ನವದೆಹಲಿ: ಜೂನ್ 18ರಂದು ಭಾರತೀಯ ವಾಯುಸೇನೆ ಹೊಸ ಇತಿಹಾಸ ಬರೆಯಲಿದೆ. ಮೂರು ಮಂದಿ ಮಹಿಳೆಯರು ದೇಶದ ಮೊತ್ತ ಮೊದಲ ಮಹಿಳಾ ಫೈಟರ್ ಪೈಲೆಟ್ಗಳಾಗಿ ನಿಯೋಜನೆಗೊಳ್ಳಲಿದ್ದಾರೆ. ಸಮಸ್ತ ಭಾರತೀಯ ಮಹಿಳೆಯ ಪಾಲಿಗೂ ಇದೊಂದು ಹೆಮ್ಮೆಯ ಕ್ಷಣವಾಗಲಿದೆ.
ಆದರೆ ಫೈಟರ್ ಪೈಲೆಟ್ಗಳಾಗುವ ಈ ಮೂರು ತರಬೇತಿ ನಿರತ ಮಹಿಳೆಯರ ಹಾದಿ ಅಷ್ಟು ಸುಲಭವಾಗಿಲ್ಲ. ಇದಕ್ಕಾಗಿ ಅವರು ನಾಲ್ಕು ವರ್ಷ ತಮ್ಮ ತಾಯ್ತನದ ಸುಖವನ್ನು ಮುಂದೂಡಬೇಕಾಗಿದೆ.
ಇನ್ನು ನಾಲ್ಕು ವರ್ಷ ಗರ್ಭ ಧರಿಸುವುದನ್ನು ವಿಳಂಬಗೊಳಿಸುವಂತೆ ವಾಯುಸೇನೆ ಈ ಮೂವರು ಮಹಿಳೆಯರಿಗೆ ಸಲಹೆ ನೀಡಿದೆ. ಇವರ ವೃತ್ತಿಗೆ ತೊಡಕಾಗಬಾರದು ಎಂಬ ಕಾರಣಕ್ಕೆ ಈ ಸೂಚನೆಯನ್ನು ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.