಡಾ. ಶಶಿಕಲಾ ಭಟ್ ಮಾತನಾಡುತ್ತಾ ಮಹಿಳೆಯರಲ್ಲಿ 35 ರಿಂದ 40 ವರ್ಷ ವಯಸ್ಸಿನ ಮಹಿಳೆಯರಲ್ಲಿ ಕ್ಯಾನ್ಸರ್ ರೋಗ ಹೆಚ್ಚಾಗಿ ಕಂಡುಬರುತ್ತದೆ. ರೋಗ ಬರುವ ಮೊದಲೇ ಮುಂಜಾಗ್ರತೆ ವಹಿಸುವುದು ಅತೀ ಅವಶ್ಯಕ. ಮಿತವಾದ ಆಹಾರ ಸೇವನೆ, ದಿನನಿತ್ಯವೂ ಯೋಗ ಮತ್ತು ವ್ಯಾಯಾಮ ಮಾಡುವುದರಿಂದ ಕ್ಯಾನ್ಸರ್ ರೋಗ ತಡೆಗಟ್ಟಲು ಸಾಧ್ಯವಾಗುವುದು. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮೆಮೆಗ್ರಮ್ ಪರೀಕ್ಷಾ ಮುಖಾಂತರ ದೇಹದ ಯಾವುದೇ ಅಂಗಾಗಗಳಲ್ಲಿ ಕ್ಯಾನ್ಸರ್ನ್ನು ಪತ್ತೆಹಚ್ಚಬಹುದು ಎಂದು ಹೇಳಿದರು.
ಗರ್ಭಕೋಶದ ಕ್ಯಾನ್ಸರ್ ತಜ್ಞೆ – ಡಾ. ಪಾರ್ವತಿ ಭಟ್.(ಸ್ತ್ರೀರೋಗ ತಜ್ಞರು, ಟಿ.ಎಂ.ಎ. ಪೈ. ಹಾಸ್ಪಿಟಲ್ ಉಡುಪಿ) ಇವರು ಮಾತನಾಡುತ್ತಾ ಗರ್ಭಕೋಶದ ಕ್ಯಾನ್ಸರ್ನ್ನು ರೇಡಿಯೋತೆರಪಿ’ ಮೂಲಕ ನಿಯಂತ್ರಿಸಬಹುದು. ಕ್ಯಾನ್ಸರ್ ಅನುವಂಶಿಕವಾಗಿ ಕುಟುಂಬ ಸದಸ್ಯರಲ್ಲಿ ಹೆಚ್ಚಾಗಿ ಕಂಡುಬರುವುದೆಂದು ಸಭೆಗೆ ತಿಳಿಸಿದರು.
ಸ್ಥನ ಕ್ಯಾನ್ಸರ್ ತಜ್ಞರಾದ ಡಾ. ಕಲ್ಯಾ ವಿನಾಯಕ ಶೆಣೈ (ಶಸ್ತ್ರಶಿಕಿತ್ಸಕರು- ಟಿ.ಎ.ಪೈ. ಹಾಸ್ಪಿಟಲ್, ಉಡುಪಿ) ಮಾತನಾಡುತ್ತಾ ಸ್ಥನದ ಕ್ಯಾನ್ಸರ್ ರೋಗದಲ್ಲಿ ಇದು ಭಯಾನಕ ಹಾಗೂ ಮಹಿಳೆಯರಿಗೆ ಇದೊಂದು ದೊಡ್ಡ ಮಾರಕ ರೋಗವಾಗಿದೆ. ಹಾರ್ಮೋನುಗಳ ವ್ಯತ್ಯಾಸದಿಂದ ಕ್ಯಾನ್ಸರ್ ಬರುತ್ತದೆ. ಗುಣಲಕ್ಷಣಗಳು ಈ ರೀತಿ ಇವೆ. ಸ್ಥನದ ತೊಟ್ಟು ಗಟ್ಟಿಯಾಗಿ ಗೆಡ್ಡೆರೂಪದಲ್ಲಿ, ಗಾಯದ ರೂಪದಲ್ಲಿ ಕಾಣಬಹುದು. ವೈದ್ಯರಲ್ಲಿ ಮುಚ್ಚುಮರೆಯಿಲ್ಲದೆ ತಿಳಿಸಿ, ಅದಕ್ಕೆ ಬೇಕಾದ ಚಿಕಿತ್ಸೆಯನ್ನು ಅಲ್ಟ್ರಾಸೌಂಡ್ ಮೂಲಕ ಮಾಡಬಹುದು ಎಂದು ಸಭೆಗೆ ತಿಳಿಸಿದರು.
ಜಯಂಟ್ಸ್ ಎವರ್ಗ್ರೀನ್ ಸೆಹಲಿಯ ಅಧ್ಯಕ್ಷರಾದ ಶ್ರೀಮತಿ ಸರಿತಾ ಡಿ’ಸೋಜ ಸ್ವಾಗತಿಸಿದರು. ಜಯಂಟ್ಸ್ ವಲಯ ನಿರ್ದೇಶಕ ಶ್ರೀ ದೇವದಾಸ ಕಾಮತ್ ಪ್ರಾಸ್ತಾವಿಕ ಭಾಷಣ ಮಾಡಿದರು. ಶ್ರೀಮತಿ ಕೀರ್ತನಾ ವಂದನಾರ್ಪಣೆಗೈದರು. ಶ್ರೀಮತಿ ಶೈಲಾ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ನೂರಾರು ಮಹಿಳೆಯರು, ಜಯಂಟ್ಸ್ ಸಂಸ್ಥೆಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ರೋಗಿಗಳಿಗೆ ಉಚಿತ ತಪಾಸಣೆ ಶಿಬಿರ ನಡೆಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.