ಬೆಳ್ತಂಗಡಿ : 26 ತಾ.ಪಂ. ಕ್ಷೇತ್ರಗಳನ್ನು ಹೊಂದಿರುವ ಬೆಳ್ತಂಗಡಿ ತಾಲೂಕಿನಲ್ಲಿ ಈ ಬಾರಿ ಬಿಜೆಪಿ 14 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿ ಮತ್ತೆ ತಾ.ಪಂ.ನ ಅಧಿಕಾರಕ್ಕೇರಲಿದೆ. ಕಾಂಗ್ರೇಸ್ ಪಕ್ಷ 12 ಸ್ಥಾನವನ್ನು ಪಡೆದು ಈ ಬಾರಿಯೂ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲಿದೆ.ಈ ಸಲ ಫಲಿತಾಂಶದಲ್ಲಿ ಬಿಜೆಪಿ 5 ಸ್ಥಾನವನ್ನು ಕಳೆದುಕೊಂಡಿದ್ದು ಕಾಂಗ್ರೇಸ್ 7 ಹೆಚ್ಚುವರಿ ಸ್ಥಾನವನ್ನು ಪಡೆದುಕೊಂಡಿರುವುದಲ್ಲದೆ ೨ ಹೊಸ ಕ್ಷೇತ್ರಗಳನ್ನೂ ಗೆದ್ದುಕೊಂಡಿದೆ. ಕಳೆದ ಬಾರಿ 24 ಕ್ಷೇತ್ರಗಳಲ್ಲಿ ಬಿಜೆಪಿ 19, ಕಾಂಗ್ರೇಸ್ 5 ಸ್ಥಾನಗಳನ್ನು ಪಡೆದುಕೊಂಡಿತ್ತು.
ಹಿಂದುಳಿದ ವರ್ಗ ಎ ಮಹಿಳೆ ಮೀಸಲಾತಿಇರುವ ನಾರಾವಿ ತಾ.ಪಂ. ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ರೂಪಲತಾ 3,026 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಯಶೋದ ವಿ ಅವರು 2754 ಮತಗಳನ್ನು ಪಡೆದಿದ್ದಾರೆ. ರೂಪಲತಾ ಅವರು 272 ಮತಗಳ ಅಂತರದಿಂದ ಗೆಲುವನ್ನು ಪಡೆದಿದ್ದಾರೆ. ಇಲ್ಲಿ 82 ನೋಟಾ ಮತಗಳು ದಾಖಲಾಗಿವೆ.
ಸಾಮಾನ್ಯ ಕ್ಷೇತ್ರವಾಗಿದ್ದ ವೇಣೂರಿನಲ್ಲಿ ತಾ.ಪಂ. ಸದಸ್ಯರಾಗಿದ್ದ ವಿಜಯಗೌಡ ಅವರು ಇದೀಗ ಮೂರನೇ ಬಾರಿಗೆಗೆಲುವನ್ನುಕಂಡಿದ್ದಾರೆ. ಅವರಿಗೆ 2676 ಮತಗಳು ಲಭಿಸಿದರೆ, ಪ್ರತಿಸ್ಪರ್ಧಿಕಾಂಗ್ರೇಸ್ನ ಸತೀಶ್ ಹೆಗ್ಡೆ ಅವರಿಗೆ 2,627 ಮತಗಳು ದೊರೆತವು. 49 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲುವನ್ನು ಕಂಡರೆ 99ನೋಟಾ ಮತಗಳು ಚಲಾವಣೆಯಾಗಿವೆ.
ಪರಿಶಿಷ್ಟ ಜಾತಿ ಮೀಸಲಾತಿ ಇರುವ ಹೊಸಂಗಡಿ ಕ್ಷೇತ್ರದಲ್ಲಿ ಕಾಂಗ್ರೇಸ್ನ ಓಬಯ್ಯ ಅವರು 3696 ಮತಗಳನ್ನು ಗಳಿಸಿ ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ದೇವಪ್ಪ ಅವರಿಗೆ 3,444 ಮತಗಳು ದೊರೆತಿದ್ದು 152 ಮತಗಳ ಅಂತರಿಂದಗೆಲುವನ್ನು ಪಡೆದಿದ್ದಾರೆ. ಇಲ್ಲಿ 112 ನೋಟಾ ಚಲಾವಣೆಯಾಗಿವೆ. ಹಿಂದುಳಿದ ವರ್ಗ ಎ. ಮಹಿಳಾ ಮೀಸಲಾತಿಯ ಅಳದಂಗಡಿ ಕ್ಷೇತ್ರದಲ್ಲಿಕಾಂಗ್ರೇಸ್ ವಿನೂಷಾ ಪ್ರಕಾಶ್ 2,791 ಮತಗಳನ್ನು ಗಳಿಸಿ ಗೆಲುವನ್ನು ಪಡೆದಿದ್ದಾರೆ.ಇವರ ಪ್ರತಿಸ್ಪರ್ಧಿ ಬಿಜೆಪಿಯ ಪುಷ್ಪಾವತಿಅವರಿಗೆ 2,665 ಮತಗಳನ್ನು ಗಳಿಸಿ 126 ಮತಗಳ ಅಂತರದಿಂದ ಸೋಲನ್ನುಕಂಡರು.ಇಲ್ಲಿ 218 ನೋಟಾಚಲಾವಣೆಯಾಗಿದ್ದು ಫಲಿತಾಂಶದ ಮೇಲೂ ಪ್ರಭಾವ ಬೀರಿದೆ.
ಸಾಮಾನ್ಯ ಕ್ಷೇತ್ರವಾಗಿರುವ ಅಂಡಿಂಜೆಯಲ್ಲಿ ಬಿಜೆಪಿ ಸುಧೀರ್ ಸುವರ್ಣ ಅವರು 2397 ಮತಗಳನ್ನು ಗಳಿಸಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೇಸ್ನ ಶುಭಕರ ಪೂಜಾರಿ 2200 ಮತಗಳನ್ನು ಗಳಿಸಿ 197 ಮತಗಳ ಅಂತರದಿಂದ ಸೋಲನ್ನು ಕಂಡಿದ್ದಾರೆ. ಜೆಡಿಯು ಅಭ್ಯರ್ಥಿ ಜೇಮ್ಸ್ 52 ಮತಗಳನ್ನು ಗಳಿಸಿದ್ದಾರೆ. 42 ನೋಟಾ ಮತಗಳು ಚಲಾವಣೆಯಾಗಿವೆ.
ಹಿಂದುಳಿದ ವರ್ಗ ಬಿ ಮಹಿಳಾ ಮೀಸಲಾತಿಯ ಶಿರ್ಲಾಲುವಿನಲ್ಲಿ ಕಾಂಗ್ರೇಸ್ನ ಜಯಶೀಲ ಕುಶಲಪ್ಪಗೌಡ ಅವರು 2450 ಮತಗಳನ್ನು ಗಳಿಸಿ ಪ್ರತಿಸ್ಪರ್ಧಿ ಬಿಜೆಪಿಯ ವೇದಾವತಿ ವಸಂತಗೌಡ (2348 ಮತ) ಅವರನ್ನು 102 ಮತಗಳ ಅಂತರದಿಂದ ಸೋಲಿಸಿದರು. ಇಲ್ಲಿ 129 ನೋಟಾಗಳು ಚಲಾವಣೆಯಾಗಿವೆ. ಸಾಮಾನ್ಯ ಮಹಿಳಾ ಮೀಸಲಾತಿಇರುವ ಪಡಂಗಡಿಕ್ಷೇತ್ರದಲ್ಲಿಕಾಂಗ್ರೇಸ್ನ ಸುಶೀಲಾ ಅವರು 3409 ಮತಗಳನ್ನು ಗಳಿಸಿ ವಿಜೇತರಾಗಿದ್ದಾರೆ. ಇಲ್ಲಿ ಬಿಜೆಪಿಯ ಉಮಾವತಿ ಅವರಿಗೆ 2683 ಮತಗಳನ್ನು ಲಭಿಸಿದ್ದು ಗೆಲುವಿನ ಅಂತರ 726 ಮತಗಳಾಗಿವೆ. ಇಲ್ಲಿ 132 ನೋಟಾಚಲಾವಣೆಯಾಗಿವೆ.
ಸಾಮಾನ್ಯ ಮೀಸಲಾತಿಇರುವ ಲಾಯಿಲ ಕ್ಷೇತ್ರದಲ್ಲಿ ಬಿಜೆಪಿಯ ಸುಧಾಕರ ಬಿ.ಎಲ್. ಅವರು 2040 ಮತಗಳನ್ನು ಗಳಿಸಿ ವಿಜೇತರಾಗಿದ್ದು ಕಾಂಗ್ರೇಸ್ನ ವಸಂತ ಸುವರ್ಣಅವರಿಗೆ 1615 ಮತಗಳು ಮಾತ್ರ ಲಭಿಸಿದ್ದು ಗೆಲುವಿನ ಅಂತರ 425 ಮತಗಳಾಗಿವೆ. ಇಲ್ಲಿ 50 ಮತಗಳು ಚಲಾವಣೆಯಾಗಿದೆ. ಜೆಡಿಯುವಿನ ಹರಿಶ್ಚಂದ್ರ ತಾಮನ್ಕಾರ್ ಅವರಿಗೆ 41 ಮತಗಳು ಲಭಿಸಿವೆ. ಪಕ್ಷೇತರ ಅಭ್ಯರ್ಥಿ ಅಶ್ರಫ್ ಅವರಿಗೆ 160 ಮತಗಳು ಲಭಿಸಿವೆ. ಮಹಿಳಾ ಮೀಸಲಾತಿ ಇರುವ ನಡದಲ್ಲಿ ಬಿಜೆಪಿಯ ವೇದಾವತಿ ಅವರು 3236 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಹೇಮಾವತಿ ಪಿ.ಗೌಡ (2947 ಮತ) ಅವರನ್ನು 284 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇಲ್ಲಿ 219 ನೋಟಾ ಮತಗಳು ಚಲಾವಣೆಯಾಗಿವೆ.
ಪರಿಶಿಷ್ಟ ಪಂಗಡ ಮೀಸಲಾತಿಇರುವ ಮಿತ್ತಬಾಗಿಲುವಿನಲ್ಲಿ ಕಾಂಗ್ರೇಸ್ನ ಜಯರಾಂ ಆಲಂಗಾರು ಅವರು 2521 ಮತಗಳನ್ನು ಗಳಿಸಿ ಗೆಲುವನ್ನು ಕಂಡಿದ್ದಾರೆ. ಬಿಜೆಪಿಯ ಆನಂದ ನಾಯ್ಕ ಅವರಿಗೆ 2504 ಮತಗಳು ಲಭಿಸಿದ್ದು 19 ಮತಗಳ ಅಂತರದಿಂದ ಸೋತಿದ್ದಾರೆ. ಇಲ್ಲಿ ಸಿಪಿಎಂನ ಚನಿಯಪ್ಪಅವರು 115 ಮತಗಳನ್ನು ಮಾತ್ರ ಪಡೆದಿದ್ದಾರೆ.ಇಲ್ಲಿ 109 ನೋಟಾ ಮತಗಳು ಚಲಾವಣೆಯಾಗಿದ್ದು ಫಲಿತಾಂಶವನ್ನು ನಿರ್ಧರಿಸುವಲ್ಲಿ ಮಹತ್ವದ ಮಾತ್ರ ವಹಿಸಿದೆ.
ಹಿಂದುಳಿದ ವರ್ಗ ಎ ಮೀಸಲಾತಿಯಉಜಿರೆಯಲ್ಲಿ ಬಿಜೆಪಿಯ ಎಂ.ಶಶಿಧರ್ ಅವರು 2291 ಮತಗಳನ್ನು ಗಳಿಸಿ ವಿಜೇತರಾಗಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೇಸ್ನ ಇಬ್ರಾಹಿಂಯು.ಎಚ್. ಅವರು 1948 ಮತಗಳನ್ನು ಗಳಿಸಿ 343 ಮತಗಳಿಂದ ಸೋಲನ್ನು ಕಂಡಿದ್ದಾರೆ. ಪಕ್ಷೇತರ ರವಿಕುಮಾರ್ ಬರಮೇಲು ಅವರು 1920 ಮತಗಳನ್ನು ಗಳಿಸಿ ಪ್ರಬಲ ತ್ರಿಕೋನ ಸ್ಪರ್ಧೆ ನೀಡಿದ್ದಾರ. ಇಲ್ಲಿ 128 ನೋಟಾ ಚಲಾವಣೆಯಾಗಿವೆ.
ಪರಿಶಿಷ್ಟ್ ಪಂಗಡ ಮಹಿಳಾ ಮೀಸಲಾತಿಇರುವ ಮುಂಡಾಜೆಕ್ಷೇತ್ರದಲ್ಲಿ ಬಿಜೆಪಿಯ ಲೀಲಾವತಿ ಬಾಲಕೃಷ್ಣ 1327 ಮತಗಳನ್ನು ಗಳಿಸಿ ಪ್ರತಿಸ್ಪರ್ಧಿ ಕಾಂಗ್ರೇಸ್ನ ಪದ್ಮಾವತಿ ಪ್ರಭಾಕರ್ ಅವರನ್ನು 46 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಇಲ್ಲಿ ಕಾಂಗ್ರೇಸ್ ಅಭ್ಯರ್ಥಿಗೆ 1331 ಮತಗಳು ಲಭಿಸಿವೆ. ಜನತಾ ದಳದ ಅರುಣಾಕುಮಾರಿಅವರು 178 ಮತಗಳನ್ನು ಗಳಿಸಿದ್ದಾರೆ. ಇಲ್ಲಿ 121 ಚಲಾವಣೆಯಾಗಿದ್ದು ಫಲಿತಾಂಶದ ಮೇಲೆ ಪ್ರಭಾವ ಬೀರಿದೆ.
ಸಾಮಾನ್ಯ ಕ್ಷೇತ್ರ ಚಾರ್ಮಾಡಿಯಲ್ಲಿ ಬಿಜೆಪಿಯ ಕೊರಗಪ್ಪಗೌಡ ಅವರು 2304 ಮತಗಳನ್ನು ಗಳಿಸಿ ಕಾಂಗ್ರೇಸ್ನಯಶೋದರ (1967 ಮತಗಳು) ಅವರನ್ನು 347 ಮತಗಳ ಅಂತರದಿಂದ ಸೋಲಿಸಿದ್ದಾರೆ. ಪಕ್ಷೇತರ ಅಬ್ದುಲ್ ರಹೀಮ್ಅವರಿಗೆ 679 ಮತಗಳು ದೊರೆತರೆ ಎಸ್ಡಿಪಿಐ ಅಭ್ಯರ್ಥಿ ಹೈದರ್ ಅವರಿಗೆ 457 ಮತಗಳು, ಇನ್ನೊಬ್ಬ ಪಕ್ಷೇತರ ಆನಂದ ಮೊಗೇರ 101 ಮತಗಳನ್ನು ಗಳಿಸಿದ್ದಾರೆ. 39 ನೋಟಾ ಚಲಾವಣೆಯಾಗಿವೆ.
ಸಾಮಾನ್ಯ ಕ್ಷೇತ್ರವಾಗಿರುವ ನೆರಿಯದಲ್ಲಿ ಕಾಂಗ್ರೇಸ್ನ ವಿ.ಟಿ.ಸೆಬಾಸ್ಪಿನ್ ಅವರು 2711 ಮತಗಳನ್ನು ಗಳಿಸಿ ಬಿಜೆಪಿಯ ಸುಲೋಚನಾ (1609ಮತಗಳು) ಅವರನ್ನು 1106 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಇದು ತಾಲೂಕಿನಲ್ಲಿ ಅತೀ ಹೆಚ್ಚು ಅಂತರದಗೆಲುವಾಗಿದೆ. ಸಿಪಿಐಎಂನ ವಸಂತ ನಡ ಅವರಿಗೆ 584 ಮತಗಳು ಲಭಿಸಿವೆ. ಇಲ್ಲಿ 86 ನೋಟಾ ಮತಗಳು ಚಲಾವಣೆಯಾಗಿವೆ.
ಹಿಂದುಳಿದ ವರ್ಗ ಎ ಮಹಿಳಾ ಮೀಸಲಾತಿ ಇರುವ ಧರ್ಮಸ್ಥಳ ಕ್ಷೇತ್ರದಲ್ಲಿ ಜಿ.ಪಂ. ಮಾಜಿಉಪಧ್ಯಕ್ಷೆ ಧನಲಕ್ಷ್ಮೀಜನಾರ್ದನ ಅವರು 1769 ಮತಗಳನ್ನು ಗಳಿಸಿ ತಾ.ಪಂ.ಗೆ ಆಯ್ಕೆಯಾಗಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೇಸ್ನ ಸುರೇಖಾ ಅವರನ್ನು( 1339 ಮತ) 430 ಮತಗಳ ಅಂತರದಿಂದ ಸೋಲಿಸಿದ್ದಾರೆ. ಪಕ್ಷೇತರಅಭ್ಯರ್ಥಿ ಸುನಿತಾ 798 ಮತಗಳನ್ನು ಗಳಿಸಿದ್ದಾರೆ. ಸಿಪಿಎಂಐ ಅಭ್ಯರ್ಥಿ 497 ಮತಗಳನ್ನು ಪಡೆದಿದ್ದಾರೆ.
ಹಿಂದುಳಿದ ವರ್ಗ ಎ ಮೀಸಲಾತಿಇರುವಕೊಕ್ಕಡದಲ್ಲಿ ಬಿಜೆಪಿಯ ಲಕ್ಷ್ಮೀನಾರಾಯಣ ೨೯೪೫ ಮತಗಳನ್ನು ಗಳಿಸಿ ವಿಜೇತರಾಗಿದ್ದಾರೆ.ಇವರ ಸಮೀಪದ ಪ್ರತಿಸ್ಪರ್ಧಿಕಾಂಗ್ರೇಸ್ನದಯಾನಂದಅವರಿಗೆ ೨೨೬೭ ಮತಗಳು ಲಭಿಸಿದ್ದು ೬೭೮ ಮತಗಳ ಅಂತರದಿಂದ ಸೋಲನ್ನುಕಂಡಿದ್ದಾರೆ.ಸಿಪಿಐಎಂನ ಮಹಮ್ಮದ್ಅನಸ್ ೧೦೩೭ ಮತಗಳನ್ನು ಗಳಿಸಿದ್ದಾರೆ.ಇಲ್ಲಿ ೧೬೧ ನೋಟಾ ಮತಗಳು ಚಲಾವಣೆಯಾಗಿವೆ.
ಸಮಾನ್ಯ ಮಹಿಳಾ ಮೀಸಲಾತಿ ಇರುವ ಕಳೆಂಜ ಕ್ಷೇತ್ರದಲ್ಲಿ ಬಿಜೆಪಿಯ ಸುಶೀಲಾ ವಸಂತಗೌಡ ಅವರು 1644 ಮತಗಳನ್ನು ಗಳಿಸಿ ವಿಜೇತರಾಗಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೇಸ್ನ ಯಶೋದಾ ಅವರಿಗೆ 1512 ಮತಗಳು ಲಭಿಸಿದ್ದು 132 ಮತಗಳ ಅಂತರದಿಂದ ಸೋಲನ್ನು ಕಂಡರು. ಸಿಪಿಐಎಂನ ಜಯಂತಿ ಅವರಿಗೆ 645 ಮತಗಳು ಲಭಿಸಿವೆ. ಇಲ್ಲಿ 101 ನೋಟಾ ಚಲಾವಣೆಯಾಗಿವೆ.
ಅನಸೂಚಿತಜಾತಿ ಮಹಿಳಾ ಮೀಸಲಾತಿಇರುವ ಅರಸಿನಮಕ್ಕಿಯಲ್ಲಿ ಕಾಂಗ್ರೇಸ್ನ ದಿವ್ಯಜ್ಯೋತಿಅವರು ೨೧೪೩ ಮತಗಳನ್ನು ಗಳಿಸಿ ವಿಜೇತರಾಗಿದ್ದಾರೆ.ಬಿಜೆಪಿಯ ಬೇಬಿ ರಾಣ್ಯಅವರಿಗೆ ೨೦೬೨ ಮತಗಳು ಲಭಿಸಿವೆ. ಸಿಪಿಐಎಂನ ಮಮತಾಅವರಿಗೆ ೨೯೩ ಮತಗಳು ಲಭಿಸಿವೆ. ೧೧೮ ನೋಟಾ ಮತಗಳು ಚಲಾವಣೆಯಾಗಿವೆ.ಮಹಿಳಾ ಮೀಸಲಾತಿಯಉರುವಾಲು ವಿನಲ್ಲಿ ಬಿಜೆಪಿಯಅಮಿತಾ ಕುಶಾಲಪ್ಪಗೌಡಅವರು ೨೨೧೦ ಮತಗಳನ್ನು ಗಳಿಸಿ ಕಾಂಗ್ರೇಸ್ನ ಹೇಮಲತಾ ನಾರಾಯಣಗೌಡಅವರನನು ೩೫೨ ಮತಗಳ ಅಂತರದಿಂದ ಸೋಲಿಸಿದ್ದಾರೆ. ಹೇಮಲತಾಅವರಿಗೆ ೧೮೫೩ ಮತಗಳು ಲಭಿಸಿವೆ. ಇಲ್ಲಿ ೮೫ ನೋಟಾ ಮತಗಳು ಚಲಾವಣೆಯಾಗಿವೆ.
ಹಿಂದುಳಿದ ವರ್ಗ ಎ ಮೀಸಲಾತಿಇರುವ ಇಳಂತಿಲದಲ್ಲಿ ಬಿಜೆಪಿಯ ಕೃಷ್ಣಯ್ಯ ಅವರು 3446 ಮತಗಳನ್ನು ಗಳಿಸಿ ಕಾಂಗ್ರೇಸ್ನ ಮನೋಹರ ಕುಮಾರ್ 2856 ಮತಗಳನ್ನುಗಳಿಸಿ 588 ಮತಗಳ ಅಂತರದಿಂದ ಸೋಲನ್ನು ಕಂಡಿದ್ದಾರೆ. ಇಲ್ಲಿ 144 ನೋಟಾ ಚಲಾವಣೆಯಾಗಿದೆ. ಮಹಿಳಾ ಮೀಸಲಾತಿಯ ತಣ್ಣೀರುಪಂತದಲ್ಲಿ ಕಾಂಗ್ರೇಸ್ನ ಕೇಶವ ಟಿ. 2155 ಮತಗಳನ್ನುಗಳಿಸಿ ವಿಜೇತರಾಗಿದ್ದಾರೆ. ಪ್ರತಿಸ್ಪರ್ಧಿ ತಾ.ಪಂ. ಅಧ್ಯಕ್ಷೆ ಜಯಂತಿ ಪಾಲೇದು ಅವರಿಗೆ ಕೇವಲ1695 ಮತಗಳು ಮಾತ್ರ ಲಭಿಸಿದ್ದು 640 ಮತಗಳ ಅಂತರದಿಂದ ಸೋಲನ್ನು ಕಂಡರು. ಎಸ್ಡಿಪಿಐಯ ಮರಿಯಮ್ಮ ಅವರಿಗೆ 630 ಮತಗಳು ಲಭಿಸಿವೆ. ಇಲ್ಲಿ 53 ನೋಟಾಗಳು ಚಲಾವಣೆಯಾಗಿವೆ.
ಮಹಿಳಾ ಮೀಸಲಾತಿಯ ಬಾರ್ಯದಲ್ಲಿ ಕಾಂಗ್ರೇಸ್ನ ಸುಜಾತಾ ನವೀನ ರೈಅವರು 2990 ಮತಗಳನ್ನು ಗಳಿಸಿ ವಿಜೇತರಾಗಿದ್ದಾರೆ. ಪ್ರತಿಸ್ಪರ್ಧಿ ಹೇಮಾವತಿ ಅವರಿಗೆ 2028 ಮತಗಳು ಲಭಿಸಿದ್ದು 962 ಮತಗಳ ಅಂತರದಿಂದ ಸೋಲನ್ನು ಕಂಡಿದ್ದಾರೆ. ಇಲ್ಲಿ 91 ನೋಟಾ ಮತಗಳು ಚಲಾವಣೆಯಾಗಿವೆ. ಸಾಮಾನ್ಯ ಕ್ಷೇತ್ರವಾಗಿರುವ ಮಾಲಾಡಿಯಲ್ಲಿ ಬಿಜೆಪಿಯ ಜೊಯೆಲ್ ಮೆಂಡೊನ್ಸಾ ಅವರು 2066 ಮತಗಳನ್ನು ಗಳಿಸಿ ಕಾಂಗ್ರೇಸ್ನ ಪದ್ಮನಾಭ ಸಾಲಿಯಾನ್ 1610 ಮತ ಸಿಕ್ಕಿದ್ದು ಅವರು 1456 ಮತಗಳ ಅಂತರದಿಂದ ಸೋಲಿಸಿದ್ದಾರೆ. ಎಸ್ಡಿಪಿಐಯ ಶಬೀರ್ಅವರಿಗೆ 78 ಮತಗಳು ಲಭಿಸಿದ್ದು 44 ನೋಟಾ ಚಲಾವಣೆಯಾಗಿವೆ.
ಹಿಂದುಳಿದ ವರ್ಗ ಎ ಮಹಿಳಾ ಮೀಸಲಾತಿಯ ಮಡಂತ್ಯಾರುವಿನಲ್ಲಿ ಬಿಜೆಪಿಯ ವಸಂತಿ ಲಕ್ಷ್ಮಣಕುಲಾಲ್ 3156 ಮತಗಳನ್ನುಗಳಿಸಿ ಗೆಲುವನ್ನುಕಂಡಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೇಸ್ನ ಬೇಬಿ ವಸಂತ ಪೂಜಾರಿಅವರಿಗೆ 2672 ಮತಗಳು ಲಭಿಸಿದ್ದು 484 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ. ಇಲ್ಲಿ 107 ನೋಟಾ ಮತಗಳು ಬಿದ್ದಿವೆ.
ಸಾಮಾನ್ಯ ಕ್ಷೇತ್ರ ಕುವೆಟ್ಟುವಿನಲ್ಲಿ ಕಾಂಗ್ರೇಸ್ನ ಗೋಪಿನಾಥ್ ನಾಯಕ್ 2323 ಮತಗಳಿಂದ ಪ್ರತಿಸ್ಪರ್ಧಿ ಬಿಜೆಪಿಯ ಪ್ರಭಾಕರ ಉಪ್ಪಡ್ಕ ಅವರನ್ನು 29 ಮತಗಳ ಅಂತರದಿಂದ ಪರಾಜಿತಗೊಳಿಸಿದ್ದಾರೆ ಇಲ್ಲಿ ಉಪ್ಪಡ್ಕ ಅವರಿಗೆ 2284 ಮತಗಳು ಲಭಿಸಿವೆ. ಎಸ್ಡಿಪಿಐನ ಅಬ್ದುಲ್ ರಜಾಕ್ ಅವರಿಗೆ 879 ಮತಗಳು ಲಭಿಸಿವೆ. 63 ನೋಟಾ ಚಲಾವಣೆಯಾಗಿವೆ.
ಹಿಂದುಳಿದ ವರ್ಗ ಬಿ ಮೀಸಲಾತಿಯ ಕಳಿಯದಲ್ಲಿ ಕಾಂಗ್ರೇಸ್ನ ಪ್ರವೀಣ್ಗೌಡ ಅವರು 2812 ಮತಗಳನ್ನು ಗಳಸಿ ಪ್ರತಿಸ್ಪರ್ಧಿ ಬಿಜೆಪಿಯ ದಾಮೋದರ ಗೌಡ ಅವರಿಗೆ 2521 ಮತಗಳು ಲಭಿಸಿದ್ದು ಅವರು 291 ಮತಗಳ ಅಂತರದಿಂದ ಸೋತಿದ್ದಾರೆ. ಇಲ್ಲಿ 138 ನೋಟಾಚಲಾವಣೆಯಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.