ಪುತ್ತೂರು : ಹಿಂದೂ ಧರ್ಮವು ಸನಾತನ ಧರ್ಮವಾಗಿದ್ದು, ಧರ್ಮ ವಿರೋಧಿಗಳನ್ನು ಹೆಮ್ಮೆಟ್ಟಿಸಲು ಹಿಂದೂ ಸಮಾಜ ಸಿದ್ದವಿದೆ. ಈ ಭಾಗದ ದೇವಸ್ಥಾನದಲ್ಲಿ ಇಫ್ತಾರ್ ಕೂಟ ನಡೆಸುತ್ತಿದ್ದಕ್ಕೆ ಬೆಂಬಲವಾಗಿ ನಿಂತವರಿಗೆ ಈ ಬಾರಿ ಜನತೆ ಬುದ್ದಿ ಕಲಿಸಿದ್ದಾರೆ. ಈ ಬಾರಿ ಚುನಾವಣೆಯ ಗೆಲುವು ಧರ್ಮಕ್ಕೆ ಸಂದ ಜಯವಾಗಿದೆ. ಧರ್ಮವನ್ನು ರಕ್ಷಣೆಗೆ ನಿಂತರೆ ಧರ್ಮನಮ್ಮನ್ನು ರಕ್ಷಿಸುತ್ತದೆ ಎಂದು ಹಿಂದೂ ಸಂಘಟನೆಗಳ ಮುಂದಾಳು ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಅವರು ಸರ್ವೆ ಹಿಂದೂ ಜಾಗರಣ ವೇದಿಕೆಯ ವತಿಯಿಂದ ರಕ್ತೇಶ್ವರಿ ಕಟ್ಟೆಯ ಬಳಿ ನಡೆದ ೩ನೇ ವರ್ಷದ ಆಶ್ಲೇಷ ಬಲಿಯ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಹಿಂದೂ ಧರ್ಮವು ಸಂಸ್ಕಾರ,ಸಂಸ್ಕೃತಿಯಲ್ಲಿ ಬೆಸದುಕೊಂಡಿದೆ. ಇದನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಹಿಂ.ಜಾ.ವೇ.ಯ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಮಾತನಾಡಿ, ಹಿಂದೂ ಧರ್ಮವು ನಂಬಿಕೆ, ಸಂಸ್ಕಾರ, ಮೌಲ್ಯಗಳ ದ್ಯೋತಕ, ನಮ್ಮನಮ್ಮೊಳಗೆ ಬೇಧ ಬೇಡ, ಹಿಂದೂ ಧರ್ಮ ಜಗತ್ತಿಗೆ ಶ್ರೇಷ್ಟ ವಿಚಾರಧಾರೆ ನೀಡಿದ ಧರ್ಮ. ಮಕ್ಕಳನ್ನು ಉತ್ತಮ ನಾಗರೀಕರನಾಗಿ ರೂಪುಗೊಳ್ಳುವಲ್ಲಿ ಹೆತ್ತವರ ಪಾತ್ರದೊಡ್ಡದು, ಪರಸ್ಪರ ವಿಶ್ವಾಸದಿಂದ ಬದುಕುವ ಪಾಠವನ್ನು ಹಿಂದೂ ಧರ್ಮ ಸಾರಿದೆ. ಪ್ರತೀ ಮನೆಯಲ್ಲೂ ಸಂಸ್ಕಾರ, ಸಂಸ್ಕೃತಿಗಳ ಕುರಿತು ಹಿರಿಯರು ಕಿರಿಯರಿಗೆ ತಿಳಿ ಹೇಳುವ ಕಾರ್ಯವಾಗಬೆಕು.ಧರ್ಮ ಉಳಿದರೆ ದೇಶ ಉಳಿದೀತು. ಪ್ರತಿಯೋರ್ವರು ಕೂಡ ಧರ್ಮ ರಕ್ಷಣೆಗೆ ಕಟಿಬದ್ದರಾಗಬೇಕು ಎಂದು ಅವರು ಹೇಳಿದರು.
ಪುತ್ತೂರು ಹಿಂ.ಜಾ.ವೇಯ ಗೌರವಾಧ್ಯಕ್ಷ ಡಾ| ಎಂ.ಕೆ.ಪ್ರಸಾದ್ ಭಂಡಾರಿ ಮಾತನಾಡಿ, ದೇಶದ್ರೋಹಿಗಳನ್ನು ಬೆಂಬಲಿಸುವವರನ್ನು ದೇಶದಿಂದ ಹಿಮ್ಮೆಟ್ಟಿಸಬೇಕು. ದೇಶದ ಸೈನಿಕರು ತಮ್ಮು ಪ್ರಾಣವನ್ನು ಒತ್ತೆಯಿಟ್ಟು ದೇಶಕ್ಕಾಗಿ ಹೋರಾಡುತ್ತಿದ್ದರೆ ಇತ್ತ ಜೆಎನ್ಯು ಕಾಲೇಜಿನಲ್ಲಿ ಅಫ್ಜಲ್ ಗುರುವನ್ನು ಬೆಂಬಲಿಸುತ್ತಾರೆಂದರೆ ಇದು ನಮ್ಮ ದುರಂತ. ಮೊದಲು ಇಂತವರನ್ನು ಹೊರದಬ್ಬಬೇಕಾಗಿದೆ. ರಾಜಕೀಯ ಕಾರಣಕ್ಕಾಗಿ ಇಂತಹ ಮನಸ್ಥಿತಿಯವರಿಗೆ ಬೆಂಬಲ ನೀಡುವವರು ದೇಶವನ್ನು ನಿರ್ನಾಮ ಮಾಡಲು ಹೆಸರು. ದೇಶದ ಹೊರಗಿನ ಭಯೋತ್ಪಾದಕರಿಗಿಂತ ದೇಶದೊಳಗಿನ ಇಂತವರೇ ಹೆಚ್ಚು ಅಪಾಯಕಾರಿ. ಇಂದು ಕೆಲಮಾಧ್ಯಮಗಳು ಸತ್ಯ ವಿಚಾರವನ್ನು ಮರೆಮಾಚುವ ಕೆಲಸಮಾಡುತ್ತಿದೆ. ನಮ್ಮ ಧರ್ಮ ರಕ್ಷಣೆ ನಮ್ಮಿಂದಲೇ ಆಗಬೇಕಿದೆ. ಸದ್ವಿಚಾರಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ, ಶ್ರೀ ರಕ್ತೇಶ್ವರಿ ಸೇವಾ ಸಮಿತಿ ಸರ್ವೆಯ ಅಧ್ಯಕ್ಷ ಉದಯ ಕುಮಾರ್ ತಂತ್ರಿ ಮಾತನಾಡಿ, ದಾರ್ಮಿಕತೆ ಕಾರ್ಯಗಳಿಂದ ಧರ್ಮ ಉಳಿಸುವ ಕಾರ್ಯವಾಗುತ್ತಿದೆ. ಮುಂದೆ ಸರ್ವೆ ರಕ್ತೇಶ್ವರಿ ಸೇವಾ ಸಮಿತಿಯಿಂದ ಶಾಶ್ವತ ನಿಧಿಯನ್ನು ಕ್ರೋಢಿಕರಿಸಿ ವಿವಿಧ ಅಭಿವೃದ್ದಿ ಕಾರ್ಯಮಾಡಲಾಗುವುದು. ಜತೆಗೆ ದಾನಿಗಳ ನೆರವಿನಿಂದ ವಿಜ್ರಂಬಣೆಯಿಂದ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.
ವೇದಿಕೆಯಲ್ಲಿ ಹಿಂ.ಜಾ.ವೇಯ ಜಿಲ್ಲಾ ಸಂಚಾಲಕ ರವಿರಾಜ್ ಶೆಟ್ಟಿ ಕಡಬ, ಪುತ್ತೂರು ಎಬಿವಿಪಿ ಘಟಕದ ಅಧ್ಯಕ್ಷೆ ಹರಿಣಿ ಪುತ್ತೂರಾಯ, ಪುತ್ತೂರು ಹಿಂ.ಜಾ.ವೇ.ಯ ಸಂಚಾಲಕ ಅಜಿತ್ ರೈ ಹೊಸಮನೆ,ಉದ್ಯಮಿ ವಿಜಯ ಕುಮಾರ್ ರೈ ಸರ್ವೆ, ಸರ್ವೆ ಹಿಂ.ಜಾ.ವೇ.ಯ ಗೌರವಾಧ್ಯಕ್ಷ ಬೆಳಿಯಪ್ಪ ಗೌಡ ಸರ್ವೆ, ಕಾರ್ಯದರ್ಶಿ ಪ್ರವೀಣ್ ನಾಯ್ಕ ನೆಕ್ಕಿತಡ್ಕ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅರ್ಚಕ ಶ್ರೀರಾಮ ಕಲ್ಲೂರಾಯ, ತಾ.ಪಂ.ಸದಸ್ಯ ಶಿವರಂಜನ್,ಜಿ.ಪಂ.ಸದಸ್ಯೆ ಮೀನಾಕ್ಷಿ ಶಾಂತಿಗೋಡು ಅವರನ್ನು ಗೌರವಿಸಲಾಯಿತು. ವಿನಯ ಕುಮಾರ್ ,ಲೋಕೇಶ್, ಕರಿಯಪ್ಪ ಸರ್ವೆ, ಲಕ್ಷ್ಮೀಶ್ ರೈ, ಧನಂಜಯ ಕಲ್ಕಾರು, ಕೀರ್ತೀಶ್ ಸರ್ವೆ,ಉದಯ ಪೂಜಾರಿ ,ಮೀನಾಕ್ಷಿ ಸರ್ವೆ ಅತಿಥಿಗಳನ್ನು ಗೌರವಿಸಿದರು.
ವೇಣುಗೋಪಾಲ ಶೆಟ್ಟಿ ಮೇಗಿನಗುತ್ತು ಸ್ವಾಗತಿಸಿ, ಸರ್ವೆ ಹಿಂ.ಜಾ.ವೇ. ಅಧ್ಯಕ್ಷ ನವೀನ್ ರೈ ಸರ್ವೆ ವಂದಿಸಿದರು.ಮನ್ಮಥ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.