ಬೈಂದೂರು: ನಾಯಕತ್ವದ ಗುಣ, ಹೃದಯ ಶ್ರೀಮಂತಿಕೆ ಇದ್ದು, ಕೀಳರಿಮೆ ಬಿಟ್ಟಾಗ ಸಮಾಜದಲ್ಲಿ ಮುಂದುವರಿಯಲು ಸಾಧ್ಯ. ಅಂಬೇಡ್ಕರ್ರವರು ಸಮಾನತೆಗಾಗಿ ಹೋರಾಟ ನಡೆಸದೇ ಇದ್ದಿದ್ದರೇ, ನಮ್ಮಂತವರು ಶಾಸಕರಾಗುತ್ತಿರಲಿಲ್ಲ ಎಂದು ಶಾಸಕ ಕೆ.ಗೋಪಾಲ ಪೂಜಾರಿ ತಮ್ಮ ಬಾಲ್ಯದ ಜೀವನವನ್ನು ಮೆಲುಕು ಹಾಕಿ ದರು.
ಶ್ರೀ ಶಾರದಾ ವೇದಿಕೆಯಲ್ಲಿ ನಡೆದ ಅಂಬೇಡ್ಕರ್ರವರ 124ನೇ ಜನ್ಮೋತ್ಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಸಂಘ ಮತ್ತು ಮಹಿಳಾ ಸಂಘದ ೨೦ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ರಾಜಕೀಯ ಅಧಿಕಾರವು ನಿಮ್ಮ ಸಾಮಾಜಿಕ ಅಭಿವೃದ್ಧಿಯ ಕೀಲಿ ಕೈ ಎಂದು ಸಾರಿದ ಅಂಬೇಡ್ಕರ್, ಸಮಾಜದಲ್ಲಿ ಬದಲಾವಣೆ ತರಲು ಹೋರಾಟ ನಡೆಸಿದರೂ ಹಲವಾರು ಕಾರಣಗಳಿಂದ ಹಿಂದುಳಿದ, ದಲಿತ ವರ್ಗದವರಿಗೆ ಮುಖ್ಯವಾಹಿನಿಗೆ ಬರಲಾಗಲಿಲ್ಲ ಎಂದು ಖೇದ ವ್ಯಕ್ತಪಡಿಸಿದ ಶಾಸಕರು, ಸರಕಾರ ಹಿಂದುಳಿದ ವರ್ಗಗಳಿಗೆ ಬಜೆಟ್ನಲ್ಲಿ ಶೇ.೨೪ ಅನುದಾನ ಮೀಸಲಿರಿಸಿದೆ. ಬೈಂದೂರಿನಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನಕ್ಕೆ ಸದ್ಯ ನೀಡಿದ ಅನುದಾವ ಕಡಿಮೆಯಗಿದ್ದು, ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ ಎಂದರು.
ಯಡ್ತರೆ ಗ್ರಾ.ಪಂ ಅಧ್ಯಕ್ಷ ಎನ್.ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಾಲಿಗ್ರಾಮ ಮೇಳದ ಭಾಗವತ ಆನಂದ ಅಂಕೋಲ, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕುಂದಾಪುರ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಮಂಜುನಾಥ ಶೆಟ್ಟಿ, ನ್ಯಾಯವಾದಿ ಯಶಸ್ವಿನಿ ಅಮೀನ್ ಬಿ., ಮಹಿಳಾ ಸಂಘದ ಅಧ್ಯಕ್ಷೆ ಆಶಾ ಜಿ. ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಲಕ್ಷಣ ಎಸ್. ಯಡ್ತರೆ ಸ್ವಾಗತಿಸಿ, ಕಾರ್ಯದರ್ಶಿ ಚೈತ್ರಾ ಯಡ್ತರೆ ವಂದಿಸಿದರು.
ಕಾರ್ಯದರ್ಶಿ ದಯಾನಂದ ಪಿ ಕಾರ್ಯಕ್ರಮ ನಿರೂಪಿಸಿದರು. ಅನಂತರ ಮಂಗಳೂರು ನವೋದಯ ಕಲಾವಿದರು ’ಸೌಮ್ಯಳ ನಂಬರ್ ಇದೆಯೇ’ ಎಂಬ ಹಾಸ್ಯಮಯ ನಾಟಕ ಪ್ರದರ್ಶಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.