ನವದೆಹಲಿ: ಆಹಾರ ಸಂಸ್ಕರಣ ವಲಯದಲ್ಲಿ ಶೇ.100 ಎಫ್.ಡಿ.ಐ.ಗೆ ಸರ್ಕಾರ ಪ್ರಸ್ತಾಪಿಸಿದ್ದು, ಇದರಲ್ಲಿ ಹಿನ್ನಡೆ ಉಂಟಾಗಿರುವ ಹಿನ್ನೆಲೆಯಲ್ಲಿ ಭಾರತೀಯ ವ್ಯಾಪಾರ ಪ್ರಚಾರ ಸಂಸ್ಥೆ (ಐಟಿಪಿಒ) ಮಾ.15ರಂದು ಅಂತಾರಾಷ್ಟ್ರೀಯ ಆಹಾರ ಮತ್ತು ಆತಿಥ್ಯ (Food &Hospitality) ಮೇಳವನ್ನು ಆಯೋಜಿಸಿದೆ.
ನಾಲ್ಕು ದಿನಗಳ ಕಾಲ ನಡೆಯಲಿರುವ ’ಆಹಾರ್’ ಮೇಳವನ್ನು ಕೃಷಿ ಮತ್ತು ಆಹಾರ ಉತ್ಪನ್ನ ಪ್ರಕ್ರಿಯೆ ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ಹಾಗೂ ಆಹಾರ ಸಂಸ್ಕರಣೆ ಕೈಗಾರಿಕೆ ಸಚಿವಾಲಯದ ಸಹಯೋಗದೊಂದಿಗೆ ಐಟಿಪಿಒ ಆಯೋಜಿಸುತ್ತಿದೆ.
ಆಹಾರ ಸಂಸ್ಕರಣಗಳ ಕೈಗಾರಿಕೆ ಸಚಿವ ಹರ್ಸಿಮ್ರತ್ ಕೌರ್ ಆಹಾರ ಮೇಳವನ್ನು ಉದ್ಘಾಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮೇಳವು ಜಾಗತಿಕ ಹೂಡಿಕೆದಾರರ ಹೂಡಿಕೆಗೆ ಹೊಸ ಮಾರ್ಗಗಳನ್ನು ಕಲ್ಪಿಸಲಿದ್ದು, ಸರ್ಕಾರದ ’ಮೇಕ್ ಇನ್ ಇಂಡಿಯಾ’, ’ಸ್ಕಿಲ್ ಇಂಡಿಯಾ’, ’ಸ್ಟಾರ್ಟ್ ಅಪ್ ಮತ್ತು ಸ್ಟ್ಯಾಂಡ್ ಅಪ್ ಇಂಡಿಯಾ’ ಯೋಜನೆ ಅಡಿಯಲ್ಲಿ ನ್ಯಾಯೋಚಿತ ವ್ಯಾಪಾರ ಸ್ನೇಹಿ ನೀತಿ ಹಾಗೂ ಸಕ್ರಿಯ ಆಡಳಿತ ಮುಂತಾದ ವೈಶಿಷ್ಟ್ಯಗಳನ್ನು ಹೊಂದಲಿದೆ ಎಂದು ಹೇಳಲಾಗಿದೆ.
ಈ ಬಾರಿಯ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಕೃಷಿ ವಲಯಕ್ಕೆ ವಿಶೇಷ ಒತ್ತು ನೀಡಿದ್ದು, ದೇಸೀಯ ಆಹಾರ ಪದಾರ್ಥಗಳ ಉತ್ಪಾದನೆ ಮತ್ತು ಮಾರುಕಟ್ಟೆಗೆ ಶೇ.100 ಎಫ್ಡಿಐ ಒದಗಿಸಲು ನಿರ್ಧರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.