ಬೆಳ್ತಂಗಡಿ : ತಾಲೂಕಿನ 7 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ 3 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ 4 ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷಜಯಭೇರಿ ಬಾರಿಸಿದೆ. ಈ ಬಾರಿಯ ಜಿ.ಪಂ. ಚುನಾವಣೆಯಲ್ಲಿ ಕಳೆದ ಫಲಿತಾಂಶಕ್ಕೆ ಹೋಲಿಸಿದರೆ ಬಿಜೆಪಿ 3 ಸ್ಥಾನಗಳನ್ನು ಕಳೆದುಕೊಂಡಿದ್ದು ಕಾಂಗ್ರೇಸ್ 4 ಸ್ಥಾನಗಳನ್ನು ಗಳಿಸಿಕೊಂಡಿದೆ. ಕಳೆದ ಚುನಾವಣೆಯಲ್ಲಿ ತಾಲೂಕಿನಲ್ಲಿ 6 ಜಿ.ಪಂ. ಕ್ಷೇತ್ರಗಳಿದ್ದವು. ಹೊಸ ಕ್ಷೇತ್ರವನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ.
ನಾರಾವಿ ಕ್ಷೇತ್ರವು ಹಿಂದುಳಿದ ಅ ವರ್ಗಕ್ಕೆ ಸೇರಿದ್ದು ಇಲ್ಲಿ ಕಾಂಗ್ರೇಸ್ ಅಭ್ಯರ್ಥಿ ಪಿ.ಧರಣೇಂದ್ರ ಕುಮಾರ್ ಅವರು 11620 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿ ತಾ.ಪಂ. ಸದಸ್ಯರಾಗಿದ್ದ ಬಿಜೆಪಿಯ ಜಯಂತ್ ಕೋಟ್ಯಾನ್ ಅವರು 11168 ಮತಗಳನ್ನು ಪಡೆದರು. ಗೆಲುವಿನ ಅಂತರ 452 ಮತಗಳು. ಇಲ್ಲಿ ನೇರ ಸ್ಪರ್ಧೆ ನಡೆದಿತ್ತು. ಧರಣೇಂದ್ರ ಅವರು ಈ ಹಿಂದೆ ಜಿ.ಪಂ. ಉಪಾಧ್ಯಕ್ಷರಾಗಿದ್ದು ಪ್ರಸ್ತುತ ಬೆಳ್ತಂಗಡಿ ಎಪಿಎಂಸಿಯ ಅಧ್ಯಕ್ಷರಾಗಿದ್ದಾರೆ.
ಅನುಸೂಚಿತ ಜಾತಿಗೆ ಮೀಸಲಿರಿಸಿದ ಕ್ಷೇತ್ರವಾದ ಅಳದಂಗಡಿಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಶೇಖರ ಕುಕ್ಕೇಡಿ ಅವರು 8102 ಮತಗಳನ್ನು ಪಡೆದು ವಿಜಯಯಿಯಾಗಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಸದಾಶಿವ ಕುಮಾರ್ಅವರು 7187 ಮತಗಳನ್ನು ಪಡೆದಿದ್ದಾರೆ. ಗೆಲುವಿನ ಅಂತರ 915 ಮತಗಳು. ಇಲ್ಲಿ ಜೆಡಿಎಸ್ ಹಾಗೂ ಮೂವರು ಪಕ್ಷೇತರಅಭ್ಯರ್ಥಿ ಸ್ಪರ್ಧಿಸಿದ್ದರು.
ಮಹಿಳೆಯರಿಗಾಗಿ ಮೀಸಲಿರಿಸಿದ ಲಾಯಿಲ ಕ್ಷೇತ್ರದಲ್ಲಿ ಬಿಜೆಪಿಯ ಸೌಮ್ಯಲತಾ ಜಯಂತ ಗೌಡ ಅವರು 7734 ಮತಗಳನ್ನು ಗಳಿಸಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೇಸ್ನ ಶೋಭಾ ನಾರಾಯಣ ಗೌಡ ಅವರಿಗೆ 6885 ಮತಗಳು ದೊರೆತಿವೆ. ಗೆಲುವಿನ ಅಂತರ 849 ಮತಗಳು. ಇಲ್ಲಿ ಜೆಡಿಎಸ್ ಹಾಗೂ ಒರ್ವ ಪಕ್ಷೇತರಅಭ್ಯರ್ಥಿ ಸ್ಪರ್ಧಿಸಿದ್ದರು.
ಮಹಿಳೆಯರಿಗಾಗಿ ಮೀಸಲಿರಿಸಿದ ತಾಲೂಕಿನ ಇನ್ನೊಂದು ಕ್ಷೇತ್ರ ಉಜಿರೆಯಲ್ಲಿ ಕಾಂಗ್ರೇಸ್ನ ನಮಿತಾ ಕೆ. ೯೫೧೬ ಮತಗಳನ್ನು ಗಳಿಸಿ ಜಿ.ಪಂ.ಪ್ರವೇಶಿಸಲು ಸಿದ್ದರಾಗಿದ್ದಾರೆ. ಪ್ರತಿಸ್ಪರ್ಧಿ ಉಜಿರೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಬಿಜೆಪಿಯ ಮಂಜುಳಾ ಉಮೇಶ್ ಅವರಿಗೆ ೯೩೨೮ ಮತಗಳು ಸಿಕ್ಕಿವೆ. ಗೆಲುವಿನ ಅಂತರ ೧೮೮ ಮತಗಳು.ಇಲ್ಲಿ ನೇರ ಸ್ಪರ್ಧೆ ನಡೆದಿತ್ತು.
ಅನುಸೂಚಿತ ಪಂಗಡಕ್ಕೆ ಮೀಸಲಾಗಿದ್ದ ಧರ್ಮಸ್ಥಳ ಕ್ಷೇತ್ರದಲ್ಲಿಜಿ.ಪಂ. ಮಾಜಿಅಧ್ಯಕ್ಷಕೊರಗಪ್ಪ ನಾಯ್ಕ ಅವರು 9137 ಮತಗಳನ್ನು ಪಡೆದು ಈ ಬಾರಿಯೂ ಜಿ.ಪಂ.ನ್ನು ಪ್ರವೇಶಿಸಲು ಸಿದ್ದರಾಗಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೇಸ್ ರಮೇಶ್ ಬಿ. ಅವರು 7309 ಮತಗಳನ್ನು ಪಡೆದಿದ್ದಾರೆ. ಗೆಲುವಿನ ಅಂತರ 1828. ಇಲ್ಲಿ ಸಿಪಿಐ(ಎಂ) ಹಾಗೂ ಪಕ್ಷೇತರಅಭ್ಯರ್ಥಿ ಸ್ಪರ್ಧಿಸಿದ್ದರು.
ಸಾಮಾನ್ಯ ಕ್ಷೇತ್ರವಾದ ಕಣಿಯೂರು ಕ್ಷೇತ್ರದಿಂದ ಜಿ.ಪಂ. ಮಾಜಿ ಸದಸ್ಯ ಶಾಹುಲ್ ಹಮೀದ್ ಕೆ.ಕೆ. ಅವರು 9910 ಮತಗಳನ್ನು ಗಳಿಸಿ ಈ ಬಾರಿ ಮತ್ತೆ ಜಿ.ಪಂ.ನ್ನು ಪ್ರವೇಶಿಸಲಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಸುಬ್ರಹ್ಮಣ್ಯ ಕುಮಾರ್ತ ಅಗರ್ತ ಅವರಿಗೆ 9787 ಮತಗಳು ದೊರೆತಿವೆ. ಗೆಲುವಿನ ಅಂತರ 121 ಮತಗಳು. ಇಲ್ಲಿ ಜೆಡಿಯು ಅಭ್ಯರ್ಥಿ ಸ್ಪರ್ಧಿಸಿದ್ದರು.
ಮಹಿಳೆಯರಿಗೆ ಮೀಸಲಾಗಿದ್ದ ಮತ್ತೊಂದು ಕ್ಷೇತ್ರವಾದ ಕುವೆಟ್ಟುನಲ್ಲಿ ತಾ.ಪಂ. ಮಾಜಿ ಅಧ್ಯಕ್ಷೆ ಮಮತಾ ಎಂ. ಶೆಟ್ಟಿ 10501 ಮತಗಳನ್ನು ಪಡೆದು ಜಿ.ಪಂ. ಪ್ರವೇಶಿಸಲಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೇಸ್ನ ಶರಲ್ ನೊರೋನ್ನಾ ಅವರಿಗೆ 9278 ಮತಗಳು ಲಭಿಸಿವೆ. ಗೆಲುವಿನ ಅಂತರ 1223. ಇಲ್ಲಿ ಜೆಡಿಯು ಹಾಗೂ ಓರ್ವ ಪಕ್ಷೇತರಅಭ್ಯರ್ಥಿ ಸ್ಪರ್ಧಿಸಿದ್ದರು. ಇದು ಹೊಸ ಕ್ಷೇತ್ರ. ಜಿ.ಪಂ.ಗೆ ನಡೆದ ಚುನಾವಣೆಯಲ್ಲಿ 93 ಮತಗಳು ಅಸಿಂಧುವಾಗಿದ್ದರೆ 3076 ನೋಟಾಗೆ ಮತಗಳು ದಾಖಲಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.