ಮುಂಬಯಿ: ಜಗತ್ತಿನಾದ್ಯಂತ ಕ್ರಿಕೆಟ್ ಪ್ರೇಮಿಗಳ ಬಹುನಿರೀಕ್ಷಿತ ವಿಶ್ವ ಟಿ-20 ಮಾ.8ರಿಂದ ಆರಂಭಗೊಂಡಿದೆ. ಪುರುಷರ ವಿಭಾಗದಲ್ಲಿ 35 ಪಂದ್ಯಗಳು ಹಾಗೂ ಮಹಿಳಾ ಟಿ-20 ವಿಭಾಗದಲ್ಲಿ 23 ಪಂದ್ಯಗಳು ನಡೆಯಲಿವೆ.
ವಿಶ್ವ ಟಿ-20 ಪಂದ್ಯಗಳು ಬೆಂಗಳೂರು, ಚೆನ್ನೈ, ಧರಂಶಾಲಾ, ಕೋಲ್ಕತಾ, ಮುಂಬಯಿ, ದೆಹಲಿ, ಮೊಹಾಲಿ ಹಾಗೂ ನಾಗ್ಪುರಗಳಲ್ಲಿ ಆಡಲಾಗುತ್ತಿದೆ.
ಪುರುಷರ ಟಿ-20 ಮೂರು ಹಂತಗಳಲ್ಲಿ ಆಡಲಾಗುತ್ತಿದ್ದು, ಮೊದಲ ಹಂತದಲ್ಲಿ ಮಾ.8ರಿಂದ ಮಾ.13ರ ವರೆಗೆ ’ಎ’ ಗ್ರೂಪ್ನ ಬಾಂಗ್ಲಾದೇಶ, ನೆದರ್ಲೆಂಡ್, ಐರ್ಲೆಂಡ್ ಹಾಗೂ ಒಮಾನ್ ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ.
ಮತ್ತೊಂದೆಡೆ ’ಬಿ’ ಗ್ರೂಪ್ನ ಜಿಂಬಾಬ್ವೆ, ಸ್ಕಾಟ್ಲೆಂಡ್, ಹಾಂಗ್ಕಾಂಗ್ ಮತ್ತು ಅಫ್ಘಾನಿಸ್ಥಾನ ಸೆಣಸಲಿವೆ. ಈ ಹಂತದಲ್ಲಿ ಜಯ ಸಾಧಿಸಿದ ಎರಡು ತಂಡಗಳು ಸೂಪರ್ ೧೦ ಹಂತದಲ್ಲಿ ಆಡಲಿವೆ.
ಗ್ರೂಪ್ 1: ಶ್ರೀಲಂಕಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಹಾಗೂ ಗ್ರೂಪ್ ಬಿ ವಿಜೇತ ತಂಡ.
ಗ್ರೂಪ್ 2: ಭಾರತ, ಪಾಕಿಸ್ಥಾನ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಗ್ರೂಪ್ ಎ ವಿಜೇತ ತಂಡ.
ಮೂರನೇ ಹಂತದಲ್ಲಿ ಮಾ.30 ಹಾಗೂ 31ರಂದು ಸೆಮಿಫೈನಲ್ ಪಂದ್ಯಗಳು ದೆಹಲಿ ಮತ್ತು ಮುಂಬಯಿಗಳಲ್ಲಿ ಆಡಲಾಗುತ್ತಿದ್ದು, ಎ.3ರಂದು ಕೋಲ್ಕತಾದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಭಾರತ ತನ್ನ ಮೊದಲ ಪಂದ್ಯದಲ್ಲಿ ಮಾ.15ರಂದು ನ್ಯೂಜಿಲೆಂಡ್, ಮಾ.19ರಂದು ಪಾಕಿಸ್ಥಾನ, ಮಾ.23 ರಂದು ಗ್ರೂಪ್ ಎ ವಿಜೇತ ತಂಡ ಹಾಗೂ ಮಾ.27ರಂದು ಆಸ್ಟ್ರೇಲಿಯಾ ತಂಡಗಳನ್ನು ಎದುರಿಸಲಿದೆ.
ಟಿ-20 ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆ ಹಾಗೂ ಸಂಜೆ 7.30ರಿಂದ ಆರಂಭವಾಗಲಿವೆ.
ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭಗೊಳ್ಳಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.