ನವದೆಹಲಿ: ಬಿಜೆಪಿಯ ಹಿರಿಯ ಮುಖಂಡ ಯಶವಂತ್ ಸಿನ್ಹಾ ಅವರಿಗೆ ಎಎಪಿ ಪಕ್ಷ ಬಲೆ ಬೀಸಿದ್ದು, ದೆಹಲಿ ಸರ್ಕಾರದ ಬಜೆಟ್ ರಚನೆಯಲ್ಲಿ ಅವರ ಸಹಾಯವನ್ನು ಪಡೆದುಕೊಳ್ಳಲು ಮುಂದಾಗಿದೆ. ಇದು ಕೇಂದ್ರ ಸರ್ಕಾರಕ್ಕೆ ತೀವ್ರ ಮುಜುಗರನ್ನುಂಟು ಮಾಡಲಿದೆ.
ಮಾ.15ರಂದು ದೆಹಲಿ ಸರ್ಕಾರ ಬಜೆಟ್ ಮಂಡನೆ ಮಾಡಲಿದೆ.
ಬಿಜೆಪಿಯ ಮಾರ್ಗದರ್ಶಕ್ ಮಂಡಲ್ನಲ್ಲಿರುವ ಸಿನ್ಹಾ, ಈಗಾಗಲೇ ಹಲವಾರು ಬಾರಿ ಮಾರ್ಗದರ್ಶಕ್ ಮಂಡಲ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಇದು ಬಿಜೆಪಿಯ ಹಿರಿಯರನ್ನು ಸೈಡ್ಲೈನ್ ಮಾಡಿದೆ ಎಂಬ ಆರೋಪವಿದೆ.
ಎಲ್ಕೆ ಅಡ್ವಾಣಿ, ಯಶವಂತ್ ಸಿನ್ಹಾ, ಮುರಳಿ ಮನೋಹರ್ ಜೋಶಿ ಅವರುಗಳೂ ಈ ಹಿಂದೆ ಹಲವಾರು ಬಾರಿ ಬಿಜೆಪಿ ನಾಯಕತ್ವದ ಬಗ್ಗೆ ಅಪಸ್ವರ ಎತ್ತಿದ್ದಾರೆ.
ಸಿನ್ಹಾ ಅವರು ವಾಜಪೇಯಿ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದು, ಆರ್ಥಿಕ ತಜ್ಞರೂ ಆಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.